ವಿಜಯಪುರ: ವಿದ್ಯಾರ್ಥಿಗಳು ವಿಜ್ಞಾನಿಗಳಾಗಲು ಬಾಲ್ಯದಿಂದಲೇ ಆಸಕ್ತಿ ತೋರಿಸಿ ಗುರಿ ಸಾಧನೆಯತ್ತ ತಮ್ಮ ವಿದ್ಯಾಭ್ಯಾಸ ಕೇಂದ್ರೀಕರಿಸಬೇಕು ಎಂದು ಇಸ್ರೋದ ಹಿರಿಯ ವಿಜ್ಞಾನಿ ವಿಲಾಸ ರಾಠೋಡ ಹೇಳಿದರು.
ಇಲ್ಲಿನ ಸಂಗನಬಸವ ಕಲ್ಯಾಣಮಂಟಪದಲ್ಲಿ ವಿಜಯವಾಣಿ ಹಮ್ಮಿಕೊಂಡಿರುವ ಎಜುಕೇಷನ್ ಎಕ್ಸಪೋದಲ್ಲಿ ಭಾಗವಹಿಸಿ ಮೂಲ ವಿ, ರಾಕೆಟ್ ಮತ್ತು ಸೆಟ್‌ಲೈಟ್‌ಗಳ ಪ್ರಯೋಜನ ಕುರಿತು ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಚಂದ್ರಯಾನ-3 ಯಶಸ್ಸು ಒಂದು ರೋಮಾಂಚಕಾರಿ ಅನುಭವ. ವಿಜ್ಞಾನಿಗಳಿಗೆ ಮಾತ್ರವಲ್ಲದೆ ದೇಶಕ್ಕೆ ವಿಶ್ವಕಪ್ ಗೆದ್ದಿದ್ದಕ್ಕಿಂತಲೂ ಹೆಚ್ಚಿನ ಸಂಭ್ರಮ ತಂದುಕೊಟ್ಟಿತು. ಇದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಾವೂ ವಿಜ್ಞಾನಿಗಳಾಗಬೇಕು ಅನ್ನೋ ಸಂಕಲ್ಪ ಹುಟ್ಟಿಕೊಂಡಿದೆ ಎಂದರು.
1969 ರಿಂದಲೇ ನಮ್ಮ ದೇಶ ಬಾಹ್ಯಾಕಾಶದಲ್ಲಿ ಕೆಲಸ ಮಾಡುತ್ತಿದೆ. ಮೊದಲೆಲ್ಲ ಚಿಕ್ಕ ರಾಕೆಟ್​ ಉಡಾಯಿಸಬೇಕಿತ್ತು. ಈಗ ದೊಡ್ಡಮಟ್ಟದಲ್ಲಿ ಬೆಳೆದಿದ್ದೇವೆ. ನಾಲ್ವರು ಗಗನಯಾತ್ರಿಗಳಿಗೆ ತರಬೇತಿ ನೀಡಿ ಆಕಾಶಕ್ಕೆ ಹಾರಿಬಿಡಲು ಸಿದ್ಧತೆ ನಡೆದಿವೆ. ವಿಶ್ವದಲ್ಲಿ ಇಸ್ರೋಗೆ 400 ಬಿಲಿಯನ್​ ಡಾಲರ್ ಮಾರ್ಕೆಟ್ ಇದೆ ಎಂದರು.
