ಬೆಂಗಳೂರು:ಹುಲಿ ಉಗುರಿನ ಪೆಂಡೆಂಡ್​ ಧರಿಸಿದ ಎಂಬ ಆರೋಪದ ಮೇಲೆ ಬಿಗ್​ಬಾಸ್​ ಮನೆಯಿಂದಲೇ ಸ್ಪರ್ಧಿ ವರ್ತೂರು ಸಂತೋಷ್​ ಅವರನ್ನು ಬಂಧನ ಮಾಡಿದ ಬಳಿಕ ರಾಜ್ಯದಲ್ಲಿ ಹುಲಿ ಉಗುರು ಪ್ರಕರಣ ಭಾರೀ ಚರ್ಚೆಯಾಗುತ್ತಿದೆ. ಹುಲಿ ಉಗುರನ್ನು ಕೆಲವರು ಶೋಕಿಗಾಗಿ ಧರಿಸಿದರೆ, ಇನ್ನು ಕೆಲವರು ಅದರ ಮೇಲಿನ ಧನಾತ್ಮಕ ನಂಬಿಕೆಗಾಗಿ ಧರಿಸುತ್ತಾರೆ. ಸಾಕಷ್ಟು ಹಣ ಕೊಟ್ಟು ಖರೀದಿ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡವರು ಹುಲಿಯ ಬೇಟೆಯಾಡಿ ಸಾಯಿಸುವುದೂ ಉಂಟು. ಹುಲಿ ಉಗುರಿನ ಬಗ್ಗೆ ತೀವ್ರ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಹುಲಿ ಉಗುರಿನ ಬಗ್ಗೆ ನಾವು ತಿಳಿದುಕೊಳ್ಳಲೇ ಬೇಕಾದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
ಹುಲಿಗಳು ಅತಿದೊಡ್ಡ ಜೀವಂತ ಬೆಕ್ಕು ಜಾತಿಗಳು ಎಂದು ನಿಮಗೆ ತಿಳಿದಿದೆಯೇ? ಅವು ಸಿಂಹ ಜಾತಿಗಳಿಗಿಂತ ಹೆಚ್ಚು ಬಲಶಾಲಿಯಾಗಿರುತ್ತವೆ. ಪ್ರಾಣಿ ವೈವಿಧ್ಯ ಜಾಲದ ಪ್ರಕಾರ ಹುಲಿಗಳು ಪ್ಯಾಂಥೆರಾ ಕುಲದ ಒಂದು ಭಾಗವಾಗಿದೆ ಮತ್ತು ಸುಮಾರು 8 ರಿಂದ 10 ವರ್ಷಗಳವರೆಗೆ ವಾಸಿಸುತ್ತವೆ. ಆದರೆ, ದುರಾದೃಷ್ಟವಶಾತ್​ ಹುಲಿಗಳ ಸಂತತಿ ಕ್ಷೀಣಿಸುತ್ತಾ ಬರುತ್ತಿವೆ. ಇದಕ್ಕೆ ಆಧುನಿಕತೆ, ಮಾನವನ ದುರಾಸೆ ಸೇರಿದಂತೆ ಅನೇಕ ಕಾರಣಗಳಿವೆ.
