ಬೆಂಗಳೂರು:ಥಿಯೇಟರ್​ನಲ್ಲಿ ಸಿನಿಮಾ ನೋಡುವವರಿಗೆ ‘ಎಲ್ಲವೂ ಚೆನ್ನಾಗಿಯೇ ಇತ್ತು ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡಿಯೇ ಇರಲಿಲ್ಲ’ ಎಂದು ಹೇಳುತ್ತಾ ಬರುವ ಮಹಿಳೆ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಳು. ಆದರೆ ಮಹಿಳೆ ಜಾಹೀರಾತು ನಿಮಗೆ ಇನ್ಮುಂದೆ ನೋಡಲು ಸಿಗುವುದಿಲ್ಲ. ಹೊಸ ಜಾಹೀರಾತು ಪ್ರಸಾರವಾಗಲಿದೆ. ಈ ಜಾಹೀರಾತು ಶುಕ್ರವವಾರದಿಂದ (ಆಗಸ್ಟ್ 23) ಪ್ರದರ್ಶನ ಕಾಣುತ್ತಿದೆ.
ನನ್ನ ಬದುಕು ಈ ರೀತಿ ಆಗುತ್ತೆ ಅಂತ ಯೋಚನೆ ಮಾಡಿಯೇ ಇರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ಒಳ್ಳೆಯ ಗಂಡ, ಎರಡು ಮುದ್ದಿನ ಮಕ್ಕಳು. ಆದರೆ, ತಂಬಾಕು ಎಲ್ಲವನ್ನೂ ಕೆಡಿಸಿಬಿಡ್ತು. ಈಗ ಹರಡುತ್ತಿರುವ ಈ ಕ್ಯಾನ್ಸರ್​ನ ನನ್ನ ಮುಖದಿಂದ ಕತ್ತರಿಸಿ ತೆಗಿಯಬೇಕಾಗಿದೆ. ಇನ್ನು ಯಾವುದೂ ಮೊದಲಿನ ಥರ ಇರಕ್ಕಾಗಲ್ಲ. ತಂಬಾಕು ನನ್ನ ಬದುಕನ್ನೇ ಸರ್ವನಾಶ ಮಾಡಿಬಿಡ್ತು’ ಎಂಬ ಲೈನ್​ಗಳನ್ನು ನಿಮಗೆ ತುಂಬಾ ಚಿರಪರಿಚಿತವೇ ಆಗಿರುತ್ತದೆ.
ಥಿಯೇಟರ್​ಗೆ ಹೋದಾಗ ಈ ಜಾಹೀರಾತು ಕಾಣಿಸುತ್ತದೆ. ಆದರೆ, ಈಗ ಜಾಹೀರಾತು ಬದಲಾಗಿದೆ. ಈ ಅಡ್ವಟೈಸ್​ಮೆಂಟ್​ನ ಇನ್ಮುಂದೆ ಥಿಯೇಟರ್​ನಲ್ಲಿ ಕಾಣ ಸಿಗುವುದಿಲ್ಲ.
ಥಿಯೇಟರ್​​ನಲ್ಲಿ ಈಗ ತಂಬಾಕಿನ ಹೊಸ ಜಾಹೀರಾತು ಬಂದಿದೆ. ತಂಬಾಕು ತಿಂದರೆ ಏನೆಲ್ಲ ಸಮಸ್ಯೆ ಆಗುತ್ತದೆ ಎಂಬುದನ್ನು ಸುನಿತಾ ಹೇಳಿಕೊಂಡಿದ್ದಳು. ಈಗ ಇವಳ ಬದಲು ಓಂ ಪ್ರಕಾಶ್ ಹೆಸರಿನ ವ್ಯಕ್ತಿ ಬಂದಿದ್ದಾನೆ. ಸಣ್ಣ ವಯಸ್ಸಿನಿಂದ ತಂಬಾಕು ತಿಂದು ಈತನಿಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ. ಆ ಬಗ್ಗೆ ಅವರ ಪತ್ನಿ ಸುನಿತಾ ಮಾತನಾಡುತ್ತಾಳೆ.
ಧೂಮಪಾನದ ಜಾಹೀರಾತಲ್ಲೂ ಬದಲಾವಣೆ ಆಗಿದೆ. ಸಿಗರೇಟ್ ಸೇದುವುದನ್ನು ಬಿಡುವುದರಿಂದ ಆರೋಗ್ಯದಲ್ಲಿ ಏನೆಲ್ಲಾ ಚೇತರಿಕೆಯಾಗುತ್ತದೆ ಎಂಬ ಹೊಸ ಜಾಹೀರಾತೊಂದನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − eighteen =
Remember me
