ಮೂರು ವರ್ಷದ ಮಗುವಿಗೆ ಮಲತಂದೆ ಚಿತ್ರಹಿಂಸೆ, ಸಿಗರೇಟ್ ಸುಟ್ಟು, ಗುಪ್ತಾಂಗ ಕಚ್ಚಿ ವಿಕೃತಿ*ವಿಜಯವಾಣಿ ಸುದ್ದಿಜಾಲ : ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದಲ್ಲಿ ಮಲತಂದೆಯೊಬ್ಬ ಮೂರು ವರ್ಷದ ಹೆಣ್ಣು ಮಗುವನ್ನು ಸಿಗರೇಟ್ ನಿಂದ ಸುಟ್ಟು, ಗುಪ್ತಾಂಗವನ್ನು ಕಚ್ಚಿ ಚಿತ್ರಹಿಂಸೆ ನೀಡಿದ ವಿಕೃತಿ ಮೆರೆದಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಗೌರಿಬಿದನೂರು ನಗರದ ಅಜ್ಮಂತ್ (೪೨) ಮಲಮಗಳ ಮೇಲೆ ಮೃಗೀಯ ರೀತಿಯಲ್ಲಿ ವರ್ತಿಸಿರುವ ತಂದೆ. ಈತನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.*ಪ್ರಕರಣದ ವಿವರ*ಜರೀನಾ ತಾಜ್ ಎಂಬಾಕೆ ಮೂರು ಮದುವೆಯಾಗಿದ್ದು ಮೊದಲ ಪತಿಯಿಂದ ಇಬ್ಬರು ಹೆಣ್ಣು ಮಕ್ಕಳು ಮತ್ತು ಎರಡನೇ ಪತಿಯಿಂದ ಮತ್ತೊಂದು ಹೆಣ್ಣು ಮಗು ಜನಿಸಿದ್ದು ಇಬ್ಬರು ಗಂಡಂದಿರನ್ನು ತೊರೆದಿದ್ದ ಜರೀನಾ ಅಜ್ಮಂತ್ ನನ್ನು ಮೂರನೇ ಮದುವೆಯಾಗಿದ್ದಳು.ಎರಡನೇ ಪತಿಯ ಮೂರು ವರ್ಷದ ಹೆಣ್ಣು ಮಗುವಿಗೆ ಅಜ್ಮಂತ್ ಚಿತ್ರ ಹಿಂಸೆ ನೀಡಿದ್ದಾನೆ. ಮಗುವಿನ ಮುಖ, ಕತ್ತು ಹಾಗೂ ತಲೆ ಭಾಗಕ್ಕೆ ಸಿಗರೇಟ್ ನಿಂದ ಸುಟ್ಟು, ಮಗುವಿನ ಗುಪ್ತಾಂಗ ಕಚ್ಚಿ, ಮನಬಂದಂತೆ ಥಳಿಸಿದ್ದಾನೆ. ೧೫ ವರ್ಷದ ಮತ್ತೊಬ್ಬ ಮಗಳ ಕೈ ಮುರಿದು ಬಳಿಕ ಪತ್ನಿ ಜರೀನಾ ಮೇಲೂ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿರುವ ಮೂರು ವರ್ಷದ ಮಗುವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ತಂದೆಯ ವಿಕೃತಿಯಿಂದ ಪುತ್ರಿ ಶಾಕ್ ಗೆ ಒಳಗಾಗಿದ್ದಾಳೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
