ಕೋಲಾರ:ಕೆಲಸ ಮಾಡುವ ಜಾಗದಲ್ಲಿ ಮಾಡಬಾರದ್ದು ಮಾಡಲು ಹೋಗಿ ಮೂವರು ಪೊಲೀಸರು ಫಜೀತಿಗೆ ಸಿಲುಕಿದ್ದಲ್ಲದೆ, ಈಗ ಅಮಾನತಿಗೂ ಒಳಗಾಗಿದ್ದಾರೆ. ಹೀಗೆ ತಮ್ಮ ದುಷ್ಕೃತ್ಯದ ಆ ವಿಡಿಯೋ ವೈರಲ್ ಆಗಿದ್ದು, ಅವರು ಮುಖಭಂಗಕ್ಕೆ ಒಳಗಾಗಿದ್ದಲ್ಲದೆ, ಸಸ್ಪೆಂಡ್ ಕೂಡ ಆಗಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಪೊಲೀಸ್ ಕಾನ್​ಸ್ಟೆಬಲ್​ಗಳಾದ ಚಲಪತಿ, ಮಂಜುನಾಥ್ ಹಾಗೂ ರಮೇಶ್ ಬಾಬು ಅವರನ್ನು ಕೋಲಾರ ಎಸ್​ಪಿ ಅಮಾನತುಗೊಳಿಸಿದ್ದಾರೆ.
ಈ ಮೂವರು ಪೊಲೀಸ್ ಕಾನ್​ಸ್ಟೆಬಲ್​ಗಳು ಠಾಣೆಯಲ್ಲೇ ಮದ್ಯಪಾನ ಮಾಡಿದ್ದರು. ಮಾತ್ರವಲ್ಲದೆ ಅದನ್ನು ವಿಡಿಯೋ ಕೂಡ ಮಾಡಿದ್ದರು. ಆ ವಿಡಿಯೋ ವೈರಲ್​ ಆಗಿದ್ದು, ಪೊಲೀಸರ ನಡೆ ಸಾರ್ವಜನಿಕರಿಂದ ತೀವ್ರ ಟೀಕೆಗೂ ಗುರಿಯಾಗಿತ್ತು. ಹೀಗಾಗಿ ಚಲಪತಿ, ಮಂಜುನಾಥ್ ಜತೆಗೆ ವಿಡಿಯೋ ಮಾಡಿದ್ದ ರಮೇಶ್ ಬಾಬುವನ್ನು ಕೂಡ ಅಮಾನತುಗೊಳಿಸಲಾಗಿದೆ. ಅಂದಹಾಗೆ ಇದು ಒಂದೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ. ಆದರೆ ಆ ವಿಡಿಯೋ ವೈರಲ್​ ಆಗಿದ್ದರಿಂದ ಈ ಪೇದೆಗಳು ಸಸ್ಪೆಂಡ್ ಆಗುವಂತಾಗಿದೆ.
ಸಾರ್ವಜನಿಕರನ್ನು ಕಚೇರಿ ಹೊರಗೆ ಕಾಯಿಸಿ, ಒಳಗೆ ಜನ್ಮದಿನ ಆಚರಿಸಿಕೊಂಡ ಎ.ಸಿ.!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 − 10 =
Remember me