ಹುಲಿ ಉಗುರು ಏಕೆ ಮುಖ್ಯ?ಗಂಡು ಹುಲಿಗಳು 90 ರಿಂದ 130 ಕೆಜಿ ತೂಗುತ್ತವೆ. ಅದೇ ರೀತಿ ಹೆಣ್ಣು ಹುಲಿಗಳು 65 ರಿಂದ 170 ಕೆಜಿಗಳವರೆಗೂ ತೂಗುತ್ತವೆ. ಹುಲಿ ಒಂದೇ ದಾಳಿಯಲ್ಲಿ ಬೇಟೆಯಾಡುವ ಸಾಮರ್ಥ್ಯ ಹೊಂದಿದೆ. ಹುಲಿಗೆ ತನ್ನ ದೇಹದಲ್ಲಿ ಉಗುರು ಕೂಡ ಬಹಳ ಮುಖ್ಯವಾದ ಅಂಗವಾಗಿದೆ. ಹುಲಿಯ ಪಂಜದ ನಿಖರವಾದ ಬಲ ತಿಳಿದಿಲ್ಲ. ಆದರೆ, ಹುಲಿಯ ಒಂದು ಪಂಜದ ಹೊಡೆತ 22046 ಕೆಜಿಗೆ ಸಮವಾಗಿರುತ್ತದೆ ಎಂದು ಅಂದಾಜಿಸಲಾಗಿದೆ. ಬೇಟೆಯಾಡಲು, ದಾಳಿ ಮಾಡಲು ಮತ್ತು ರಕ್ಷಣೆ ಮಾಡಿಕೊಳ್ಳಲು ಉಗುರುಗಳೇ ಹುಲಿಯ ಪ್ರಮುಖ ಸಾಧನವಾಗಿದೆ. ಹುಲಿಗಳ ಉಗುರು ವಿಶ್ವದ ಪ್ರಬಲ ಉಗುರುಗಳಲ್ಲಿ ಒಂದಾಗಿದೆ. ಕರಡಿಗಳು ಸಹ ಬಲವಾದ ಉಗುರುಗಳನ್ನು ಹೊಂದಿದ್ದರೂ, ಹುಲಿಗಳಷ್ಟು ಬಲಿಷ್ಠವಾಗಿಲ್ಲ. ಹುಲಿಗಳು ನೈಸರ್ಗಿಕವಾಗಿ ಬಲವಾದ ಉಗುರುಗಳನ್ನು ಹೊಂದಿದ್ದು, ಅವು ಯಾವಾಗಲೂ ಬೇಟೆಯನ್ನು ಅಟ್ಟಿಸಿಕೊಂಡು ಹೋಗುವಾಗ, ಅದರ ಮೇಲೆ ದಾಳಿ ಮಾಡುವಾಗ ಮತ್ತು ಅದನ್ನು ಹಿಡಿದಿಟ್ಟುಕೊಳ್ಳುವಾಗ ಬಳಸುತ್ತವೆ. ದೇಶಿಯ ಬೆಕ್ಕಗಳಂತೆ ಹುಲಿಗಳು ತನ್ನ ಉಗುರುಗಳನ್ನು ಹರಿತಗೊಳಿಸುವುದಿಲ್ಲ.
ಹುಲಿ ಉಗುರಿನ ವಿಶೇಷತೆಹುಲಿಯು ಸಾಮಾನ್ಯವಾಗಿ ಪ್ರತಿ ಪಂಜದ ಮೇಲೆ ನಿಯಮಿತ ಗಾತ್ರದ ನಾಲ್ಕು ಉಗುರುಗಳನ್ನು ಹೊಂದಿರುತ್ತದೆ. ಅದರಲ್ಲಿ ವಿಶೇಷವಾದ ಉಗುರು ಪಂಜದ ಹಿಂದೆ ಇರುತ್ತದೆ. ಇದನ್ನು ಡಿಕ್ಲಾವ್​ ಎಂದು ಕರೆಯಲಾಗುತ್ತದೆ. ನಡೆಯುವಾಗ ಈ ಉಗುರು ನೆಲವನ್ನು ಸ್ಪರ್ಶಿಸುವುದಿಲ್ಲ. ಪ್ರತಿಯೊಂದು ಉಗುರುಗಳು 4 ಇಂಚು ಉದ್ದವಿರುತ್ತವೆ. ಹುಲಿ ಬೇಟೆಯನ್ನು ಹಿಡಿಯಲು ಮತ್ತು ಬಿಗಿಯಾಗಿ ಹಿಡಿಯಲು ಅವುಗಳನ್ನು ಬಳಸುತ್ತದೆ.