ಸೆಟ್‌ಲೈಟ್ ತಯಾರಿಕೆಯಿಂದ ಹಿಡಿದು ಅದನ್ನು ಹಾರಿಬಿಡುವವರೆಗೆ ನಡೆಸಲಾಗುವ ಪ್ರತಿ ಕೆಲಸದ ಹಂತವನ್ನೂ ವಿವರಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ಅವರು, ಮುಂದಿನ ದಿನಗಳಲ್ಲಿ ನ್ಯೂಕ್ಲಿಯರ್ ಪವರ್, ಬಳಕೆ, ಆಕ್ಸಿಜನ್ ಹೈಡ್ರೋಜನ್ ಬಳಸಿ ಗಗನಯಾತ್ರಿಗಳಿಗೆ ಆಕಾಶದಲ್ಲೇ ನೀರು ಸಿಗುವ ವ್ಯವಸ್ಥೆ ಮಾಡುವತ್ತ ಗುರಿ ನೆಡಲಾಗಿದೆ. 2040ರವೇಳೆಗೆ ಬಾಹ್ಯಾಕಾಶ ಕೇಂದ್ರ ಸ್ಥಾಪಿಸಲು ಪ್ರಧಾನಿಯವರು ಸೂಚನೆ ನೀಡಿದ್ದಾರೆ. ಗಗನಯಾತ್ರಿಗಳಿಗೆ ತರಬೇತಿ ಕೊಡಲಾಗುತ್ತಿದೆ. ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷ ಗಗನಯಾತ್ರಿಗಳನ್ನು ಕಳಿಸಲಾಗುತ್ತದೆ. ಬಾಹ್ಯಾಕಾಶ ಪ್ರವಾಸೋದ್ಯಮ ಆರಂಭಿಸಲಾಗುತ್ತದೆ ಎಂದರು.
ರಾಷ್ಟ್ರೀಯ ಬಾಹ್ಯಾಕಾಶ ದಿನ ಯಾವಾಗ ಆಚರಿಸಲಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಅವರು, ಚಂದ್ರಯಾನ-3 ಯಶಸ್ವಿಯಾದ ಆಗಸ್ಟ್ 23 ಆ ದಿನವಾಗಿದೆ. ವಿಜ್ಞಾನ, ತಂತ್ರಜ್ಞಾನದಲ್ಲಿ ಹೊಸ ವಿಚಾರಗಳು ಬರುತ್ತಿವೆ. ನ್ಯಾನೋ ಟೆಕ್ನಾಲಜಿ ವೇಗ ಪಡೆಯುತ್ತಿದೆ. ಗಿಡ-ಮರ ನಾಶವಾಗಿ ಮುಂದೊಂದು ದಿನ ಭೂಮಿ ಇಲ್ಲವಾಗುತ್ತದೆ. ಅಷ್ಟರೊಳಗೆ ವಾಸಕ್ಕೆ ಯೋಗ್ಯವಾದ ಬೇರೆ ಗೃಹ ಪತ್ತೆ ಹಚ್ಚಬೇಕಿದೆ. ಇನ್ನೊಮ್ಮೆ ಚಂದ್ರನ ಮೇಲೆ ಮಾನವರನ್ನು ಇಳಿಸಿ, ವಾತಾವರಣ ಸೃಷ್ಟಿಸಿ, ಅಲ್ಲಿನ ಖನಿಜ, ವಾತಾವರಣ ಪರೀಕ್ಷೆಗೆ ಯೋಚನೆಗಳಿವೆ. 500 ಖಾಸಗಿ ಕಂಪನಿಗಳು ಇಸ್ರೋಕ್ಕೆ ಬೇಡಿಕೆ ಇಡತೊಡಗಿವೆ. ಮಹಿಳೆಯರೇ ತಯಾರಿಸಿದ ಸೆಟ್‌ಲೈಟ್‌ನ್ನು ಜ. 1ರಂದು ಹಾರಿಬಿಡಲಾಗಿದೆ. ಜ. 26ರಂದು ಗಣರಾಜ್ಯೋತ್ಸವ ಪರೇಡ್‌ನಲ್ಲಿ 250 ಮಹಿಳೆಯರು ಚಂದ್ರಯಾನ ಪ್ರದರ್ಶನ ನೀಡಿದ್ದು ಮಹಿಳಾ ಶಕ್ತಿಗೆ ಉದಾಹರಣೆಯಾಗಿದೆ. ವಿಜ್ಞಾನಿಗಳಲ್ಲಿ ಹೆಣ್ಣು, ಗಂಡು ಎನ್ನುವ ವ್ಯತ್ಯಾಸವಿಲ್ಲ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + four =
Remember me
