ಕಡಬ:ಯಾಂತ್ರಿಕ ಕೃಷಿ ಚಟುವಟಿಕೆಗಳಿಗೆ ಒಗ್ಗಿಕೊಳ್ಳುತ್ತಿರುವ ರೈತರಿಗೆ ತೋಟದ ನಡುವೆ ಸಾಗುವ ಸಣ್ಣ ಟಿಪ್ಪರ್ ಅನ್ನು ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಪುರುಷೋತ್ತಮ್ ಎಂಬ 23ರ ಯುವಕ ಆವಿಷ್ಕಾರ ಮಾಡಿದ್ದಾರೆ.
ಯಮಹಾ ಸ್ಕೂಟರ್ ಅನ್ನು ಮಾರ್ಪಾಡು ಮಾಡಿ ಈ ಟಿಪ್ಪರ್ ಸಿದ್ಧಪಡಿಸಲಾಗಿದೆ. ಈ ವಾಹನ ತೋಟಕ್ಕೆ ಮಣ್ಣು ಹಾಕಲು, ಅಡಕೆ ಲೋಡ್ ಮಾಡಲು ಬಳಸಬಹುದು. ಗಿಡ ಹಾಗೂ ಇತರ ಬೆಳೆಗಳಿರುವ ತೋಟದ ಮಧ್ಯೆ ಲಾರಿಗಳ ಸಂಚಾರ ಕಷ್ಟ. ಈ ಟಿಪ್ಪರ್ ಲಾರಿಯ ಕೆಲಸ ಮಾಡುತ್ತದೆ ಎನ್ನುವುದು ಪುರುಷೋತ್ತಮ್ ಅಭಿಪ್ರಾಯ.
ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಬಾಬು ಶೆಟ್ಟಿ -ಯಮುನಾ ದಂಪತಿಯ ಪುತ್ರ ಪುರುಷೋತ್ತಮ ಈ ಹಿಂದೆಯೂ ಹಲವು ಆವಿಷ್ಕಾರ ಮಾಡಿದ್ದು, ಡಾ.ವೀರೇಂದ್ರ ಹೆಗ್ಗಡೆಯವರೇ ಖುದ್ದು ಇವರ ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಶಾಸಕ ಅಂಗಾರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಂತಿಕಲ್ಲು ಕೆ.ಎಸ್.ಗೌಡ ಐಟಿಐನಲ್ಲಿ ಅಭ್ಯಸಿಸುತ್ತಿರುವ ಪುರುಷೋತ್ತಮ್, ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಜೆಕ್ಟ್ ವರ್ಕ್ ಮಾಡುತ್ತಿದ್ದಾರೆ.
2 ಕ್ವಿಂಟಾಲ್ ಹೊರುವ ಸಾಮರ್ಥ್ಯ:130 ಸಿಸಿ ಇಂಜಿನ್ ಸ್ಕೂಟರನ್ನು ಮಾರ್ಪಡಿಸಿ ವಿವಿಧ ಉಪಕರಣಗಳನ್ನು ಜೋಡಿಸಲಾಗಿದೆ. ಟಿಪ್ಪರ್ ಹಿಂದೆ ಮುಂದೆ ಸಲೀಸಾಗಿ ಸಾಗುವಂತೆ ಮಾಡಲು ಗೇರ್ ಬಾಕ್ಸ್ ಅಳವಡಿಸಲಾಗಿದೆ. 3 ಫೀಟ್ ಅಗಲದ ಬಾಡಿ ನಿರ್ಮಿಸಲಾಗಿದ್ದು, ಎರಡು ಕ್ವಿಂಟಾಲ್ ತೂಕ ಹೊರುವ ಸಾಮರ್ಥ್ಯ ಹೊಂದಿದೆ.

ಗಡಿಯಲ್ಲಿ ದ್ವಿಗುಣವಾದ ಚೀನಾ ವೈಮಾನಿಕ ವ್ಯವಸ್ಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + fifteen =
Remember me
