-8 ವರ್ಷದ ಮಗಳು ಸಾವು, ತಾಯಿ, ಮಗ ಅಸ್ವಸ್ಥ
ಕೊಳ್ಳೇಗಾಲ:ಕುಡಿದು ಜಗಳವಾಡುತ್ತಿದ್ದ ಗಂಡನ ವರ್ತನೆಗೆ ಬೇಸತ್ತು ಹೆಂಡತಿ ತಾನೂ ವಿಷ ಕುಡಿದು ತನ್ನ ಇಬ್ಬರು ಮಕ್ಕಳಿಗೂ ವಿಷ ಉಣಿಸಿದ್ದಾಳೆ. ಈ ಪರಿಣಾಮ 8 ವರ್ಷದ ಮಗಳು ಮೃತಪಟ್ಟಿದ್ದು, ತಾಯಿ ಹಾಗೂ ಮಗನ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ತಾಲೂಕಿನ ಮಧುವನಹಳ್ಳಿ ಗ್ರಾಮದ ಷಣ್ಮುಗ ಎಂಬುವರ ಪುತ್ರಿ ಸಿಂಧು (8) ಮೃತ ಪಟ್ಟ ಬಾಲಕಿ. ಪತ್ನಿ ಶೀಲಾ( 28), ಪುತ್ರ ದುಷ್ಯಂತ್(10) ಅಸ್ವಸ್ಥಗೊಂಡವರು.
ಇದನ್ನೂ ಓದಿ:ಬಿಬಿಎಂಪಿಯಲ್ಲಿ ಮೇಜರ್ ಸರ್ಜರಿಗೆ ಮುಂದಾದ ಡಿಸಿಎಂ; ಆರ್​​​ಆರ್ ನಗರ ವಲಯಕ್ಕೆ ನೂತನ ಅಧಿಕಾರಿಗಳ ನೇಮಕ
ನಡೆದಿದ್ದೇನು?:ಷಣ್ಮುಗ ಮಂಗಳವಾರ ಕುಡಿದ ಮತ್ತಿನಲ್ಲಿ ಪತ್ನಿ ಜತೆ ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾನೆ. ಇದ್ದರಿಂದ ಬೇಸತ್ತಿದ್ದ ಶೀಲಾ ಬುಧವಾರ ಬೆಳಗ್ಗಿನ ಜಾವದಲ್ಲಿ ತಾನೂ ವಿಷ ಸೇವಿಸಿ ಮಕ್ಕಳಾದ ಸಿಂಧು, ದುಷ್ಯಂತ್ ಗೂ ವಿಷ ಕುಡಿಸಿದ್ದಾಳೆ. ಮನೆಯಲ್ಲಿ ‌ವಿಷ ಕುಡಿದು ಅಸ್ವಸ್ಥಗೊಂಡಿದ್ದ ಮೂವರನ್ನು ನೋಡಿದ ನೆರೆ-ಹೊರೆಯವರು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯ ಹೊಟ್ಟೆ ಸ್ಕ್ಯಾನ್​ ಮಾಡಿದಾಗ ವೈದ್ಯರಿಗೆ ಕಾದಿತ್ತು ಶಾಕ್! ಪತ್ತೆಯಾಯ್ತು 11.5 ಕೆ.ಜಿ. ಗಡ್ಡೆ…
ಸಕಾಲಕ್ಕೆ ಆಸ್ಪತ್ರೆಗೆ ರವಾನಿಸಲಾಗದ ಕಾರಣಕ್ಕೆ ಬಾಲಕಿ ಸಿಂಧು ಮೃತ ಪಟ್ಟಿದ್ದಾಳೆ. ಇನ್ನಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಷಣ್ಮುಗ ನಾಪತ್ತೆಯಾಗಿದ್ದಾನೆ. ಗ್ರಾಮಾಂತರ ಪೊಲೀ ಸರು ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + sixteen =
Remember me
