ಬೆಂಗಳೂರು:ಇನ್​ಸ್ಟಾಗ್ರಾಮ್​ಗೆ ವಿಡಿಯೋ ಹಾಕುವ ಆಸೆಯಿಂದಾಗಿ ಮೂವರು ಬಾಲಕರು ನೀರುಪಾಲಾಗಿದ್ದು, ರಾತ್ರಿಯವರೆಗೂ ಹುಡುಕಾಟ ನಡೆಸಿದರೂ ಒಬ್ಬರ ಸುಳಿವು ಕೂಡ ಪತ್ತೆಯಾಗಿಲ್ಲ.
ಸಾರಾಯಿಪಾಳ್ಯದ ಮಾಲ್‌ನಲ್ಲಿ ಹೆಲ್ಪರ್ ಆಗಿದ್ದ ಇಮ್ರಾನ್ ಪಾಷ (17), ವೆಲ್ಡಿಂಗ್ ಕೆಲಸಗಾರ ಮುಬಾರಕ್ (17) ಮತ್ತು 10ನೇ ತರಗತಿ ವಿದ್ಯಾರ್ಥಿ ಸಾಹಿಲ್ (15) ಮೃತಪಟ್ಟವರು. ದೊಡ್ಡಗುಬ್ಬಿ ಕೆರೆಯಲ್ಲಿ ಗುರುವಾರ ಮಧ್ಯಾಹ್ನ 1.45ರಲ್ಲಿ ಈ ಅವಘಡ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಹುಡುಕಾಟ ನಡೆಸಿದ್ದರೂ ಪ್ರಯೋಜನ ಆಗಿಲ್ಲ.
ಕಳೆದ ಒಂದು ವಾರದ ಹಿಂದೆ ದೊಡ್ಡಗುಬ್ಬಿ ಕೆರೆಗೆ ಹೋಗಿ ಬಾಲಕರು ಈಜಾಡಿ ಮೊಬೈಲ್​ಫೋನ್​ನಲ್ಲಿ ವಿಡಿಯೋ ಸೆರೆಹಿಡಿದು ಇನ್​ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದರು. ಮತ್ತೆ ವಿಡಿಯೋ ಮಾಡುವ ಸಲುವಾಗಿ ಸಾರಾಯಿಪಾಳ್ಯದ ಇಮ್ರಾನ್, ಮುಬಾರಕ್, ಸಾಹಿಲ್, ಅಬ್ದುಲ್ ರೆಹಮಾನ್ ಮತ್ತು ಸಾಹೀದ್ ಗುರುವಾರ ಮಧ್ಯಾಹ್ನ ಬಾಡಿಗೆಗೆ ಆಟೋ ಮಾಡಿಕೊಂಡು ದೊಡ್ಡಗುಬ್ಬಿ ಕೆರೆ ಬಳಿಗೆ ಹೋಗಿದ್ದಾರೆ.
ಅಬ್ದುಲ್ ರೆಹಮಾನ್ ಮತ್ತು ಸಾಹಿದ್‌ಗೆ ಈಜಾಡಲು ಬರುತ್ತಿರಲಿಲ್ಲ. ಅದಕ್ಕಾಗಿ ಉಳಿದವರು ಬಟ್ಟೆಯನ್ನು ಕಳಚಿ, ಅವರಿಬ್ಬರಿಗೆ ಮೊಬೈಲ್​ಫೋನ್​ಗಳನ್ನು ಕೊಟ್ಟು ಮೂವರು ಕೈ ಹಿಡಿದುಕೊಂಡು ಒಂದೇ ಬಾರಿ ಕೆರೆಗೆ ಡೈ ಹೊಡೆದು ಈಜಾಡುತ್ತಿದ್ದರು. ಮೊದ ಮೊದಲು ಡೈ ಹೊಡೆದು ಮೇಲೆ ಬರುತ್ತಿದ್ದರು, ಬರುಬರುತ್ತ ಈಜಾಡಲು ಸಾಧ್ಯವಾಗದೆ ನೀರು ಕುಡಿಯುತ್ತ ಮುಳುಗಲು ಪ್ರಾರಂಭಿಸಿದಾಗ ಮೇಲಿದ್ದವರು ಜೋರಾಗಿ ಕೂಗಿಕೊಂಡಿದ್ದಾರೆ.
ಕೆರೆ ಏರಿ ಮೇಲಿದ್ದ ಒಬ್ಬಾತ ಕೆರೆಗೆ ಜಿಗಿದು ರಕ್ಷಿಸಲು ಪ್ರಯತ್ನ ಮಾಡಿದ್ದಾನೆ. ಆದರೆ, ಸಾಧ್ಯವಾಗಿಲ್ಲ. ಭಯಗೊಂಡು ಪಾಲಕರಿಗೆ ಮಾಹಿತಿ ಕೊಟ್ಟಿದ್ದಾರೆ. ವಿಷಯ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮುಳುಗಿರುವವರನ್ನು ಹೊರತೆಗೆಯಲು ಕಾರ್ಯಾಚರಣೆ ಕೈಗೊಂಡಿದ್ದಾರೆ. ರಾತ್ರಿಯಾದ ಕಾರಣಕ್ಕೆ ಕಾರ್ಯಾಚರಣೆ ನಿಲ್ಲಿಸಿ ಶುಕ್ರವಾರ ಬೆಳಗ್ಗೆ ಮತ್ತೆ ಹುಡುಕಾಟ ನಡೆಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಪ್ಪು ಪ್ಯಾಲೇಸ್ ಕೂಡ ದೇವಸ್ಥಾನದ ಜಾಗವೇ!; ಬೇಸಿಗೆ ಅರಮನೆ ಅತಿಕ್ರಮಣದ ನಿರ್ಮಾಣ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + twenty =
Remember me