ಉಗುರುಗಳನ್ನು ಯಾವುದಕ್ಕಾಗಿ ಬಳಸುತ್ತವೆ?1. ಬೇಟೆಯಾಡಲುಪ್ರಾಣಿಗಳು ವಿಶೇಷವಾಗಿ ಆಹಾರ ಜಾಲದ ಮೇಲ್ಭಾಗದಲ್ಲಿರುವ ಮಾಂಸಾಹಾರಿ, ಕಾಡಿನಲ್ಲಿ ಬದುಕಲು ತೀಕ್ಷ್ಣವಾದ ಮತ್ತು ಪರಿಣಾಮಕಾರಿ ಶಸ್ತ್ರಾಸ್ತ್ರಗಳ ಅಗತ್ಯವಿದೆ. ಹೀಗಾಗಿ ಹುಲಿಗಳು ಹರಿತವಾದ ಉಗುರುಗಳನ್ನು ಹೊಂದಿವೆ ಮತ್ತು ಅದರ ಒಂದು ಪಂಜದ ಹೊಡೆತ 22046 ಕೆಜಿಯ ಸಾಮರ್ಥ್ಯವನ್ನು ಹೊಂದಿದೆ. ಹುಲಿಯು ತನ್ನ ಬೇಟೆಯನ್ನು ಹಿಡಿಯಲು, ತನ್ನ ಹಿಡಿತದಲ್ಲಿ ಅದನ್ನು ಲಾಕ್ ಮಾಡಲು, ಸ್ಥಿರವಾದ ಹಿಡಿತವನ್ನು ನಿರ್ವಹಿಸಲು ಮತ್ತು ಮಾಂಸವನ್ನು ಹರಿದು ಹಾಕಲು ಈ ಉಗುರುಗಳನ್ನು ಬಳಸುತ್ತದೆ. ಉಗುರುಗಳನ್ನು ಬಳಸದೆಯೇ ಜಿಂಕೆ ಮತ್ತು ಆನೆ ಮರಿಗಳು ಸೇರಿದಂತೆ ಯಾವುದೇ ಬೇಟೆಯನ್ನು ಹುಲಿ ಮಾಡಲಾಗದು.

2. ರಕ್ಷಣೆಗಾಗಿಕೆಲವೇ ಕೆಲವು ಪ್ರಾಣಿಗಳು ಹುಲಿಯ ಮೇಲೂ ದಾಳಿ ಮಾಡುತ್ತವೆ. ಮಾನವರು ಕೂಡ ಹುಲಿಗಳಿಗೆ ವಿವಿಧ ಕಾರಣಗಳಿಂದ ಬೆದರಿಕೆಯಾಗಿದ್ದಾನೆ. ಐತಿಹಾಸಿಕವಾಗಿ ಹುಲಿಗಳನ್ನು ಅವುಗಳ ದಪ್ಪನೆಯ ತುಪ್ಪಳಕ್ಕಾಗಿ ಬೇಟೆಯಾಡಲಾಗುತ್ತಿತ್ತು. ಕೆಲವು ಕಾನೂನುಬಾಹಿರ ಸಂಸ್ಥೆಗಳು ಇನ್ನೂ ತುಪ್ಪಳಕ್ಕಾಗಿ ಹುಲಿಗಳನ್ನು ಬೇಟೆಯಾಡುತ್ತಿದ್ದರೂ, ಸಾರ್ವಜನಿಕ ಜಾಗೃತಿ ಮತ್ತು ಅಭಿಯಾನಗಳು ಬೇಟೆಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಪ್ರಾಣಿಗಳ ಹಕ್ಕುಗಳ ಮೇಲೆ ಈಗ ಹೆಚ್ಚಿನ ಬೆಳಕು ಚೆಲ್ಲುತ್ತಿರುವುದರಿಂದ ತುಪ್ಪಳದ ಅಂರಾರಾಷ್ಟ್ರೀಯ ಮಟ್ಟದ ವ್ಯಾಪಾರವೂ ಈಗ ಕಡಿಮೆಯಾಗಿದೆ. ಆದಾಗ್ಯೂ, ಕೆಲವು ಅಕ್ರಮ ವ್ಯಾಪಾರಿಗಳು ಹುಲಿಗಳನ್ನು ಕೊಲ್ಲುವುದನ್ನು ಮುಂದುವರೆಸಿದ್ದಾರೆ, ಅವುಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಯನ್ನಾಗಿ ಮಾಡಿದ್ದಾರೆ. ಹೀಗಾಗಿ ತಮ್ಮ ಮೇಲಿನ ಬೆದರಿಕೆಯಿಂದ ರಕ್ಷಿಸಿಕೊಳ್ಳಲು ಹುಲಿಗಳು ತಮ್ಮ ಉಗುರಗಳನ್ನು ಬಳಸಿಕೊಳ್ಳುತ್ತವೆ.
