ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾದ ವಿಜಯದಶಮಿ, ಜಂಬೂಸವಾರಿ ಹಿನ್ನೆಲೆಯಲ್ಲಿ ಈಗಾಗಲೇ ಆಚರಣೆಗಳು ಆರಂಭವಾಗಿದ್ದು, ಅರಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಿದೆ.
ಕಣ್ಮನ ಸೆಳೆಯುವ ದಸರಾ ವೀಕ್ಷಣೆಗೆ ಈ ಹಿಂದೆಲ್ಲ ಅಸಂಖ್ಯಾತ ಜನರು ಸೇರುತ್ತಿದ್ದರೆ, ಈ ಸಲ ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಮಾತ್ರವಲ್ಲ, ಈ ಬಾರಿ ದಸರಾ ವೀಕ್ಷಣೆಗೆ 300 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಭಾರಿ ಭದ್ರತೆ:ದಸರಾ ಹಿನ್ನೆಲೆಯಲ್ಲಿ ಮೈಸೂರು ಸುತ್ತಮುತ್ತ ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿದೆ. ಅರಮನೆ ಆವರಣ ಸೇರಿ ಅರಮನೆಯ ಸುತ್ತ ತೀವ್ರ ಕಣ್ಗಾವಲು ಇರಿಸಲಾಗಿದ್ದು, ಬೆಳಗ್ಗೆಯಿಂದಲೇ ಭದ್ರತಾ ಪರಿಶೀಲನೆ ನಡೆಯುತ್ತಿದೆ. ಶ್ವಾನದಳ ಹಾಗೂ ಬಾಂಬ್​ ನಿಷ್ಕ್ರಿಯ ದಳದಿಂದ ಪರಿಶೀಲನೆಯನ್ನೂ ನಡೆಸಲಾಗಿದೆ. ಅರಮನೆಯ ಸುತ್ತ ಹಾಗೂ ಒಳ ಭಾಗದಲ್ಲಿ‌ ಒಟ್ಟು 5 ತಂಡಗಳಿಂದ ತಪಾಸಣೆ ನಡೆಸಲಾಗಿದ್ದು, ಅರಮನೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ಗಜಚಿತ್ತಾರ:ಮತ್ತೊಂದೆಡೆ ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು ಆನೆಗಳಿಗೆ ವರ್ಣಾಲಂಕಾರ ನಡೆಯುತ್ತಿದೆ. ಖ್ಯಾತ ಕಲಾವಿದ, ಹುಣಸೂರು ಮೂಲದ ನಾಗಲಿಂಗಪ್ಪ ಅವರ ನೇತೃತ್ವದಲ್ಲಿ ಗಜಪಡೆಗೆ ಚಿತ್ರ ಬಿಡಿಸಲಾಗುತ್ತಿದೆ. ಒಟ್ಟು ಐವರು ಕಲಾವಿದರು ಈ ಕಾರ್ಯದಲ್ಲಿ ನಿರತರಾಗಿದ್ದು ಅಭಿಮನ್ಯು, ಕಾವೇರಿ, ವಿಜಯಾ, ಗೋಪಿ, ವಿಕ್ರಮ ಆನೆಗಳ ಮೇಲೆ ಬಣ್ಣದ ಚಿತ್ತಾರವನ್ನು ಮೂಡಿಸುತ್ತಿದ್ದಾರೆ. ಜಂಬೂಸವಾರಿ ಆನೆಗಳ ಮೇಲೆ ಇವರು ಗಂಡಬೇರುಂಡ, ಶಂಖ, ಚಕ್ರ ತರು, ಲತೆ ಮುಂತಾದ ಚಿತ್ರಗಳನ್ನು ಚಿತ್ರಿಸುತ್ತಿದ್ದಾರೆ. ಈ ಕಲಾವಿದರು 16 ವರ್ಷಗಳಿಂದ ಆನೆಗಳ ಮೇಲೆ ಚಿತ್ರ ಬರೆದುಕೊಂಡು ಬಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 11 =
Remember me
