ಬೆಂಗಳೂರು:ನಿಯೋಜನೆ ಮೇಲೆ ತೆರಳಿರುವವರನ್ನು ಮಾತೃ ಇಲಾಖೆಗೆ ಸಿಬ್ಬಂದಿಗಳನ್ನು ಕರೆಸಿಕೊಳ್ಳುವ ವಿಚಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರೇ ಅಸಾಹಯಕತೆ ವ್ಯಕ್ತಪಡಿಸಿದ ಘಟನೆ ಮೇಲ್ಮನೆಯಲ್ಲಿ ನಡೆಯಿತು.ಶಶೀಲ್ ಜಿ ನಮೋಶಿ ಪರವಾಗಿ ಮರಿತಿಬ್ಬೇಗೌಡರು ಕೇಳಿದ ಪ್ರಶ್ನೆಗೆ ಮೇಲ್ಮನೆಯಲ್ಲಿ ಉತ್ತರಿಸಿದ ಸಚಿವರು, ನಿಯೋಜನೆ ಮೇಲೆ ಹೋಗಿರುವವರನ್ನ ವಾಪಸ್ ಬರುವಂತೆ ಸೂಚಿಸಿದ್ದೇನೆ. ಆದರೆ ಕೆಲವರು ಮಂತ್ರಿಗಳು, ಶಾಸಕರ ಮೂಲಕ ಒತ್ತಡ ಹಾಕಿಸ್ತಿದಾರೆ. ಸಿಎಂ, ಡಿಸಿಎಂಗೆ ಈ ವಿಚಾರ ತಿಳಿಸಿದ್ದೇನೆ.ಇಲಾಖೆಗೆ ವಾಪಸ್ ಪಡೆದಿರುವ ವಿಚಾರವಾಗಿ ನಮ್ಮ ಶಾಸಕರೇ ನನ್ನ ಮೇಲೆ ಹಕ್ಕುಚ್ಯುತಿ ಮಾಡಿದ್ದಾರೆ ಎಂದರು.ಇಲಾಖೆಯಲ್ಲಿ ಸುಗಮ ಕೆಲಸ ಮಾಡುವ ಉದ್ದೇಶದಿಂದ ಮೂಲ ಇಲಾಖೆಗೆ ಸಿಬ್ಬಂದಿಯನ್ನ ಕರೆಸಿಕೊಳ್ತಿದೇನೆ. ಆದರೆ ಒತ್ತಡ ಹೆಚ್ಚಾಗ್ತಿದೆ, ಈ ವಿಚಾರವಾಗಿ ಸ್ಪೀಕರ್ ಅವರ ಬಳಿ ಹೇಳಿದ್ದೇನೆ.ಅವರು ಸಿಎಂ ಜೊತೆ ಮಾತನಾಡಿ ಸರಿಪಡಿಸೊಣ ಎಂದಿದ್ದಾರೆ. ಈ ವ್ಯವಸ್ಥೆಯನ್ನ ಸರಿಪಡಿಸಲು ಹೊದರೆ ನನ್ನ ಮೇಲೆ ಒತ್ತಡ ತರುತ್ತಿದ್ದಾರೆ. ಈ ರೀತಿ ಒತ್ತಡ ತಂದರೆ ನಾನು ವ್ಯವಸ್ಥೆಯೊಳಗೆ ಹೋಗಬೇಕಾಗ್ತದೆ. ಏನು ಮಾಡೊದು ಸಭಾಪತಿಗಳೇ ನೀವೆ ನನ್ನ ಬೆಂಬಲಕ್ಕೆ ಬರಬೇಕು ಎಂದು ಅವಲತ್ತುಕೊಂಡರು.ಗ್ರಾಮ ಪಂಚಾಯಿತಿಯ ಪಿಡಿಒ ಸಂಖ್ಯೆ ಕಡಿಮೆ ಇದೆ. ಇದರಿಂದ ಸಮರ್ಪಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎನ್ನುವುದು ಸರ್ಕಾರದ ಗಮನಕ್ಕೆ ಇದೆ ಎಂದರು.ಸಾವಿರಕ್ಕೂ ಹೆಚ್ಚಿನ ಮಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ನಿಯೋಜನೆ ಮೇಲೆ ಹೋಗಿದ್ದಾರೆ. ನಿಯೋಜನೆ ಕಡಿಮೆ ಮಾಡಬೇಕು ಎಂದು ಪ್ರಯತ್ನ ನಡೆಸುತ್ತಿದ್ದೇನೆ ಎಂದರು. ಖಾಲಿ ಹುದ್ದೆ ನೇಮಕಾತಿಯನ್ನ ಮಾಡಬೇಕು ಎಂದು ಹಣಕಾಸು ಇಲಾಖೆಗೆ ಪತ್ರಬರೆದಿದ್ದೇನೆ. ಕೇವಲ 150 ಮಂದಿ ನೇಮಕಾತಿಗೆ ಅನುಮೋದನೆ ಸಿಕ್ಕಿದೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಮಾಡಲಾಗುವುದು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 13 =
Remember me
