ಬೆಂಗಳೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ‘ಇಂಡಿಯನ್ ಮನಿ ಡಾಟ್ ಕಾಂ’ನ ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿ ವಿನ್ಯಾಸಗೊಳಿಸಿರುವ ವಿಶೇಷ ಕೋರ್ಸ್ ಇಂದು ಲೋಕಾರ್ಪಣೆ ಮಾಡಿದರು. ಬೆಂಗಳೂರಿನ
ಶಾಂತಿನಗರದಲ್ಲಿರುವ ‘ಇಂಡಿಯನ್ ಮನಿ ಡಾಟ್ ಕಾಂ’ನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಆದಾಯ ಹೆಚ್ಚಳದ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿರುವ “ಸಮಗ್ರ ಕೃಷಿಯಲ್ಲಿ 365 ದಿನಗಳೂ ಆದಾಯ ಗಳಿಸುವುದು ಹೇಗೆ?” ಎನ್ನುವ ಕೋರ್ಸ್ ಅರ್ಥಪೂರ್ಣವಾಗಿದೆ. ರೈತರ ಉನ್ನತಿಯಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ರೈತರಿಗೆ ಬಲ ತುಂಬಲು ಮುಂದಾಗಿರುವ ‘ಇಂಡಿಯನ್ ಮನಿ ಡಾಟ್ ಕಾಂ’ನ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಇದನ್ನೂ ಓದಿ:ಲೂಸ್​ ಪ್ಯಾಕೆಟ್​ಗಳಲ್ಲಿ ಈ ರಾಜ್ಯದಲ್ಲಿ ಇನ್ಮುಂದೆ ಎಣ್ಣೆ ಮಾರಾಟವಿಲ್ಲ- ಇದು ಹೈಕೋರ್ಟ್​ ಆದೇಶ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ‘ಇಂಡಿಯನ್ ಮನಿ ಡಾಟ್ ಕಾಂ’ ಸಂಸ್ಥಾಪಕ- ಸಿಇಒ ಸಿ.ಎಸ್. ಸುಧೀರ್, ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕಾದರೆ ಕಲಿಕೆ ಬಹಳ ಮುಖ್ಯ. ಈ ಮಾತು ಕೃಷಿ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ರೈತರಿಗೆ ಪ್ರಗತಿಪರ ರೈತರಿಂದಲೇ ಹೊಸ ವಿಚಾರಗಳನ್ನು ಕಲಿಸಲು ಮತ್ತು ತಿಳಿಸಲು ಫೈನಾನ್ಸಿಯಲ್ ಫ್ರೀಡಂ ಆ್ಯಪ್​ನಲ್ಲಿ ಹೊಸ ಕೋರ್ಸ್​​ಗಳನ್ನು ವಿನ್ಯಾಸಗೊಳಿಸಲಾಗಿದೆ. ರೈತರು ಇದರ ಸದುಪಯೋಗಪಡಿಸಿಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ವಾಟ್ಸ್​ಆ್ಯಪ್​ ವೆಬ್​ನಲ್ಲಿ ಇದು ಸಿಕ್ಕಿದ್ದರೆ ನೀವು ಲಕ್ಕಿನೇ; ಸಿಗದಿದ್ದವರಿಗೆ ಚಿಂತೆ ಬೇಡ…

ಮದುವೆಯಾಗಿ 2 ತಿಂಗಳಲ್ಲೇ ಹೊಟ್ಟೆಹಿಡಿದುಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ನೇಹಾ

ಶೀಲಗೆಟ್ಟರೂ ಅಡ್ಡಿಲ್ಲ, ಮಗುಬೇಕೆಂದು ನಿಮ್ಮನ್ನು ಬಳಸಿಕೊಂಡಳಾಕೆ- ನೀವು ಚಿಂತಿಸಿ ಪ್ರಯೋಜನವಿಲ್ಲ…

ಗ್ರಾ.ಪಂ ಚುನಾವಣಾ ಅಖಾಡಕ್ಕೆ ನಟಿ ರಂಜಿನಿ ರಾಘವನ್ ಎಂಟ್ರಿ: ಭರ್ಜರಿ ಪ್ರಚಾರಕ್ಕೆ ಸಿದ್ಧತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 18 =
Remember me
