ಬೆಂಗಳೂರು:ಯುವಕರಿಂದ ಹಿಡಿದು ವಯಸ್ಕರನ್ನು ತನ್ನತ್ತ ಸೆಳೆದಿರುವ ವಿಡಿಯೋ ಶೇರಿಂಗ್​ ಆ್ಯಪ್​ ಟಿಕ್​ಟಾಕ್​ ಇದೀಗ ಬೆಂಗಳೂರು ಪೊಲೀಸರ ಗಮನವನ್ನು ಸೆಳೆದಿದೆ.
ಹೌದು, ಜನಪ್ರಿಯ ಟಿಕ್​ಟಾಕ್​ ಆ್ಯಪ್​ಗೆ ಬೆಂಗಳೂರು ನಗರ ಪೊಲೀಸರು ಪ್ರವೇಶ ನೀಡಿದ್ದಾರೆ. ಪರಿಣಾಮಕಾರಿಯಾಗಿ ಸಾರ್ವಜನಿಕರನ್ನು ತಲುಪಲು ಈ ನಿರ್ಧಾರ ಮಾಡಿದ್ದು, ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ಟಿಕ್​ಟಾಕ್ ಖಾತೆ ತೆರೆಯಲಾಗಿದೆ.
ವಿಶೇವೆಂದರೆ ದೇಶದಲ್ಲಿ ಮೊದಲ ಬಾರಿಗೆ ಟಿಕ್​ಟಾಕ್ ಖಾತೆ ತೆರೆದ ಕೀರ್ತಿಗೆ ಬೆಂಗಳೂರು ಪೊಲೀಸರು ಭಾಜನರಾಗಿದ್ದಾರೆ. ತಮ್ಮ ವತಿಯಿಂದ ಯಾವುದಾದರೂ ಜನಪರ ಕಾರ್ಯಕ್ರಮ ನಡೆದರೆ, ಅದನ್ನು ಟಿಕ್​ಟಾಕ್ ಖಾತೆಗೆ ಅಪ್​ಲೋಡ್​ ಮಾಡಿ, ಈ ಮೂಲಕ ಜನರನ್ನು ತಲುಪುವ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಸದ್ಯ ಖಾತೆಯಲ್ಲಿ ಬೆಂಗಳೂರು ಪೊಲೀಸರು ಮೂರು ವಿಡಿಯೋಗಳನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇರುವ ಮಾರ್ಗಗಳನ್ನು ಬೆಂಗಳೂರು ಪೊಲೀಸರು ಅನುಸರಿಸುತ್ತಿದ್ದಾರೆ.
ಸದ್ಯದ ಮಟ್ಟಿಗೆ ಭಾರತದಲ್ಲಿ ಟಿಕ್​ಟಾಕ್​ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಟಿಕ್​ಟಾಕ್​ ಬಳಸುತ್ತಿದ್ದಾರೆ. ಹೀಗಾಗಿ ಯುವ ಸಮುದಾಯ ತಲುಪಲು ಇದೊಂದು ಪರಿಣಾಮಕಾರಿ ಮಾರ್ಗವಾಗಿದೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven − 1 =
Remember me
