ಕೋಲಾರ:ವಾಲಿಬಾಲ್​ ಆಟವಾಡಲು ಹೋದ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಘರ್ಷಣೆಯಲ್ಲಿ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಮೂವರಿಗೆ ಚಾಕುವಿನಿಂದ ಇರಿದಿದ್ದಾರೆ.
ಕೆ.ಬಿ.ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಈ ದುರ್ಘಟನೆ ನಡೆದಿದ್ದು, ಇರಿತಕ್ಕೊಳಗಾದ ಮಂಜುನಾಥ್ (38), ಅಮರೇಶ್ (28) ಮತ್ತು ಮಣಿ (24) ಅವರ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿರಿಪುತ್ರನ ಮದುವೆ ಹಣ ಹೊಂದಿಸಲು ಹೊರಟ, ಮತಿ ತಪ್ಪಿ ಮೈಸೂರು ತಲುಪಿದ!
ಎಂದಿನಂತೆ ವಾಲಿಬಾಲ್​ ಆಟವಾಡಲು ಬಂದ ಎರಡು ಗುಂಪುಗಳ ನಡುವೆ ಆಟದ ಅಂಗಣ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ವಿನೋದ್, ಮಂಜುನಾಥ್, ಮುತ್ತು, ಮುನಿಯಪ್ಪ ಮತ್ತು ರಾಜಣ್ಣ ಎಂಬುವವರು ಕಾರದ ಪುಡಿ ಎರಚಿ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾರೆ.
ಇರಿತಕ್ಕೊಳಗಾದವರಿಗೆ ಬೆನ್ನು, ಹೊಟ್ಟೆ ಹಾಗೂ ಕಿಡ್ನಿ ಬಳಿ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿಹಣಕ್ಕಾಗಿ ಯುವತಿಯರನ್ನು ಕೂಡಿ ಹಾಕಿದ ಪಿಜಿ ಮಾಲೀಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + five =
Remember me
