ಧಾರವಾಡ:ತಮ್ಮ ಗ್ರಾಮದ ಯುವತಿಯೊಂದಿಗೆ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಏಕಕಾಲದಲ್ಲಿ ಮೂವರಿಗೆ ಚಾಕುವಿನಿಂದ ಇರಿದಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಕಿರಣ್ ಪೂಜಾರ್​​, ಆಸಿಫ್​ ಹಾಗೂ ಶಾನ್​ವಾಜ್​ ಚಾಕು ಇರಿತಕ್ಕೊಳಗಾದವರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಧಾರವಾದ ಉಪನಗರ ಪೊಲೀಸರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್​ಗೆ ರವಾನಿಸಿದ್ದಾರೆ.
ಧಾರವಾದ ಜಿಲ್ಲೆ ಮುಗದ ಗ್ರಾಮದ ಯುವಕ ಕಿರಣ್​ ಪೂಜಾರ್​ ಎಂಬಾತ ಯುವತಿಯೊಂದಿಗೆ ಮಾತನಾಡುತ್ತಾ ನಿಂತಿದ್ದ. ಈ ವೇಳೆ ಅಮ್ಮಿನಬಾವಿ ಗ್ರಾಮದ ನಿವಾಸಿ ಸಾಹಿಲ್​ ಎಂಬಾತ ಅಲ್ಲಿಗೆ ಬಂದಿದ್ದು, ತಮ್ಮ ಊರಿನ ಯುವತಿಯೊಂದಿಗೆ ಯುವಕ ಮಾತನಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಸಾಹಿಲ್​ ಆಕ್ಷೇಪಕ್ಕೆ ಕೆರಳಿದ ಕಿರಣ್​ ಪೂಜಾರ್​ ಆತನ ಮೇಲೆ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ:ಮರ್ಯಾದೆಗೆ ಅಂಜಿ ಮಗಳನ್ನೇ ಹತ್ಯೆ ಮಾಡಿ ಬೈಕ್​ಗೆ ಕಟ್ಟಿ ಎಳೆದೊಯ್ದ ತಂದೆ
ಹಲ್ಲೆಗೊಳಗಾಗಿದ್ದ ಸಾಹಿಲ್​ ಕೂಡಲೇ ತನ್ನ ಸ್ನೇಹಿತರ ಜೊತೆ ಬಂದಿದ್ದು, ಕಿರಣ್​ ಹಾಗೂ ಆತನ ಇಬ್ಬರು ಸ್ನೇಹಿತರಾದ ಆಸಿಫ್, ಶಾನ್​ವಾಜ್​ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮೂವರು ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಆಸಿಫ್​ ಎಂಬಾತನ ಹೊಟ್ಟೆಯಲ್ಲಿಯೇ ಚಾಕುವನ್ನೂ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ಧಾರವಾಡ ಉಪನಗರ ಪೊಲೀಸ್​ ಠಾಣೆಯ ಸಿಬ್ಬಂದಿ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿಯ ಕಿಮ್ಸ್​ಗೆ ರವಾನಿಸಿದ್ದಾರೆ. ಪ್ರಕರಣ ದಾಕಲಿಸಿಕೊಂಡಿರುವ ಪೊಲೀಸರು ತಲೆಮಾರಿಸಿಕೊಂಡಿರುವ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
