ಚಾಮರಾಜನಗರ:ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದ ಜನತೆ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ವರುಣಾಘಾತಕ್ಕೆ ಅಪಾರ ಪ್ರಮಾಣದ ಸಾವು-ನೋವು, ಬೆಳೆಹಾನಿ ಸಂಭವಿಸಿದೆ. ಹಲವು ದೇಗುಲಗಳೂ ಜಲಪ್ರಳಯಕ್ಕೆ ಸಿಲುಕಿವೆ. ಇದೀಗ ಉದ್ಘಾಟನೆಗೆ ಸಿದ್ಧಗೊಂಡಿದ್ದ ದೇವಾಲಯವೊಂದಕ್ಕೆ ಸಿಡಿಲು ಬಡಿದಿದ್ದು, ಗೋಪುರ ಭಗ್ನವಾಗಿದೆ.
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಮಂಟೆ‌ಸ್ವಾಮಿ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.
ಭಾನುವಾರ ರಾತ್ರಿ ಮಳೆ ಸುರಿದ ವೇಳೆ ಸಿಡಿಲು ಬಡಿದಿದ್ದು, ಗೋಪುರದ ಒಂದು ಭಾಗ ಬಿರುಕು ಬಿಟ್ಟಿದೆ. ಸಿಡಿಲಿನ ಶಬ್ಧ ಕೇಳಿದ್ದ ಗ್ರಾಮಸ್ಥರು ಸೋಮವಾರ ಬೆಳಗ್ಗೆ ದೇವಸ್ಥಾನದ ಬಳಿ ಬಂದು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚೆಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದ ದೇಗುಲವನ್ನು ಉದ್ಘಾಟನೆಗೆ ಕಾಯುತ್ತಿತ್ತು. ಕರೊನಾ ಕಾರಣದಿಂದ ಉದ್ಘಾಟನಾ ಕಾರ್ಯವನ್ನು ಮುಂದೂಡಲಾಗಿತ್ತು. ಗೋಪುರದ ಮೇಲಿದ್ದ ಮಂಟೇಸ್ವಾಮಿ ಮೂರ್ತಿಗೆ ಸಿಡಿಲು ಬಡಿದಿದ್ದು, ಗೋಪುರದ ಇತರ ಭಾಗಗಳಿಗೂ ಹಾನಿಯಾಗಿದೆ. ಉದ್ಘಾಟನೆಗೂ ಮೊದಲೇ ದೇವಸ್ಥಾನದ ಗೋಪುರ ಭಗ್ನಗೊಂಡ ಸುದ್ದಿ ಕೇಳಿ ಸ್ಥಳೀಯರು ಮತ್ತು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
VIDEO| ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲೇ ದಾಂಧಲೆ! ಭಕ್ತರ ಮೇಲೂ ಹಲ್ಲೆ

ಗಾಯಗೊಂಡ ಲಕ್ಷ್ಮೀ ಫೋಟೋ ಹಾಕಿ ಅಸಮಾಧಾನ ಹೊರಹಾಕಿದ್ರು ನಟ ದರ್ಶನ್​ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