3. ಸಂವಹನಕ್ಕಾಗಿಅಚ್ಚರಿಯ ಸಂಗತಿ ಏನೆಂದರೆ, ಹುಲಿಗಳು ತಮ್ಮ ಉಗುರುಗಳನ್ನು ಬೇಟೆಯಾಡಲು ಮಾತ್ರ ಬಳಸದೇ ಸಂವನಕ್ಕೂ ಬಳಸಿಕೊಳ್ಳುತ್ತವೆ. ಕೆಲವೊಮ್ಮೆ ತಮ್ಮ ಸಹವಾಸಿಗಳೊಂದಿಗೆ ಮತ್ತು ತಮ್ಮ ಬೇಟೆಗಳೊಂದಿಗೆ ಸಂವಹನ ನಡೆಸಲು ಸಹ ಹುಲಿಗಳು ತಮ್ಮ ಉಗುರುಗಳನ್ನು ಬಳಸಿಕೊಳ್ಳುತ್ತವೆ. ಬೇಟೆಯನ್ನು ದಿಟ್ಟಿಸಿ ನೋಡುತ್ತಾ ಹುಲಿಯು ತನ್ನ ಉಗುರುಗಳನ್ನು ಹಿಂತೆಗೆದುಕೊಂಡರೆ ಅದು ಆಕ್ರಮಣಕ್ಕೆ ಸಿದ್ಧವಾಗಿದೆ ಎಂದರ್ಥ. ಅದೇ ರೀತಿ ಹುಲಿಗಳು ತಮ್ಮ ಉಗುರುಗಳನ್ನು ಒರೆಸುವ ಮೂಲಕ ಮತ್ತು ಸಾಮಾನ್ಯವಾಗಿ ತಮ್ಮ ಹಿಂಗಾಲುಗಳಿಂದ ನೆಲದ ಮೇಲೆ ಕೆರೆಯುವ ಮೂಲಕ ಪ್ರದೇಶವನ್ನು ಗುರುತಿಸಬಹುದು. ಅಲ್ಲದೆ, ಮರಗಳ ಮೇಲೆ ಕೆರೆದು ಗುರುತು ಮಾಡುವ ಮೂಲಕ ತಮ್ಮ ಬೇಟೆಗಳಿಗೆ ಹುಲಿಯು ಎಚ್ಚರಿಕೆ ಸಂದೇಶವನ್ನು ಸಹ ನೀಡುತ್ತದೆ. ಇದಿಷ್ಟೇ ಅಲ್ಲದೆ, ಹುಲಿಯು ತನ್ನ ಗರ್ಜನೆಯೊಂದಿಗೂ ಸಂವಹನ ನಡೆಸುತ್ತದೆ. ಹುಲಿಯ ಗರ್ಜನೆ ಸುಮಾರು 3 ಕಿ.ಮೀ. ದೂರದವರೆಗೂ ಕೇಳಿಸಬಲ್ಲದು.

