ಬೆಂಗಳೂರು:ಕರೊನಾ ವೈರಸ್ ಭೀತಿಯ ಜತೆಗೆ ಬಿಸಿಲಿನ ತೀವ್ರತೆ, ಧೂಳು ಮತ್ತು ಶುಷ್ಕ ವಾತಾವರಣದಿಂದ ನಗರದಲ್ಲಿ ಗಂಟಲುಬೇನೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ವಿಕ್ಟೋರಿಯಾ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಜಯನಗರ ಸಾರ್ವಜನಿಕ ಆಸ್ಪತ್ರೆಗಳ ಕಿವಿ ಮೂಗು ಗಂಟಲು (ಇಎನ್​ಟಿ) ವಿಭಾಗಕ್ಕೆ ಬರುವ ಹೊರರೋಗಿ ಪೈಕಿ ಶೇ.20ರಿಂದ 30 ಮಂದಿ ಗಂಟಲು ಬೇನೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ವಾಣಿವಿಲಾಸ ಆಸ್ಪತ್ರೆಗಳಲ್ಲಿ ನಿತ್ಯ 10ಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿದ್ದು, ಎಲ್ಲ ವಯೋಮಾನದವರನ್ನೂ ಈ ಬೇನೆ ಬಾಧಿಸುತ್ತಿದೆ.
ವಿವಿಧ ಕಾರಣಗಳಿಗೆ ಮನೆಯಿಂದ ಹೊರ ಹೋಗುವ ಮಂದಿ ಬಿಸಿಲ ಝುಳಕ್ಕೆ ಬಳಲಿ ಬಾಯಾರಿಕೆ ನೀಗಿಸಿಕೊಳ್ಳಲು ತಂಪುಪಾನೀಯ, ಕಬ್ಬಿನಹಾಲು, ಮಜ್ಜಿಗೆ, ಐಸ್ಕ್ರೀಂ, ಹಣ್ಣು, ದ್ರವ ಆಹಾರಗಳ ಮೊರೆ ಹೋಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಶುಚಿತ್ವಕ್ಕೆ ಒತ್ತು ನೀಡದ ಕಾರಣ ಗಂಟಲು ಬೇನೆಯಂತಹ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಅರೆತಲೆನೋವು ಸಮಸ್ಯೆ ಇರುವವರು ತಣ್ಣನೆಯ ಪದಾರ್ಥ ಸೇವಿಸಿದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು.
ರೋಗ ಲಕ್ಷಣ:ಆರಂಭದಲ್ಲಿ ಗಂಟಲು ಕಟ್ಟಿದಂತಾಗಿ, ಕಿವಿಯ ಕೆಳಭಾಗದಿಂದ ಗಂಟಲು ನೋವು, ಕೆರೆತ ಕಾಣಿಸಿಕೊಳ್ಳುತ್ತದೆ. ಬಳಿಕ ಒಣಕೆಮ್ಮು, ನೆಗಡಿ, ತಲೆನೋವು, ಮೈ-ಕೈ ನೋವಿನೊಂದಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆ ಪಡೆದರೂ ಒಂದು ವಾರ ಕಾಡಲಿದೆ. ಆದ್ದರಿಂದ ಜನರು ಗಂಟಲ ಬೇನೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದು ತಜ್ಞರ ಸಲಹೆ.
ಸ್ಟ್ರಾ ಬಳಸಬೇಡಿ:ಎಳನೀರು, ಜ್ಯೂಸ್, ಮಜ್ಜಿಗೆ ಇನ್ನಿತರ ತಂಪುಪಾನೀಯ ಸೇವಿಸುವಾಗ ಬಹುತೇಕರು ಸ್ಟ್ರಾ ಬಳಸುತ್ತಾರೆ. ಆದರೆ, ಇದೂ ಅಪಾಯಕಾರಿ. ಕೊಳವೆಯಂತಹ ಸ್ಟ್ರಾನಲ್ಲಿ ಅತೀ ಸೂಕ್ಷ್ಮವಾದ ಧೂಳಿನ ಕಣಗಳು ಸೇರಿರುತ್ತವೆ. ಇದರಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿದ್ದು, ಅದರ ಬಳಕೆಯಿಂದ ಗಂಟಲು ಸೋಂಕು ಕಾಣಿಸಿಕೊಳ್ಳುತ್ತದೆ. ಹಾಗಾಗಿ ನೇರವಾಗಿ ಪಾನೀಯಗಳ ಸೇವನೆ ಮಾಡುವುದು ಒಳಿತು.
ಬೇಸಿಗೆಯಲ್ಲಿ ಗಂಟಲು ಸಮಸ್ಯೆ ಸಾಮಾನ್ಯ. ಆದರೆ, ಇದೇ ವೇಳೆ ಕರೊನಾ ಭೀತಿ ಎದುರಾಗಿರುವುದರಿಂದ ಸಣ್ಣಪುಟ್ಟ ಸಮಸ್ಯೆಗೂ ಆತಂಕಗೊಂಡು ಚಿಕಿತ್ಸೆಗೆ ಬರುತ್ತಿದ್ದಾರೆ. ಹೀಗಾಗಿ ಅವರಿಗೆ ಕೌನ್ಸೆಲಿಂಗ್ ಮಾಡಿ ಚಿಕಿತ್ಸೆ ನೀಡಿ ಕಳುಹಿಸಲಾಗುತ್ತಿದೆ.
| ಡಾ. ರಮೇಶ ಕೆ. ಕೌಲಗುಡ್ಇಎನ್​ಟಿ ವಿಭಾಗ ಮುಖ್ಯಸ್ಥರು,ಕೆ.ಸಿ. ಜನರಲ್ ಆಸ್ಪತ್ರೆ
ಇವನ್ನು ಪಾಲಿಸಿ
ದಂತ ಚಿಕಿತ್ಸೆ ಮತ್ತು ತಪ್ಪು ಕಲ್ಪನೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 10 =
Remember me
