ಬೆಂಗಳೂರು:ಫೋಕ್ಸ್ ವ್ಯಾಗನ್ ಸಹಯೋಗದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 24×7 ಸುದ್ದಿವಾಹಿನಿ ಜಯನಗರದ ಎಂಇಎಸ್ ಮೈದಾನದಲ್ಲಿ ಆಯೋಜಿಸಿರುವ ‘ಮೋಟೋ ಫೆಸ್ಟ್’ಗೆ ಎರಡನೇ ದಿನವಾದ ಶನಿವಾರವೂ ಜನಸಾಗರ ಹರಿದು ಬಂದಿತು. ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೂ ಜನರು ದಂಡುದಂಡಾಗಿ ‘ಮೋಟೋ ಫೆಸ್ಟ್’ಗೆ ಭೇಟಿ ನೀಡಿದರು. ಗ್ರಾಹಕರಿಂದ ಸಿಕ್ಕ ಭಾರಿ ಪ್ರತಿಕ್ರಿಯೆಗೆ ವಾಹನ ಮಾರಾಟ ಮಳಿಗೆ ಮಾಲೀಕರೂ ಸಂತಸ ವ್ಯಕ್ತಪಡಿಸಿದರು. ಮಧ್ಯಾಹ್ನದ ಉರಿಬಿಸಿಲನ್ನೂ ಲೆಕ್ಕಿಸದೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೋಟೋಫೆಸ್ಟ್​ಗೆ ಬಂದಿದ್ದು ವಿಶೇಷವಾಗಿತ್ತು.
ಸ್ವಂತಕ್ಕೆ ಹೊಸ ವಾಹನ ಹೊಂದುವವರ ಕನಸನ್ನು ನನಸಾಗಿಸಲು ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಗಳಾದ ಸುಂದರಂ ಮೋಟಾರ್ಸ್ (ಮರ್ಸಿಡಿಸ್ ಬೆಂಜ್), ಆಪಲ್ ಆಟೋ ಪ್ರೖೆ.ಲಿ (ಫೋಕ್ಸ್ ವ್ಯಾಗನ್), ಕಲ್ಯಾಣಿ ಮೋಟಾರ್ಸ್ (ಮಾರುತಿ ಸುಜುಕಿ), ಹೋಂಡಾ ಕಂಪನಿಯ ಎಲ್ಲ ಮಾದರಿಯ ದ್ವಿಚಕ್ರವಾಹನಗಳು, ರೆಡ್​ಸೋಲ್ ಎಂಟರ್​ಪ್ರೖೆಸಸ್ ಪ್ರೖೆ.ಲಿ., (ಕಾರ್ ಸುರಕ್ಷತೆ ಮತ್ತು ನಿರ್ವಹಣಾ ಸಾಧನಗಳು) ಸೇರಿ ವಿವಿಧ ಬಗೆಯ ವಾಹನಗಳು ಹಾಗೂ ಆಟೋಮೊಬೈಲ್ ಉತ್ಪನ್ನಗಳು ನೋಡುಗರನ್ನು ಆಕರ್ಷಿಸಿದವು. ಬ್ಯಾಂಕ್ ಪಾಟರ್°ರ್ ಆಗಿ ಭಾಗವಹಿಸಿರುವ ಕೆನರಾ ಬ್ಯಾಂಕ್ ವಾಹನ ಖರೀದಿಗೆ ಸಿಗುವ ಸಾಲಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿತು.
ಇಂದು ಕೊನೇ ದಿನ
‘ಮೋಟೋ ಫೆಸ್ಟ್’ ಇಂದು ಕೊನೆಯ ದಿನವಾಗಿದ್ದು, ವಾಹನ ಪ್ರಿಯರು ಸದುಪಯೋಗ ಪಡಿಸಿಕೊಳ್ಳಬಹುದು. ಬೆಳಗ್ಗಿನಿಂದ ಸಂಜೆಯವರೆಗೂ ಭಾಗವಹಿಸಿ ವಿವಿಧ ಮಾದರಿಯ ವಾಹನಗಳ ಬಗ್ಗೆ ಮಾಹಿತಿ ಪಡೆದುಕೊಂಡು ಖರೀದಿಸಬಹುದಾಗಿದೆ.
ವಿವಿಧ ಬಗೆಯ ಕಾರುಗಳ ಆಕರ್ಷಣೆ
ವಿವಿಧ ಮಾದರಿಯ ಕಾರುಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ಪ್ರತಿ ಮಳಿಗೆಯಲ್ಲೂ ಆಯಾ ಸಂಸ್ಥೆಯ ಭವಿಷ್ಯದ ವಿನ್ಯಾಸಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಫೆಸ್ಟ್​ನಲ್ಲಿರುವ ವಾಹನಗಳು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿರುವುದರಿಂದ ಸಾರ್ವಜನಿಕರನ್ನು ಆಕರ್ಷಿಸುವಂತಿವೆ. ವಿವಿಧ ಮಾದರಿಗಳ ಐಷಾರಾಮಿ ಕಾರುಗಳನ್ನು ಏಕಕಾಲಕ್ಕೆ ಪರಿಶೀಲಿಸಿ ಕೊಂಡುಕೊಳ್ಳಲು ಪ್ರದರ್ಶನ ನೆರವಾಗುತ್ತಿದೆ. ಅನೇಕರು ತಮಗೆ ಇಷ್ಟವಾದ ಕಾರು-ಬೈಕ್​ಗಳ ಬುಕಿಂಗ್ ಮಾಡಿದರು. ಯುವಕರು ಹೊಸ ಮಾದರಿಯ ಕಾರಿನೊಂದಿಗೆ ಸೆಲ್ಪಿ ತೆಗೆದುಕೊಂಡು ಸಂತಸಪಟ್ಟರು. ಮೋಟೋ ಫೆಸ್ಟ್​ನಲ್ಲಿ ವಾಹನ ಖರೀದಿಸುವ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನೂ ಘೋಷಿಸಲಾಗಿದೆ.
