ಬೆಂಗಳೂರು:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿಯೇ ಇಂದು ದರ್ಬಾರ್​ ನಡೆಸಿದ್ದಾರೆ. ಇಡೀ ಪೊಲೀಸ್ ಠಾಣೆಯನ್ನು ಒಂದು ದಿನದ ಮಟ್ಟಿಗೆ ನಿರ್ವಹಣೆ ಮಾಡಿ ಶಹಬ್ಬಾಸ್ಗಿರಿ ಪಡೆಯುವ ಜತೆಗೆ ವಿನೂತನವಾಗಿ ಸಂಭ್ರಮಿಸಿದ್ದಾರೆ.
ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲ ಠಾಣೆಗಳಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿಯನ್ನು ಸ್ಟೇಷನ್ ಹೌಸ್ ಆಫೀಸರ್‌ಗಳಾಗಿ ನೇಮಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದರು. ಈ ಮೇರೆಗೆ ಮಂಗಳವಾರ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸ್ಟೇಷನ್ ಅಫೀಸರ್‌ಗಳಾಗಿ ಮಹಿಳಾ ಅಧಿಕಾರಿ, ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ಕೆಲವೊಂದು ಠಾಣೆಗಳಲ್ಲಿ ಕಾನ್‌ಸ್ಟೇಬಲ್‌ಗಳನ್ನ ನೇಮಕ ಮಾಡಿದರೆ, ಇನ್ನು ಕೆಲವು ಕಡೆಗಳಲ್ಲಿ ಮಹಿಳಾ ಸಬ್ ಇನ್‌ಸ್ಪೆಕ್ಟರ್‌ಗಳನ್ನು ನೇಮಿಸಿದ್ದರು. ಎರಡು ಪಾಳಿಯಲ್ಲಿ ಮಹಿಳಾ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ.
ಕೆಲವು ಠಾಣೆಗಳಲ್ಲಿ ಈಗಾಗಲೇ ಮಹಿಳಾ ಸಿಬ್ಬಂದಿಯೇ ಸ್ಟೇಷನ್ ಆಫೀಸರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಮಂಗಳವಾರ ಬೆಂಗಳೂರು ನಗರದ ಎಲ್ಲ ಠಾಣೆಗಳಲ್ಲಿ ಮಹಿಳೆಯರೇ ಕಾರ್ಯ ನಿರ್ವಹಿಸಿರುವುದು ವಿಶೇಷವಾಗಿತ್ತು. ಠಾಣೆ ಮುಖ್ಯ ದ್ವಾರದಲ್ಲಿ ಕುಳಿತು ವಾಕಿ-ಟಾಕಿ ಹಿಡಿದು ಕಂಟ್ರೋಲ್ ರೂಮ್​ನಿಂದ ಬರುತ್ತಿದ್ದ ಸಂದೇಶಗಳನ್ನು ಸ್ವೀಕರಿಸುತ್ತಿದ್ದರು. ಅದಕ್ಕೆ ತಕ್ಕಂತೆ ಉತ್ತರ ನೀಡುವುದರ ಜತೆಗೆ ಸಂಬಂಧಪಟ್ಟ ಅಧಿಕಾರಿ-ಸಿಬ್ಬಂದಿಗೆ ವರ್ಗಾವಣೆ ಮಾಡುತ್ತ ಸ್ಟೇಷನ್ ಡೈರಿಯಲ್ಲಿ ಬರೆದುಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಇದಲ್ಲದೆ, ಮಹಿಳಾ ಸಿಬ್ಬಂದಿ ಸಂವಹನ, ಠಾಣೆಯ ಕಚ್ಚಾ ಪುಸ್ತಕ, ಡೈರಿ, ಕೇಸ್ ಫೈಲ್​ಗಳ ಪರಿಶೀಲನೆಯಲ್ಲಿ ನಿರತರಾಗಿದ್ದರು.
ಇದನ್ನೂ ಓದಿ:ನಾರಿ ಶಕ್ತಿ ಜೀವನ್ಮುಖಿ; ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ದುಃಖ-ದುಮ್ಮಾನಗಳನ್ನು ಹೊತ್ತು ಠಾಣೆಗೆ ಬರುತ್ತಿದ್ದ ಪ್ರತಿಯೊಬ್ಬ ನಾಗರಿಕರನ್ನು ಕೂರಿಸಿ ಅವರ ಕಷ್ಟಗಳನ್ನು ಆಲಿಸಿದರು. ಅವರಿಗೆ ಆಗಿರುವ ಅನ್ಯಾಯ ಮತ್ತು ಸಮಸ್ಯೆಗಳಿಗೆ ಕಾನೂನಿನಡಿಯಲ್ಲಿ ಕ್ರಮ ಕೈಗೊಂಡರು. ದೂರವಾಣಿಗೆ ಬರುತ್ತಿದ್ದ ಕರೆಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಂಡರು. ಮಂಗಳವಾರ ಸಂಪೂರ್ಣ ಕಚ್ಚಾ ಪುಸ್ತಕ ನಿರ್ವಹಿಸಿದ ಮಹಿಳಾ ಸ್ಟೇಷನ್ ಆಫೀಷರ್, ಪ್ರತಿಯೊಂದೂ ಆಗುಹೋಗುಗಳನ್ನು ಉಲ್ಲೇಖಿಸಿದರು. ಗಸ್ತು ಸಿಬ್ಬಂದಿ, ಹೊಯ್ಸಳ, ಬೀಟ್ ಪೊಲೀಸರನ್ನು ನೇಮಿಸಿದರು.
ಸಿಂಗಾರಗೊಂಡ ಠಾಣೆಗಳು:ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗಳಿಗೆ ಸಿಂಗಾರ ಮಾಡಲಾಗಿತ್ತು. ಪಿಂಕ್ ಬಲೂನ್‌ಗಳಿಂದ ಸಿಂಗಾರಗೊಳಿಸಿ ಠಾಣೆಗಳಲ್ಲಿ ಮಹಿಳಾ ಅಧಿಕಾರಿ, ಸಿಬ್ಬಂದಿಗೆ ಹೂಗುಚ್ಛ ನೀಡಿ ಆಹ್ವಾನಿಸಿದರು. ಇದಾದ ಮೇಲೆ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ಜತೆಗೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು.

ಇಂದು ಹೀಗೂ ಆಚರಣೆ ಆಗುತ್ತಿದೆ ಒಂದು ದಿನ!; ಅದೇನದು? ಇಲ್ಲಿದೆ ಮಾಹಿತಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
