ಬೆಂಗಳೂರು:ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗ ಮತ್ತು ಯುನಿಲೆಟ್​ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿರುವ ನಾಲ್ಕು ದಿನಗಳ ‘ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸ ಉಪಕರಣಗಳ ಮೇಳ’ಕ್ಕೆ ಇಂದೂ ಉತ್ತಮ ಜನಸ್ಪಂದನೆ ಸಿಕ್ಕಿದೆ. ಇವತ್ತು ವಾರಾಂತ್ಯದ ದಿನವಾದ್ದರಿಂದ ಎಕ್ಸ್​ಪೊಗೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಖರೀದಿಯ ಭರಾಟೆ ಜೋರಾಗಿಯೇ ನಡೆಯುತ್ತಿದೆ.
ಅರಮನೆ ಮೈದಾನದ ಗಾಯತ್ರಿ ವಿಹಾರ್​​ನಲ್ಲಿ ಈ ಮೇಳ ನಡೆಯುತ್ತಿದ್ದು, ವಿವಿಧ ಬ್ರ್ಯಾಂಡ್​ಗಳ ಅತ್ಯಾಧುನಿಕ ಉಪಕರಣಗಳ ಪ್ರದರ್ಶನದ ಜತೆಗೆ ಪ್ರಾತ್ಯಕ್ಷಿಕೆ ಕೂಡ ನಡೆಯುತ್ತಿದೆ. ಈ ವಿಶೇಷವಾದ ಮೇಳ ನಾಳೆಯೇ ಮುಗಿಯಲಿರುವುದರಿಂದ ಇಂದು ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಲೇ ಇದ್ದಾರೆ.
ಉತ್ತಮ ಗುಣಮಟ್ಟದ, ನವನವೀನ ಹಾಗೂ ವೈವಿಧ್ಯಮಯ ಪೀಠೋಪಕರಣಗಳು, ಎಲೆಕ್ಟ್ರಾನಿಕ್​ ಸಾಧನಗಳು, ಅಲಂಕಾರಿಕ ವಸ್ತುಗಳು ಭಾರಿ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ. ಖರೀದಿದಾರರಿಗೆ ವಿಶೇಷ ಕೊಡುಗೆಗಳೂ ಸಿಗುತ್ತಿವೆ.

52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್​; ಸಂತಸಪಟ್ಟ ಮಗನ ಸಂದೇಶವಿದು..
Sign in to your account
Please enter an answer in digits:1 + 4 =
Remember me
