ಬೆಂಗಳೂರು:ಯಾವ ಭಯೋತ್ಪಾದನೆ ವಿಚಾರದಲ್ಲಿ ಆರ್​ಎಸ್​ಎಸ್​ ಮುಂದಗಾಗಿದೆ ತೋರಿಸಲಿ. ತಮ್ಮ ರಾಜಕೀಯ ತೇವಲು ತೀರಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಇಂತಹ ಮತಾಂದರಿಂದಲೇ ದೇಶ ವಿಭಜನೆಯಾದ್ದು. ರಾಷ್ಟ್ರವನ್ನು ಪ್ರೀತಿಸಿ ಅನ್ನೋದು ಭಯೋತ್ಪಾದನೆಯಾ? ರಾಷ್ಟ್ರ ಭಕ್ತ ಯಾರು, ರಾಷ್ಟ್ರ ದ್ರೋಹಿ ಯಾರು ಅನ್ನೋದನ್ನು ಗುರುತಿಸಲು ಇವರಿಗೆ ಆಗಲ್ವಾ.? ಈ ಮನಸ್ಥಿತಿ ಇಂದ ಹೊರಗೆ ಬಾರದಿದ್ರೆ, ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ಆರ್​​ಎಸ್​ಎಸ್ ಬ್ಯಾನ್ ಮಾಡುವ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ಆರ್​​ಎಸ್​​ಎಸ್ ಮತ್ತು ಸಿಪಿಐ ಕಾರ್ಯಕರ್ತರ ಹತ್ಯೆಗೆ ಸಂಚು ರೂಪಿಸಲಾಗಿದೆ. ಹೀಗಾಗಿ ಇದನ್ನು ನಿಷೇಧ ಮಾಡಬೇಕು ಎಂದು 2012ರಲ್ಲಿ ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅಫಿಡವೀಟ್ ಸಲ್ಲಿಸುತ್ತದೆ. ಇತ್ತೀಚೆಗೆ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡಲು ಸಂಚೂ ರೂಪಿಸುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಸಿದ್ದರಾಮಯ್ಯ ಸರ್ಕಾರದ ಉಗ್ರ ಭಾಗ್ಯ ಯೋಜನೆಯಿಂದ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಯ್ತು. ಕಾರ್ಯಕರ್ತರ‌ ಕೊಲೆಯ ಮಾಸ್ಟರ್ ಮೈಂಡ್​​ನ ಹಿಂದೆ ಪಿಎಫ್​ಐ ಇತ್ತು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿದ್ದು ಆರ್​​ಎಸ್​​ಎಸ್​​ನವರಲ್ಲ. ನಿಮ್ಮ ಉಗ್ರ ಭಾಗ್ಯ ಯೋಜನೆಯಿಂದಲೇ ನಿಮಗೆ ಪೆಟ್ಟು ಬಿದ್ದಿದ್ದು. ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಬೇಕಿತ್ತು. ಕೇವಲ ರಾಜಕೀಯ ಲಾಭದ ಆಸೆಗೆ ಏನೇನೋ ಮಾತಾಡೋದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಸಿಟಿ ರವಿ ತಿರುಗೇಟು ನೀಡಿದರು.
2047ರ ಸಮಯಕ್ಕೆ ಅಂತರ್ ಯುದ್ಧದ ಮೂಲಕ ಭಾರತೀಯತೆ ನಾಶ ಮಾಡುವ ಮೊಗಲ್ ಸಾಮ್ರಾಜ್ಯ ನಿರ್ಮಿಸುವ ಬಗ್ಗೆ ತನಿಖೆಯಲ್ಲಿ ಉಲ್ಲೇಖವಾಗಿದೆ. ಬಹುಶಃ ಹೀಗೆ ಬಿಟ್ಟರೆ ಭಾರತ ಅಂತರ್ ಯುದ್ಧ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿತ್ತು. ಮುಸ್ಲಿಂ ಸಂಘಟನೆಗಳನ್ನು ಎತ್ತಿಕಟ್ಟಿ, ಎಡಪಂಥೀಯ ಉಗ್ರವಾದ ಹಾಗೂ ಭಾರತ ವಿಭಜಿಸುವ ಜೊತೆಗೆ ಭಾರತದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಉಲ್ಲೇಖವಾಗಿರುವ ಅಂಶ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
