ಬೆಂಗಳೂರು:ಮುಂಬರುವ ಡಿಸೆಂಬರ್9ರಿಂದ11ರವರೆಗೆ ಬೆಂಳೂರಿನಲ್ಲಿ ಟಿಐಇ ಜಾಗತಿಕ ಶೃಂಗಸಭೆ ಆಯೋಜಿಸಲಾಗಿದೆ ಎಂದು ಟಿಐಇ ಅಧ್ಯಕ್ಷ ಮದನ್ ಪದಕಿ ತಿಳಿಸಿದ್ದಾರೆ.
ಗುರುವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉದ್ಯಮಶೀಲತೆಗೆ ಪ್ರಥಮ ಆದ್ಯತೆ’ ಎಂಬ ಧ್ಯೇಯ ವಾಕ್ಯದೊಂದಿಗೆ9ನೇ ಟಿಐಇ ಗ್ಲೋಬಲ್ ಸಮಿಟ್(ಟಿಜಿಎಸ್) 2024ಏರ್ಪಡಿಸಲಾಗಿದ್ದು,ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ(ಬಿಐಇಸಿ)ದಲ್ಲಿ ಡಿ.9ರಿಂದ11ರವರೆಗೆ ನಡೆಯಲಿದೆ.ಇದೇ ವೇಳೆ ಡಿ.12ರಂದು ಮೈಸೂರಿನಲ್ಲಿ ಸಮಾವೇಶ ನಡೆಯಲಿದೆ.
ಈ ಬಾರಿಯ ಟಿಜಿಎಸ್‌ನಲ್ಲಿ50ಕ್ಕೂ ಹೆಚ್ಚು ದೇಶಗಳ25ಸಾವಿರ ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.ವಿಶೇಷವಾಗಿ10ಸಾವಿರ ಯುವ ಉದ್ಯಮಿಗಳು, 5ಸಾವಿರಕ್ಕೂ ಹೆಚ್ಚಿನ ನವೋದ್ಯಮಿಗಳು ಹಾಗೂ750ಕ್ಕೂ ಹೆಚ್ಚು ಹೂಡಿಕೆದಾರರು ಮತ್ತು300ಕ್ಕೂ ಹೆಚ್ಚು ಕಾರ್ಪೊರೇಟ್ ಕಂಪನಿಗಳು ಪಾಲ್ಗೊಲ್ಳುವ ನಿರೀಕ್ಷೆ ಇದೆ. 150ಕ್ಕೂ ಹೆಚ್ಚು ಪರಿಣಿತರು ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ.
ಬೆಂಗಳೂರಿನ ಜಾಗತಿಕ ಉದ್ಯಮಶೀಲರ ಸಂಘಟನೆ(ಟಿಐಇ)ಗೆ25ವರ್ಷಗಳು ಪೂರೈಸಿರುವ ಸಂದರ್ಭದಲ್ಲಿಯೇ ಶೃಂಗಸಭೆ ನಡೆಯುತ್ತಿರುವುದು ಸಮಾವೇಶದ ಮತ್ತೊಂದು ವಿಶೇಷತೆ.ಟಿಐಇ ಹಮ್ಮಿಕೊಂಡಿರುವ ಬೃಹತ್ ಕಾರ್ಯಕ್ರಮಕ್ಕೆ ಡಿಜಿಟಲ್ ಎಕಾನಮಿ ಮಿಷನ್,ಕರ್ನಾಟಕ ಸರ್ಕಾರವು ಕೈ ಜೋಡಿಸಿದ್ದು,ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ.ಪಾಟೀಲ್ ಹಾಗೂ ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಶೃಂಗಸಭೆಯ ಲೋಗೋವನ್ನು ಬಿಡುಗಡೆಗೊಳಿಸಿದರು.ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ,ಐಟಿ ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕರೂಪ್ ಕೌರ್,ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ,ಸ್ಟಾರ್ಟಪ್ ವಿಷನ್ ಗ್ರೂಪ್‌ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್,ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ.ನಾಯ್ಡು,ಟಿಐಇ ಗ್ಲೋಬಲ್ ಅಧ್ಯಕ್ಷ ಅಮಿತ್ ಗುಪ್ತಾ,ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಮತ್ತಿತರರು ಪಾಲ್ಗೊಂಡಿದ್ದರು.ಟಿಜಿಎಸ್2024ಕ್ಕೆ ನೋಂದಣಿ ಆರಂಭವಾಗಿದ್ದು,ನೋಂದಣಿ ಮಾಡಿಕೊಳ್ಳಲುhttps://tgs2024.orgಗೆ ಭೇಟಿ ನೀಡಬಹುದು.
ಜಾಗತಿಕವಾಗಿ ಹೊಸ ಸ್ಟಾರ್ಟಪ್‌ಗಳನ್ನು ಒಗ್ಗೂಡಿಸಲು ಟಿಜಿಎಸ್ ವೇದಿಕಯಾಗಲಿದ್ದು,ಗ್ರಾಮೀಣ ವಿದ್ಯಾರ್ಥಿಗಳ ಆವಿಷ್ಕಾರಗಳ ಪ್ರದರ್ಶನ,ಟಿಐಇ ಗ್ಲೋಬಲ್ ಮಹಿಳಾ ಕಾನ್‌ಕ್ಲೇವ್,ಭವಿಷ್ಯದ ಉದ್ಯಮಿಗಳ ಸಮ್ಮೇಳನ,ಟಿಐಇನ ಜಾಗತಿಕ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಗೋಷ್ಠಿಗಳನ್ನು ಶೃಂಗಸಭೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಡೀಪ್‌ಟೆಕ್,ಎಐ,ಬಯೋಟೆಕ್,ಅಗ್ರಿಟೆಕ್,ಫಿನ್‌ಟೆಕ್ ಸೇರಿದಂತೆ ಸಾಮಾಜಿಕ ಉದ್ದಿಮೆಗಳು,ಸ್ಟಾರ್ಟಪ್ ಅವಕಾಶ ಮತ್ತಿತರ ಮಹತ್ತರ ಅಂಶಗಳ ಕುರಿತು ಸಂವಾದಗಳು ನಡೆಯಲಿವೆ.ಉದ್ಯಮ ಕ್ಷೇತ್ರದಲ್ಲಿ ಈ ಶೃಂಗಸಭೆ ಓಲಂಪಿಕ್ ಇದ್ದಂತೆ ಎಂದು ಕರ್ನಾಟಕ ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅಭಿಪ್ರಾಯಿಸಿದ್ದಾರೆ.
ನವೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದ್ದು,ಸ್ಟಾರ್ಟಪ್‌ಗಳ ಮೂಲಕ ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ಕೇಂದ್ರವನ್ನಾಗಿ ಮಾಡುವ ಹೆಗ್ಗುರಿ ಇದೆ.ಆ ನಿಟ್ಟಿನಲ್ಲಿ ಈ ಶೃಂಗಸಭೆಯನ್ನು ಯಶಸ್ವಿಗೊಳಿಸಲಾಗುವುದು ಎಂದು ಕೈಗಾರಿಕಾ ಸಚಿವಎಂ.ಬಿ.ಪಾಟೀಲ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
