ಮಡಿಕೇರಿ:ದಕ್ಷಿಣ ಕೊಡಗಿನ ಜನರನ್ನು ಕಾಡುತ್ತಿರುವ ನರಹಂತಕ ಹುಲಿ ಸೆರೆ ಕಾರ್ಯಾಚರಣೆ ವೈಖರಿ ಬದಲಾಯಿಸಲು ಅರಣ್ಯ ಇಲಾಖಾಧಿಕಾರಿಗಳು ತೀರ್ಮಾನಿಸಿದ್ದಾರೆ. ಕಳೆದ ಹನ್ನೆರಡು ದಿನದಿಂದ ತಾತ್ಕಾಲಿಕ ಶಿಬಿರ ಆಯೋಜಿಸಿ, ಹುಲಿ ಸೆರೆಗೆ ನಡೆಯುತ್ತಿರುವ ಕೂಂಬಿಂಗ್ ಪರಿಣಾಮಕಾರಿಯಾಗಿಲ್ಲದ್ದ ಹಿನ್ನೆಲೆಯಲ್ಲಿ ಸೆರೆ ಕಾರ್ಯಾಚರಣೆ ಬದಲಾಯಿಸಲು ನಿರ್ಧರಿಸಲಾಗಿದೆ.
ಅಧಿಕಾರಿ, ಸಿಬ್ಬಂದಿ ಸೇರಿದ್ದಂತೆ 150 ಜನ ಕಾರ್ಯಾಚರಣೆ ನಡೆಸುತ್ತಿದ್ದರೂ, ಹುಲಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ, ಜಾನುವಾರು ಮೇಲೆ ನಿರಂತರ ಹುಲಿ ದಾಳಿ ನಡೆಯುತ್ತಿದೆ. ಗುರುವಾರ ಹರಿಹಾರ ಗ್ರಾಮದಲ್ಲಿ ಹುಲಿ ದಾಳಿಗೆ ಜಾನುವಾರ ಬಲಿಯಾಗಿದೆ. ನಾಲ್ಕು ಸಾಕಾನೆ, ಶಾರ್ಪ್ ಶೂಟರ್, ಅಗತ್ಯ ಅಧಿಕಾರಿ, ಸಿಬ್ಬಂದಿ ಬಳಸಿಕೊಂಡು ಸೆರೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.
ಅಟ್ಟಣಿ ಮೇಲಿಂದ ಅರವಳಿಕೆ ಚುಚ್ಚುಮದ್ದು ಹಾಕುವುದರ ಮೂಲಕ ಹುಲಿ ಸೆರೆ ಹಿಡಿಯಲು ಯೋಜನೆ ರೂಪಿಸಲಾಗಿದೆ. ಕೊಂದ ಜಾನುವಾರ ಕಳೆಬರ ತಿನ್ನಲು ಹುಲಿ ಆಗಮಿಸುವ ಹಿನ್ನೆಲೆಯಲ್ಲಿ ಮರದ ಮೇಲಿಂದ ಶಾರ್ಫ್ ಶೂಟರ್ ಮೂಲಕ ಅರವಳಿಕೆ ಮಚ್ಚು ಸಿಡಿಸಲು ಉದ್ದೇಶಿಸಲಾಗಿದೆ. ಹನ್ನೆರಡು ದಿನದಿಂದ ನಡೆಯುತ್ತಿರುವ ಕಾರ್ಯಾಚರಣೆ ಫಲಪ್ರದವಾಗಿಲ್ಲ ಎಂಬ ಟೀಕೆ ಜನವಲಯದಿಂದ ವ್ಯಕ್ತವಾಗಿದೆ.
ಹುಲಿ ದಾಳಿಗೆ ಇಬ್ಬರು ಜೀವ ಕಳೆದುಕೊಂಡಿದ್ದು, ಹಲವು ಜಾನುವಾರು ಬಲಿಯಾಗಿದೆ. ನರಹಂತಕ ಹುಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಗಮಿಸಿರುವುದು ದೃಢಪಟ್ಟಿದೆ. 2013 ರಲ್ಲಿ ಸರ್ವೇ ವೇಳೆ ಕಲ್ಲಳ್ಳ ವಲಯದಲ್ಲಿ ಪತ್ತೆಯಾದ ಹುಲಿ, ದಕ್ಷಿಣ ಕೊಡಗಿನ ಗ್ರಾಮದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆ ಅಳವಡಿಸಲು ಸಿಸಿ ಕ್ಯಾಮರಾದಲ್ಲಿ ಸೆರೆಸಿಕ್ಕ ಹುಲಿ ಹಾಗೂ 2013ರ ಸಮೀಕ್ಷೆಯಲ್ಲಿ ಪತ್ತೆಯಾದ ಹುಲಿ ಒಂದೇ ಆಗಿದೆ. ಈ ಹುಲಿಗೆ ಅಂದಾಜು 11 ವರ್ಷ ಪ್ರಾಯವಾಗಿದ್ದು, ಗಂಡು ಹುಲಿಯಾಗಿದೆ.
ರಮೇಶಣ್ಣನ ಮರ್ಯಾದೆ ತೆಗೆಯಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ, ದಿನೇಶ್ ಕಲ್ಲಹಳ್ಳಿ ಕೇವಲ ದಾಳ…

ಜಾರಕಿಹೊಳಿ ಸೆಕ್ಸ್​ ಸಿಡಿ ರಿಲೀಸ್​ಗೂ ಮುನ್ನ ದಿನೇಶ್ ಕಲ್ಲಹಳ್ಳಿ ಲಾಡ್ಜ್​ಗೆ ಹೋಗಿದ್ದೇಕೆ? ಸಿಸಿ ಕ್ಯಾಮರಾದಲ್ಲಿ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − four =
Remember me
