
ಬೆಂಗಳೂರು:ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಭೂಮಿಗಳ. ವರ್ಗಾವಣೆ ನಿಷೇಧ (ತಿದ್ದುಪಡಿ) ವಿಧೇಯಕಕ್ಕೆ ಮೇಲ್ಮನೆಯಲ್ಲಿಯೂ ಅಂಗೀಕಾರ ದೊರೆತಿದೆ.
ವಿಧೇಯಕ ಮಂಡನೆ ಮಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ಸರ್ಕಾರದಿಂದ ಎಸ್ಸಿ ಎಸ್ಟಿ ಸಮುದಾಯಕ್ಕೆ ನೀಡಿದ ಭೂಮಿಯನ್ನ ತಿಳುವಳಿಕೆಯ ಕೊರತೆಯ ಲಾಭ ಮಾಡಿಕೊಂಡು ಖರೀದಿ ಮಾಡುವಂತಹ ಪ್ರಕರಣಗಳಿಗೆ ತಡೆ ನೀಡಲು 1978 ರಲ್ಲಿ ಈ ಕಾಯ್ದೆ ತರಲಾಗಿತ್ತು ಎಂದರು.ಸರ್ಕಾರದಿಂದ ಅನುಮತಿ ಪಡೆಯದೆ ಖರೀದಿ ಮಾಡದಿದ್ದರೆ ಆ ಜಮೀನು ಮತ್ತೆ ಮೂಲ ಜಮೀನುದಾರರಿಗೆ ಭೂಮಿ ವಾಪಸ್ ಪಡೆಯುವ ಅವಕಾಶ ನೀಡಲಾಯಿತು. 2017 ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಈ ಕಾಯ್ದೆಯಲ್ಲಿ ಸಮಯದ ಕಾಲಮಿತಿ ಇಲ್ಲದ ಕಾರಣಕ್ಕೆ ಈ ಅರ್ಜಿದಾರರ ವಿರುದ್ಧ ತೀರ್ಪು ಬಂತು. ಈ ನ್ಯೂನತೆ ಸರಿಪಡಿಸಲು ದಲಿತ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿವೆ. ಹೀಗಾಗಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ನ್ಯೂನತೆ ಸರಿಪಡಿಸಿದ್ದೇವೆ ಎಂದು ಸದನಕ್ಕೆ ವಿವರಣೆ ನೀಡಿದರು.
ಸೆಕ್ಷನ್ 5 ಕ್ಕೆ ತಿದ್ದುಪಡಿ ತಂದು ಸಮಯದ ಅಪೀಲು ಹೋಗಲು ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಸಮುದಾಯಕ್ಕೆ ನಾವು ನ್ಯಾಯ ಕೊಡಿಸಿದ್ದೇವೆ. ಕೊಟ್ಟ ಮಾತಿನಿಂದ ನಡೆದಿದ್ದೇವೆ. ಹಾಲಿ ಬಾಕಿ ಇರುವ ಪ್ರಕರಣಗಳಿಗೆ ಈ ಕಾಯ್ದೆ ಅನ್ವಯಿಸಲಾಗುತ್ತೆ. ಎಸಿ, ಡಿಸಿ, ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ಅಪೀಲು ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜೆಡಿಎಸ್‌ನ ಮರಿತಿಬ್ಬೇಗೌಡ ಮಾತನಾಡಿ, ಕೆಲವು ಪ್ರಕರಣಗಳಲ್ಲಿ ಸರ್ಕಾರದ ಅನುಮತಿಯನ್ನು ಪಡೆದು ಮಾರಾಟ ಮಾಡಿರುವುದರಲ್ಲಿ ಲೋಪ ದೋಷ ಇದೆ. ಬೇರೆ ರೀತಿ ಅನ್ಯಾಯದಿಂದ ಸರ್ಕಾರದ ಅನುಮತಿ ಪಡೆದಿರುವ ಪ್ರಕರಣವೂ ಇದೆ. ಆರೋಗ್ಯ ಸಮಸ್ಯೆ, ಮಗಳ ಮದುವೆಗೆ ಹಣ ಬೇಕು ಎಂದು ಕಾರಣ ನೀಡಿ ಸರ್ಕಾರದ ಅನುಮತಿ ಪಡೆದು ಮಾರಾಟ ಮಾಡಿದ್ದಾರೆ. ಅದನ್ನು ಸೇರಿಸಬೇಕೆಂದು ಸಲಹೆ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ಅನುಮತಿ ಪಡೆದು ಮಾರಾಟ ಮಾಡಿರುವುದರಲ್ಲೂ ವಾಸ್ತವ ಸಂಗತಿಯನ್ನ ಮರೆಮಾಚಿ ಶಿಫಾರಸ್ಸು ಮಾಡಿರುವುದು ನಿಜ. ಅದಕ್ಕೂ ಮಾರ್ಗಸೂಚಿ ರಚಿಸುವ ಕೆಲಸ ಮಾಡುತ್ತೇವೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 14 =
Remember me
