ಬೆಂಗಳೂರು:ನಗರದೆಲ್ಲೆಡೆ ಏ.20ರವರೆಗೆ ನಿಷೇಧಾಜ್ಞೆ ಪರಿಣಾಮಕಾರಿಯಾಗಿಸಿ ಲಾಕ್​ಡೌನ್ ಮುಂದು ವರಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬೆಂಗಳೂರು ನಗರದ 12 ಗಡಿ ಭಾಗಗಳನ್ನು (ಬಾರ್ಡರ್) ಸೀಲ್ ಮಾಡಲಾಗಿದೆ. ಏ.20ರ ವರೆಗೆ ಸಾರ್ವಜನಿಕರಿಗೆ ಬೆಂಗಳೂರು ಬಿಟ್ಟು ಹೊರ ಹೋಗಲು ಅಥವಾ ನಗರಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಪೊಲೀಸರ ಕಣ್ತಪ್ಪಿಸಿ ಬೇರೆ ಜಿಲ್ಲೆಗೆ ಹೋದರೂ ಅಲ್ಲಿ ಸಿಕ್ಕಿ ಬಿದ್ದರೆ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ನಗರದ ಗಡಿಭಾಗಗಳಲ್ಲಿ ವಿಡಿಯೋ ಕ್ಯಾಮರಾ, ವಿಜಿಲೆನ್ಸ್ ಹಾಕಿ ಅನಗತ್ಯವಾಗಿ ಓಡಾಡುವ ವಾಹನಗಳನ್ನು ಜಪ್ತಿ ಮಾಡಲಾಗುವುದು. ಆದರೆ, ಗೂಡ್ಸ್ ವಾಹನ, ಹಣ್ಣು, ತರಕಾರಿ, ದಿನಸಿ ಪದಾರ್ಥ, ಮಾಂಸ ತರುವ ವಾಹನಗಳಿಗೆ ಓಡಾಡಲು ಅವಕಾಶ ಕೊಡಲಾಗುತ್ತದೆ. ವೈದ್ಯಕೀಯ ಚಿಕಿತ್ಸೆಯಿದ್ದರೂ ಅವರ ಜಿಲ್ಲೆಗಳಲ್ಲೇ ಮಾಡಿಕೊಳ್ಳಬೇಕು ಎಂದರು.
ಏ.20ರವರೆಗೆ ಹೊರ ರಾಜ್ಯಗಳಿಗೆ ಹೋಗಲು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕುಟುಂಬಸ್ಥರು ಮೃತಪಟ್ಟ ಸಂದರ್ಭದಲ್ಲಿ ಮಾತ್ರ ಹೋಗಲು ಅವಕಾಶ ಕೊಡಲಾಗುತ್ತದೆ. ಅಂಥವರು ಡಿಜಿಪಿ ಕಚೇರಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರನ್ನು ಭೇಟಿಯಾಗಿ ಅನುಮತಿ ಪಡೆಯಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಕೇರಳ ಹಾಗೂ ಮಹಾರಾಷ್ಟ್ರಕ್ಕೆ ಹೋಗಲು ಅವಕಾಶ ಕೊಡಲಾಗುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಪಾಸ್ 20ರವರೆಗೆ ಸಿಂಧು:ಈಗಾಗಲೇ ಮಾ.24ರಿಂದ ಅಗತ್ಯ ಓಡಾಟವಿರುವವರಿಗೆ ನೀಡಿದ ಪಾಸ್ ಅನ್ನು ಏ.20ರ ಮಧ್ಯರಾತ್ರಿವರೆಗೆ ಮುಂದುವರಿಸಲಾಗಿದೆ. ಈ ಪಾಸ್​ನ ಅವಧಿ ಏ.14ರವವರೆಗೆ ಎಂದು ನಮೂದಿಸಲಾಗಿದ್ದರೂ 20ರವರೆಗೆ ಬಳಕೆ ಮಾಡಬಹುದು ಎಂದು ಭಾಸ್ಕರ್ ರಾವ್ ತಿಳಿಸಿದರು.
ಈಗಾಗಲೇ 1.87 ಲಕ್ಷ ಪಾಸ್ ವಿತರಿಸಲಾಗಿದ್ದು, ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಪಾಸ್ ಇದ್ದವರು ಅನಗತ್ಯವಾಗಿ ತಿರುಗಾಡುತ್ತಿರುವುದು, ಕೆಲವೆಡೆ ಪಾಸ್​ಗಳನ್ನು ಜೆರಾಕ್ಸ್ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದರು.
ವೈದ್ಯಕೀಯ ತುರ್ತು ಪಾಸ್​ಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಪಡೆದು ನಗರದಲ್ಲಿ ಆಸ್ಪತ್ರೆಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ನೈಜ ದಾಖಲೆಗಳನ್ನು ಠಾಣೆಯಲ್ಲಿರುವ ಅಧಿಕಾರಿಗಳಿಗೆ ತೋರಿಸಿ ತುರ್ತು ಪಾಸ್ ಪಡೆದು 12 ಗಂಟೆ ಅವಧಿವರೆಗೆ ಬಳಸಿಕೊಳ್ಳಬಹುದು. ವೇತನ ಪಾವತಿ ಮಾಡುವವರೂ ಬಳಸಬಹುದು. ಆದರೆ, ಸರ್ಕಾರಿ ವಾಹನ ದುರ್ಬಳಕೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