ಎಸ್-ಪ್ರೆಸ್ಸೋ ಕಾರು
ಮೋಟೊ ಫೆಸ್ಟ್​ಗೆ ಭೇಟಿ ನೀಡಿದ ಹಲವು ಗ್ರಾಹಕರು ಮಾರುತಿ ಸುಜುಕಿಯ ಹೊಸ ಮಾದರಿಯ ಎಸ್-ಪ್ರೆಸ್ಸೋಗೆ ಮಾರು ಹೋದರು. ಹೆಚ್ಚಿನವರು ಈ ಕಾರಿನ ಬಗ್ಗೆ ಮಾಹಿತಿ ಪಡೆದುಕೊಂಡರು. ರಿಯಾಯಿತಿ ದರದಲ್ಲಿ ಲಭ್ಯವಿರುವ ಗುಣಮಟ್ಟದ ಕಾರು ಇದಾಗಿದ್ದು, ನಗರದಲ್ಲಿ ಓಡಾಡಲು ಅನುಕೂಲಕರವಾಗಿದೆ. ಕಾರಿನಲ್ಲಿ ಆಟೋಮ್ಯಾಟಿಕ್ ಹಾಗೂ ಮ್ಯಾನ್ಯುಯಲ್ ಎಂಬ ಎರಡು ಮಾದರಿಗಳಿವೆ. ವೃದ್ಧರು ಹೆಚ್ಚಾಗಿ ಆಟೋಮ್ಯಾಟಿಕ್ ಗೇರ್ ಸೌಲಭ್ಯವಿರುವ ಕಾರನ್ನು ಹೊಂದಲು ಬಯಸುತ್ತಾರೆ. ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಈ ಕಾರಿನಲ್ಲಿ ಸ್ಟಾ್ಯಂಡರ್ಡ್, ಎಲ್​ಎಕ್ಸ್​ಐ, ವಿಎಕ್ಸ್​ಐ, ವಿಎಕ್ಸ್​ಐ ಪ್ಲಸ್ ಎಂಬ ನಾಲ್ಕು ಆಯ್ಕೆಗಳಿವೆ. ಬ್ರಿ್ರಾ ಕಾರಿನ ವಿನ್ಯಾಸವನ್ನು ಈ ಕಾರಿಗೆ ಎರವಲು ಪಡೆಯಲಾಗಿದೆ. ಆದರೆ, ಈ ಕಾರು ಬ್ರಿಜಾಗಿಂತ ಸ್ವಲ್ಪ ಸಣ್ಣದಾಗಿದ್ದು, ವಿಶಾಲ ಬೂಟ್​ಸ್ಪೇಸ್ ಹೊಂದಿದೆ. ಎಕ್ಸ್​ಯುವಿ ಮಾದರಿಯ ಕಾರಿನಲ್ಲಿ ಪ್ರಯಾಣಿಸಿದ ಅನುಭವ ಸಿಗುತ್ತದೆ. ಎಕ್ಸ್​ಯುವಿ ಲುಕ್ ಕೊಡುವ ಎಸ್-ಪ್ರೆಸ್ಸೋ, ಹಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.
ಎಸ್-ಪ್ರೆಸ್ಸೋ ಕಾರು 998 ಸಿಸಿ ಇಂಜಿನ್ ಹೊಂದಿದ್ದು, 68 (50 ಕೆಡಬ್ಲ್ಯೂ) 5500 ಆರ್​ಪಿಎಮ್ ಮ್ಯಾಕ್ಸಿಮಮ್ ಪವರ್ ಹಾಗೂ 90 ಎನ್​ಎಮ್ 3500 ಆರ್​ಪಿಎಮ್ ಮ್ಯಾಕ್ಸಿಮಮ್ ಟಾರ್ಕ್ ಹೊಂದಿದೆ ಎಂದು ಸಂಸ್ಥೆಯ ಮ್ಯಾನೇಜರ್ ನವೀನ್ ತಿಳಿಸಿದ್ದಾರೆ.
ಒಂದೇ ಸೂರಿನಡಿ ಇಷ್ಟೊಂದು ಕಾರುಗಳ ಮಾಹಿತಿ ಸಿಗುತ್ತಿರು ವುದರಿಂದ ಮುಂದೆ ಕಾರು ಕೊಂಡುಕೊಳ್ಳು ವವರಿಗೆ ಅನುಕೂಲ ವಾಗಲಿದೆ. ನಾನು ಹೊಸ ದ್ವಿಚಕ್ರವಾಹನ ಕೊಳ್ಳಲು ಬಂದಿದ್ದೇನೆ.
| ಸೋಮೇಶ್ ಜೆ.ಪಿ ನಗರ
ದ್ವಿಚಕ್ರವಾಹನ ಖರೀದಿಸ ಬೇಕೆಂದಿದ್ದು, ಈ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ. ಮೋಟೋ ಫೆಸ್ಟ್ ಕಾರ್ಯಕ್ರಮ ವಾಹನ ಪ್ರಿಯರಿಗೆ ಕುತೂಹಲ ಹೆಚ್ಚಿಸಿದೆ.
| ಆಶಾ ಬಾಪೂಜಿನಗರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + four =
Remember me