ಜನರು ಹುಲಿ ಉಗುರು ಧರಿಸುವುದೇಕೆ?ಇದಿಷ್ಟು ಹುಲಿಯ ಕುರಿತಾದ ಒಂದು ಆಸಕ್ತಿದಾಯಕ ಸಂಗತಿಯಾಗಿದೆ. ಪ್ರಸ್ತುತ ಹುಲಿ ಉಗುರು ಪ್ರಕರಣ ಎಲ್ಲೆಡೆ ಸದ್ದು ಮಾಡುತ್ತಿರುವುದರಿಂದ ಹುಲಿಯ ಉಗುರಿನ ಬಗ್ಗೆ ತಿಳಿಯುವ ಅಗತ್ಯ ಇದೆ. ಇನ್ನು ಜನರು ಹುಲಿಯ ಉಗುರನ್ನು ಏಕೆ ಧರಿಸುತ್ತಾರೆ ಅಂದರೆ, ಪುರಾತನ ಕಾಲದಿಂದಲೂ ಸಿಂಹಗಳು ಮತ್ತು ಹುಲಿಗಳ ಉಗುರುಗಳು ನಕಾರಾತ್ಮಕ ಶಕ್ತಿಯನ್ನು ನಾಶಮಾಡುತ್ತವೆ ಎಂದು ನಂಬಲಾಗಿದೆ. ಇವು ಅದೃಷ್ಟವನ್ನು ತರುತ್ತವೆ ಎಂದು ಕೆಲವರು ಹೇಳುತ್ತಾರೆ ಹಾಗೂ ದುಷ್ಟಶಕ್ತಿಗಳಿಂದ ರಕ್ಷಿಸುತ್ತದೆ ಎಂದು ನಂಬುತ್ತಾರೆ. ಇನ್ನೂ ಕೆಲವರು ಉಗುರು ರೋಗ ಅಥವಾ ಅನಾರೋಗ್ಯದಿಂದ ದೂರವಿರಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತಾರೆ. ಧರಿಸುವವರಿಗೆ ಧೈರ್ಯವನ್ನು ನೀಡುತ್ತದೆ. ವಿರೋಧಿಗಳ ಧೈರ್ಯವನ್ನು ದುರ್ಬಲಗೊಳಿಸುತ್ತದೆ. ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮಾಟಮಂತ್ರ ಮತ್ತು ಇತರ ಮಂತ್ರಗಳ ವಿರುದ್ಧ ರಕ್ಷಿಸುತ್ತದೆ, ನಕಾರಾತ್ಮಕ ಶಕ್ತಿಗಳು, ದುಷ್ಟ ಶಕ್ತಿಗಳನ್ನು ದೂರವಿಡುತ್ತದೆ ಮತ್ತು ಧರಿಸುವವರಿಗೆ ವಿಶಿಷ್ಟವಾದ ಆಕರ್ಷಣೆಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಆದರೆ, ಇದು ನಂಬಿಕೆ ಮಾತ್ರವಷ್ಟೇ. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕೆ ಹುಲಿ ಸೇರಿದಂತೆ ಪ್ರಾಣಿಗಳನ್ನು ಕೊಲ್ಲುವುದು ಎಷ್ಟು ಸರಿ? ಹೀಗೆ ಮಾಡಿದರೆ ಮುಂದೊಂದು ದಿನ ಹುಲಿಗಳು ಇದ್ದವು ಎಂದು ಹೇಳಬೇಕಾಗುತ್ತದೆ.(ಏಜೆನ್ಸೀಸ್​)
ಹುಲಿ ಉಗುರು ಕೇಸ್​: ಜಾಮೀನು ಪಡೆದ ವರ್ತೂರು ಸಂತೋಷ್​​ ಮತ್ತೆ ಬಿಗ್​ಬಾಸ್​ ಮನೆಗೆ ಹೋಗ್ತಾರಾ? ಇಲ್ಲಿದೆ ಉತ್ತರ…

ಅರಣ್ಯಾಧಿಕಾರಿಗಳಿಗೆ ಹುಲಿ ಉಗುರು ಹೋಲುವ ಪೆಂಡೆಂಟ್ ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
