ಮೈಸೂರು:ಎರಡು ವಾರಗಳ ಹಿಂದೆ ಬಾಲಕನನ್ನು ಕೊಂದು ತಿಂದಿದ್ದ ಹುಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಎಚ್‌.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ತಾವರೆನಾಯ್ಕ ಎಂಬುವವರ ಜಮೀನಿನಲ್ಲಿ ಹುಲಿ ಸೆರೆಯಾಗಿದೆ.
15 ದಿನಗಳ ಹಿಂದೆ ಕಲ್ಲಹಟ್ಟಿ ಗ್ರಾಮದ 9 ವರ್ಷದ ಚರಣ್ ಎಂಬ ಬಾಲಕನನ್ನು 5 ವರ್ಷದ ಹುಲಿ ಕೊಂದು ತಿಂದಿತ್ತು. ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಗ್ರಾಮದ ಸುತ್ತ ಹಲವೆಡೆ ಬೋನುಗಳನ್ನು ಇರಿಸಲಾಗಿತ್ತು.
ಇದನ್ನೂ ಓದಿ:EMI ಪಾವತಿಸಲು ಒಪ್ಪದಿದ್ದಕ್ಕೆ ಪ್ರಿಯಕರನ ಮನೆಯಲ್ಲೇ ಸಾವಿಗೆ ಶರಣಾದ ಟೆಕ್ಕಿ
ಬೋನು ಇರಿಸಿದರೂ ಕೂಡ ಬೋನಿಗೆ ಬೀಳದೆ ಅಲ್ಲಲ್ಲಿ ಸಾಕು ಪ್ರಾಣಿಗಳನ್ನು ಕೊಂದು ನಾಪತ್ತೆಯಾಗುತ್ತಿತ್ತು. ಮಂಗಳವಾರ ಸಂಜೆ ತಾವರೆನಾಯ್ಕ ಅವರ ಹೋರಿಯನ್ನು ಹುಲಿ ಕೊಂದು ತಿಂದಿದೆ. ಅದರ ಮಾಹಿತಿ ಮೇಲೆ ಹೋರಿ ಸತ್ತ ಜಾಗದಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು.
ಬೋನಿರಿಸಿದ ಕೆಲವೇ ಕ್ಷಣದಲ್ಲಿ ಮೇಕೆ ತಿನ್ನಲು ಬಂದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಕಾಳಗದಲ್ಲಿ ಗಾಯಗೊಂಡು ಭೇಟೆಯಾಡಲು ಅಶಕ್ತವಾಗಿ ಹುಲಿ ನಾಡಿಗೆ ಬಂದಿದೆ ಎಂದು ಹೇಳಲಾಗಿದೆ. ಇದೀಗ ಸೆರೆಯಾದ ಹುಲಿ ನೋಡಲು ನಾಗರಹೊಳೆ ಅಭಯಾರಣ್ಯದ ಮೇಟಿಕುಪ್ಪೆ ವಲಯದಲ್ಲಿ ಬರುವ ಕಲ್ಲಹಟ್ಟಿ ಗ್ರಾಮಸ್ಥರು ಮುಗಿಬಿದ್ದಿದ್ದಾರೆ.
ಕೆನಡಾ-ಭಾರತ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು: ಪ್ರಚೋದನೆಗೆ ಯತ್ನಿಸುತ್ತಿಲ್ಲ ಎಂದ ಜಸ್ಟಿನ್ ಟ್ರುಡೊ

ಶಾಸನ ಸಭೆಗೆ 33% ನಾರಿಶಕ್ತಿ: ಮಹಿಳಾ ಮೀಸಲಾತಿ ಭರವಸೆ ಈಡೇರಿಸುವತ್ತ ನರೇಂದ್ರ ಮೋದಿ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
