ಬೆಂಗಳೂರು:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ರೈತರ ದಿನಾಚರಣೆಗೆ ವೇದಿಕೆ ಸಜ್ಜಾಗಿದೆ. ಶುಕ್ರವಾರ ಮಧ್ಯಾಹ್ನ 12ಕ್ಕೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ 58 ಲಕ್ಷ ರೈತರು ಸೇರಿದಂತೆ ದೇಶದ 9.50 ಕೋಟಿ ರೈತರ ಬ್ಯಾಂಕ್ ಖಾತೆಗೆ ‘ಕಿಸಾನ್ ಸಮ್ಮಾನ್ ಯೋಜನೆ’ಯಡಿ ತಲಾ 2,000 ರೂ.ಗಳನ್ನು ಆನ್​ಲೈನ್ ಮುಖೇನ ಜಮಾ ಮಾಡಲಿದ್ದಾರೆ. ನೂತನ 3 ಕೃಷಿ ಕಾಯ್ದೆಗಳ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟು, ಗೊಂದಲ ನಿವಾರಿಸುವುದು ಹಾಗೂ ರೈತರ ಪ್ರತಿಭಟನೆಯ ಕಾವು ತಣಿಸುವುದು ಕಾರ್ಯಕ್ರಮದ ಗುರಿಯಾಗಿದೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿಗೆ ಇದು ಮಹತ್ವದ ಕಾರ್ಯಕ್ರಮವಾಗಿರುವ ಕಾರಣ ರಾಜ್ಯಾದ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲು ಸಿದ್ಧತೆ ಆಗಿದೆ.
ಬೆಂಗಳೂರಿನ ಯಶವಂತಪುರದ ಎಪಿಎಂಸಿ ಪ್ರಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸಿಎಂ ಯಡಿಯೂರಪ್ಪ ನೂತನ ಕಾಯ್ದೆಗಳ ಮಾಹಿತಿಯನ್ನು ರೈತರಿಗೆ ನೀಡಲಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಜನ್ಮ ದಿನಾಚರಣೆ, ಪೌರಕಾರ್ವಿುಕರು ಹಾಗೂ ಆಟೋ ರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಣೆಗೂ ಚಾಲನೆ ಸಿಗಲಿದೆ. ಬಳಿಕ ಪ್ರಧಾನಿ ಮೋದಿ ಭಾಷಣ ನೇರಪ್ರಸಾರವಾಗಲಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯದ ಸಚಿವರಾದ ಕೆ.ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಇನ್ನಿತರ ಮುಖಂಡರು ಪಾಲ್ಗೊಳ್ಳುವರು.
ಜಿಲ್ಲಾ, ತಾಲೂಕು ಕೇಂದ್ರಗಳು, ಜಿ.ಪಂ., ತಾ.ಪಂ., ಗ್ರಾ.ಪಂ. ಕೇಂದ್ರಗಳಲ್ಲಿ ಅಟಲ್ ಜನ್ಮ ದಿನಾಚರಣೆ ಜತೆಗೆ ಪ್ರಧಾನಿ ಮೋದಿ ಭಾಷಣ ನೇರ ವೀಕ್ಷಣೆಗೆಂದು ಟಿವಿ, ಎಲ್​ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜಿಲ್ಲಾ ಮತ್ತು ಮಂಡಲ ಸಮಿತಿಗಳಿಗೆ ಈ ಕಾರ್ಯಕ್ರಮ ಸಂಘಟಿಸುವ ಜವಾಬ್ದಾರಿ ಒಪ್ಪಿಸಿದ್ದು, ಕಾಯ್ದೆಗಳ ಬಗ್ಗೆ ವಿವರವುಳ್ಳ ಕರಪತ್ರಗಳನ್ನು ಹಂಚಿಕೆ ಮಾಡಿ ರೈತರನ್ನು ಜತೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗಿದೆ.
ವಿಜಯಪುರ:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನದ ಅಂಗವಾಗಿ ಡಿ. 25ರಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಕಾರ್ಯಕ್ರಮದ ಮೂಲಕ ವಿಜಯಪುರ ನಗರದ ಗಾಂಧಿಚೌಕ್ ಸಮೀಪದ ರಸ್ತೆಗೆ ವಾಜಪೇಯಿ ಹೆಸರು ನಾಮಕರಣ ಹಾಗೂ ಅವರ ಪುತ್ಥಳಿ ಅನಾವರಣಗೊಳಿಸಲಿದ್ದಾರೆ. ವಿಜಯಪುರ ನಗರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ವಣವಾಗಿರುವ 1.9 ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲದ ಸುಸಜ್ಜಿತ ಸಿ.ಸಿ. ರಸ್ತೆಗೆ ವಾಜಪೇಯಿ ಹೆಸರಿಡಲಾಗುತ್ತಿದೆ. ವಿಜಯಪುರದ ಅಥಣಿ ರಸ್ತೆಯ ಕೋರ್ಟ್ ಕಾಲನಿಯಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆ ವತಿಯಿಂದ 5 ಕೋಟಿ ರೂ. ವೆಚ್ಚದಲ್ಲಿ 6 ಅಡಿ ಎತ್ತರದ ಅಟಲ್ ಪುತ್ಥಳಿ ನಿರ್ಮಾಣ ಮಾಡಲಾಗಿದ್ದು ಅದರ ಅನಾವರಣ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಇರುವ ವಾಜಪೇಯಿ ಪುತ್ಥಳಿ ನಂತರ ದೊಡ್ಡ ಪುತ್ಥಳಿ ಇದಾಗಿದೆ. ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಲಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ.
ವಾಜಪೇಯಿ ಜನ್ಮದಿನ, ರೈತರ ದಿನಾಚರಣೆಗೆ ರಾಜ್ಯ ಸಜ್ಜಾಗಿದೆ. ಹೊಸ 3 ಕೃಷಿ ಕಾಯ್ದೆಗಳು ರೈತವಿರೋಧಿಯಲ್ಲವೆಂದು ಪ್ರಧಾನಿ ಮೋದಿ ಮನವರಿಕೆ ಮಾಡಿಕೊಡಲಿದ್ದು, ಅನಗತ್ಯ ಗೊಂದಲ ಸೃಷ್ಟಿಸಿರುವ ವಿರೋಧ ಪಕ್ಷಗಳ ನಿಜಬಣ್ಣ ಬಯಲಾಗಲಿದೆ.
|ಎನ್.ರವಿಕುಮಾರ್ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ
ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

3 ತಿಂಗಳ ಹಿಂದೆ ಹೂತಿಟ್ಟ ಶವ ಇಂದು ಹೊರಕ್ಕೆ, ಶವದ ಮೇಲಿತ್ತು 4 ಉಂಗುರ: ಈ ‘ದೃಶ್ಯ’ಕ್ಕೆ ಕೊನೆಗೂ ಕ್ಲೈಮ್ಯಾಕ್ಸ್​..

ಅಂಬೆಗಾಲಿಡುವಾಗ್ಲೇ ಸಪ್ತಪದಿ ತುಳಿದಿದ್ಲು; ಈಗ ಮದ್ವೆ ಆಗೋ ವಯಸ್ಸಲ್ಲೀಕೆ ವೈವಾಹಿಕ ಬಂಧನದಿಂದ ಮುಕ್ತಮುಕ್ತ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
