ಧಾರವಾಡ:ಇಟ್ಟಿಗಟ್ಟಿ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಟೆಂಪೋ ಟ್ರಾವೆಲರ್​ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಬದುಕುಳಿದವರ ಪೈಕಿ ಆಶಾ ಎಂಬುವವರಿಗೆ ಪ್ರಜ್ಞೆ ಬಂದಿದ್ದು, ಅಪಘಾತದ ಆ ಕ್ಷಣವನ್ನು ಆಸ್ಪತ್ರೆಯ ಬೆಡ್​ ಮೇಲೆ ಮಲಗಿದ್ದಲ್ಲೇ ಪೊಲೀಸರ ಬಳಿ ವಿವರಿಸಿದ್ದಾರೆ.
‘ನಾವೆಲ್ಲ ಎಲ್.ಕೆ.ಜಿ ಯಿಂದ ಒಟ್ಟಿಗೆ ಓದಿಕೊಂಡು ಬೆಳೆದ ಸ್ನೇಹಿತರು. ಹದಿನೇಳು ಜನ ಗೋವಾಗೆ ರಿಲ್ಯಾಕ್ಸ್​ಗಾಗಿ ಹೊರಿಟಿದ್ವಿ. ರೆಸಾರ್ಟ್ ಕೂಡ ಬುಕ್ ಮಾಡಿಕೊಂಡಿದ್ವಿ. ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಎಲ್ಲರೂ ಸೇರಿ ಪ್ರವಾಸದ ಪ್ಲ್ಯಾನ್ ಮಾಡಿದ್ವಿ. ನನ್ನ ಕಜೀನ್‌ಗೆ ಫೋನ್ ಮಾಡಿ ಧಾರವಾಡಕ್ಕೆ ಬರೋ ಬಗ್ಗೆ ಹೇಳಿದ್ವಿ… ಅಷ್ಟರಲ್ಲಿ…’ ಎನ್ನುತ್ತಲೇ ಬಿಕ್ಕಳಿಸುತ್ತ ಅತ್ತರು.ಇದನ್ನೂ ಓದಿರಿವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್
‘ನಾವೆಲ್ಲ ಪ್ರವಾಸಕ್ಕೆ ಹೊರಟಿದ್ದು ಟೆಂಪೋ ಟ್ರಾವೆಲರ್​ನಲ್ಲಿ. ನಾನು ಹಿಂದಿನ ಸೀಟ್​ನಲ್ಲಿ ಕುಳಿತಿದ್ದೆ. ಅಪಘಾತ ಆಗುವ ಮುನ್ನ ನಾನು ಮಲಗಿದ್ದೆ. ಅಪಘಾತ ಆದಾಗ ಸಡನ್ ಆಗಿ ಎದ್ದೆ. ಆಗ ನನ್ನ ಕೈಯಲ್ಲಿ ಮೊಬೈಲ್ ಇತ್ತು. ಆ ಕೂಡಲೇ ನನ್ನ ಕಜೀನ್‌ಗೆ ಕಾಲ್​ ಮಾಡಿ ವಿಷಯ ಹೇಳಿದೆ. ಮತ್ತೆ ಮನೆಯವರಿಗೆ ನನ್​ ಫ್ರೆಂಡ್​ ಗಂಡನಿಗೂ ಕಾಲ್​ ಮಾಡಿ ಆಕ್ಸಿಡೆಂಟ್​ ಆಗಿದೆ ಎಂದು ತಿಳಿಸಿದೆ. ಅವರೆಲ್ಲರೂ ಈಗ ಹೇಗಿದ್ದಾರೆ ಸರ್​… ಹೇಳಿ ಸರ್…’ ಎಂದು ಆಶಾ ಕಣ್ಣೀರು ಸುರಿಸುತ್ತಾ ಪೊಲೀಸರನ್ನು ಕೇಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಧಾರವಾಡದಲ್ಲಿ ಭೀಕರ ಅಪಘಾತ, 13 ಮಂದಿ ಸಾವು: ಸಂತಾಪ ಸೂಚಿಸಿದ ಪ್ರಧಾನಿ

ಈ ಒಂದು ನಿರ್ಧಾರವೇ ದುರಂತ ಸಾವಿಗೆ ಕಾರಣವಾಯ್ತಾ? ಮೃತರ ಸಂಬಂಧಿ ಗೋಳಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
