ಆನೇಕಲ್:ಕಳೆದ ಎರಡು ವರ್ಷಗಳಿಂದ ಬೆನ್ನುಹುರಿ ಗಾಯ ಹಾಗೂ ಹಿಂಭಾಗದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ಬನ್ನೇರುಘಟ್ಟ ಅರಣ್ಯದ ಸುರೇಶ ಎಂಬ ಹುಲಿ ಮೃತಪಟ್ಟಿದೆ.
ಈ ಹುಲಿಗೆ 13 ವರ್ಷ ವಯಸ್ಸಾಗಿತ್ತು. ಮೂತ್ರ ಮತ್ತು ಮಲ ವಿಸರ್ಜನೆಗೆ ಎದ್ದೇಳಲು ಕಷ್ಟ ಪಡುತ್ತಿತ್ತು. ಹೀಗಾಗಿ ಹುಲಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿತ್ತು. ಪುನರ್ವಸತಿ ಕೇಂದ್ರದಲ್ಲಿ ನುರಿತ ವೈದ್ಯರ ತಂಡದಿಂದ ಲೇಸರ್ ಚಿಕಿತ್ಸೆ ಹಾಗೂ ಇತರೆ ಪೂರಕ ಚಿಕಿತ್ಸೆ ನೀಡಲಾಗುತ್ತಿತ್ತು.
ಹುಲಿಯ ಹಿಂಭಾಗದ ಎರಡು ಕಾಲಿನ ಮೇಲಾದ ಗಾಯ ಸೆಪ್ಟಿಸೆಮಿಯಾಕ್ಕೆ ಕಾರಣವಾಗಿತ್ತು. ಗಾಯ ಉಲ್ಬಣವಾಗುತ್ತಿದ್ದರಿಂದಾಗಿ ಹುಲಿ ಆಹಾರ ಸೇವಿಸದೆ ಸಂಪೂರ್ಣವಾಗಿ ಅಸ್ವಸ್ಥಗೊಂಡಿತ್ತು. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಹುಲಿ ಸುರೇಶ ಸಾವನ್ನಪ್ಪಿದೆ.
ಮೃತ ಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಬನ್ನೇರುಘಟ್ಟ ಅರಣ್ಯ ಸಿಬ್ಬಂದಿಗಳು ಸಂಗ್ರಹಿಸಿದ್ದಾರೆ. ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + five =
Remember me
