ಬೆಂಗಳೂರು:ಕೋವಿಡ್ ಸೋಂಕಿನಿಂದ ನಗರದ ಆಸ್ಟರ್ ಸಿಎಂಐ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲಾಗಿದ್ದ 51 ವರ್ಷದ ಮಹಿಳೆ ಮೂರು ಬಾರಿ ಸಂಭವಿಸಿದ ಹೃದಯಾಘಾತದಿಂದ ಚೇತರಿಸಿಕೊಂಡಿದ್ದಾರೆ.
ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಹಿಳೆ ರಕ್ತ ಹೀನತೆ (ನ್ಯುಮೋನಿಯಾ) ದಿಂದ ಬಳಲುತ್ತಿದ್ದರು, ಅಧಿಕ ಬೊಜ್ಜು, ಅಸ್ತಮಾ ಇನ್ನಿತರ ಅನಾರೋಗ್ಯಗಳಿಂದ ಸ್ಥಿತಿ ತೀವ್ರ ಗಂಭೀರವಾಗಿತ್ತು. ಆದ್ದರಿಂದ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ದಾಖಲಾದ ಮೊದಲ ಎರಡು ಗಂಟೆಗಳಲ್ಲಿಯೇ ಅವರಿಗೆ ಮೂರು ಬಾರಿ ಹೃದಯಾಘಾತವಾಗಿ ಬದುಕುಳಿಯುವ ಸಾಧ್ಯತೆ ತೀರಾ ಕ್ಷೀಣಿಸಿತ್ತು. ಕೃತಕ ಉಸಿರಾಟ ಹಾಗೂ ಜೀವರಕ್ಷಕ ಸಾಧನಗಳ ಮೂಲಕ ಚಿಕಿತ್ಸೆ ನೀಡಲಾಯಿತು.
ಇದನ್ನೂ ಓದಿ:ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ​₹10 ಕೋಟಿ! ಬ್ಯಾಲೆನ್ಸ್​ ಕೇಳಿ ಮೂರ್ಛೆ ಹೋದ ಅಮ್ಮ-ಮಗಳು
20 ದಿನ ಕೃತಕ ಉಸಿರಾಟದಲ್ಲಿದ್ದ ಮಹಿಳೆ ನಿಧಾನವಾಗಿ ಚೇತರಿಸಿಕೊಂಡಿದ್ದು, ಪುನಶ್ಚೇತನ ಕೇಂದ್ರದಲ್ಲಿ ಆರೈಕೆ ಮಾಡಲಾಯಿತು. ಇದೀಗ ಮಹಿಳೆ ಗುಣಮುಖರಾಗಿದ್ದು, ಮನೆ ಆರೈಕೆಯಲ್ಲಿದ್ದಾರೆ. ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ವಿಡಿಯೊ ಕರೆ ಮೂಲಕ ಆರೋಗ್ಯ ವಿಚಾರಿಸಲಾಗುತ್ತಿದೆ ಎಂದು ಸಿಎಂಐ ಆಸ್ಪತ್ರೆಯ ಅರಿವಳಿಕೆ ವಿಭಾಗ ಹಿರಿಯ ಸಹಾಯಕ ತಜ್ಞ ಡಾ. ಪ್ರಕಾಶ್ ದೊರೆಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ:ರಾಗಿಣಿ ಗೆಳೆಯನ ಮಾಜಿ ಪತ್ನಿಗೂ ಸಿಸಿಬಿ ನೋಟಿಸ್​
ಜ್ವರ ಕಾಣಿಸಿಕೊಂಡಾಗ ಸಾಮಾನ್ಯ ವೈರಾಣು ಜ್ವರ ಎಂದು ತಿಳಿದಿದ್ದೆವು. ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ವೈದ್ಯರು ಕೋವಿಡ್ ಪರೀಕ್ಷೆಗೆ ಸೂಚಿಸಿದರು ವರದಿ ಬರುವ ಮುನ್ನವೇ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಸೋಂಕು ದೃಢಪಟ್ಟ ಬಳಿಕ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ವೈದ್ಯರ ಪರಿಶ್ರಮದಿಂದ ಅತ್ತೆ ಚೇತರಿಸಿಕೊಂಡಿದ್ದಾರೆ ಎಂದು ಮಹಿಳೆಯ ಅಳಿಯ ಸಂತಸ ವ್ಯಕ್ತಪಡಿಸಿದರು.
ಬರೋಬ್ಬರಿ 1.17 ಕೋಟಿ ರೂಪಾಯಿ ಮೌಲ್ಯದ ಕಳ್ಳನೋಟು, 1.2 ಕಿಲೋ ತೂಕದ ಚಿನ್ನದ ಬಿಸ್ಕೆಟ್ಸ್ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 3 =
Remember me
