ಸದೃಢ ಬದುಕು ಕಟ್ಟಿಕೊಳ್ಳಲು ಮಾನಸಿಕ ಆರೋಗ್ಯ ಅತ್ಯಗತ್ಯ. ಆರ್ಥಿಕ ಸಂಕಷ್ಟ, ಕೆಲಸದ ಒತ್ತಡ, ಕೌಟುಂಬಿಕ ಸಮಸ್ಯೆ, ಮಾದಕ ವ್ಯಸನ ಹೀಗೆ ಹಲವು ವಿಧದಲ್ಲಿ ಮಾನಸಿಕ ರೋಗ ಮನುಷ್ಯರನ್ನು ಕಾಡುತ್ತಿದೆ. ಇದೆಲ್ಲದರ ಜತೆಗೆ ಕರೊನಾ ಮಹಾಮಾರಿ ಹಲವರ ಬದುಕನ್ನು ಕಸಿದಿದೆ. ಕರೊನಾ ಹೊಡೆತದಿಂದಾಗಿ ಹಲವರು ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ. ಮಾನಸಿಕ ರೋಗ ಯಾರಿಗೆ, ಯಾವ ಕಾರಣಕ್ಕೆ ಬರುತ್ತದೆ. ಅದರಿಂದ ಹೊರಬರುವ ಮಾರ್ಗ ಹೇಗೆ ಎಂಬುದನ್ನು ಮನೋರೋಗ ತಜ್ಞರುವಿಜಯವಾಣಿಜತೆ ಮಾಹಿತಿ ಹಂಚಿಕೊಂಡಿದ್ದಾರೆ.
| ಜಗದೀಶ್ ಎ.ಮನೋರೋಗ ವೈದ್ಯ, ಅಭಯ ಆಸ್ಪತ್ರೆ
ಕೋವಿಡ್​ನಿಂದ ಆರ್ಥಿಕ ಸಮಸ್ಯೆ ಸೇರಿ ನಾನಾ ಕಾರಣಗಳಿಂದ ಜನ ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ. ಇದಕ್ಕೆ ಪರಿಹಾರ ಏನು?
ಹಣಕಾಸಿನ ಕೊರತೆ ಎದುರಾಗಿದೆ. ನಿತ್ಯದ ಖರ್ಚು ವೆಚ್ಚ ಭರಿಸಲಾಗದೆ ಬದುಕು ಬದಲಾಗಿದೆ. ಇದು ಜನರನ್ನು ಮಾನಸಿಕ ತೋಳಲಾಟಕ್ಕೆ ದೂಡಿದೆ. ಕುಟುಂಬದ ಯಜಮಾನ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವವರೂ ಇದ್ದಾರೆ. ಖರ್ಚು ಕಡಿಮೆ ಮಾಡುವ ದಾರಿ ಕಂಡುಕೊಳ್ಳಬೇಕು. ಅದೂ ಸಾಧ್ಯವಾಗದಿದ್ದಾಗ ಸಮಸ್ಯೆ ಕುರಿತು ಆಪ್ತರೊಂದಿಗೆ ರ್ಚಚಿಸಿದರೆ ಒಂದಲ್ಲಾ ಒಂದು ಪರಿಹಾರ ಸಿಗುತ್ತದೆ.
ಉದ್ಯೋಗ ಹಾಗೂ ವ್ಯಾಪಾರ ನಷ್ಟದಿಂದ ಮನೋ ಸ್ಥೈರ್ಯ ಕಳೆದುಕೊಂಡವರು ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು?
ಲಾಕ್​ಡೌನ್​ನಿಂದ ಉದ್ಯೋಗ ಕಳದುಕೊಂಡವರು, ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು ಬಹಳಷ್ಟು ಮಂದಿ. ಹಾಗೆಂದು ನನಗೆ ಅದೇ ಉದ್ಯೋಗ ಬೇಕು. ಅದೇ ವ್ಯಾಪಾರ ಮಾಡಬೇಕು ಎಂದು ಹೇಳುವುದರಿಂದ ಪ್ರಯೋಜನವಿಲ್ಲ. ಸಂಕಷ್ಟ ಎದುರಾದಾಗ ಅನಿವಾರ್ಯವಾಗಿ ವೃತ್ತಿಯಲ್ಲಿ ಬದಲಾವಣೆ ಒಪ್ಪಿಕೊಂಡು ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಗೊಂದಲಕ್ಕೆ ಸಿಲುಕಿದರೆ ಆಪ್ತರ ಸಲಹೆ ಪಡೆಯಬೇಕು.
ಕೋವಿಡ್ ಸೋಂಕಿಗೆ ಒಳಗಾದವರು, ಅವರ ಕುಟುಂಬದವರನ್ನು ಕಳಂಕಿತ ಭಾವನೆಯಿಂದ ನೋಡಲಾಗುತ್ತಿದೆಯೆಲ್ಲಾ?
ಕೋವಿಡ್ ಆರಂಭದ ದಿನಗಳಲ್ಲಿ ಯಾವ ರೀತಿ ಚಿಕಿತ್ಸೆ ನೀಡಬೇಕು ಹಾಗೂ ಅವರನ್ನು ಯಾವ ರೀತಿ ಕಾಣಬೇಕು ಎಂಬ ತಿಳಿವಳಿಕೆ ವೈದ್ಯರಲ್ಲೂ ಇರಲಿಲ್ಲ. ಜನರು ಕಳಂಕಿತ ಭಾವದಿಂದ ಕಾಣುತ್ತಿದ್ದರು. ಇದರಿಂದ ಬಹಳಷ್ಟು ಮಂದಿ ಖಿನ್ನತೆಯಿಂದ ಮಾನಸಿಕ ಸಮಸ್ಯೆಗೆ ಒಳಗಾಗಿರುವುದೂ ಉಂಟು. ಈಗ ಅರಿವು ಮೂಡಿದೆ.
ಸೋಂಕಿಗೆ ಒಳಗಾದ ಶೇ.5 ರೋಗಿಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆಯಲ್ಲಾ?
ಕೋವಿಡ್​ನಿಂದ ಗುಣ ಹೊಂದಿದರೂ, ಸೋಂಕಿಗೆ ಒಳಗಾದ ಭೀತಿ, ಚಿಕಿತ್ಸೆಯಿಂದ ಕೆಲವರು ಮಾನಸಿಕವಾಗಿ ಜಜ್ಜರಿತರಾಗಿದ್ದಾರೆ. ಕೆಲವರಲ್ಲಿ ಆತಂಕ, ಖಿನ್ನತೆ, ನಿದ್ರಾಹೀನತೆ, ಸಂಶಯ, ಭಯ, ಗೊಂದಲ, ನೆನಪಿನ ಶಕ್ತಿ ಕುಂದುವಿಕೆ, ಕೋಪ, ಉದ್ವೇಗ ಸೇರಿ ನಾನಾ ಮಾನಸಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ.
ವರ್ಕ್ ಫ್ರಂ ಹೋಂ, ಕೆಲಸದ ಅಭದ್ರತೆಯಿಂದ ಉದ್ಯೋಗಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಇದಕ್ಕೆ ಪರಿಹಾರವೇನು?
ವರ್ಕ್ ಫ್ರಂ ಹೋಂ ಮತ್ತಷ್ಟು ಮಾನಸಿಕ ಕಿರಿಕಿರಿ ಮಾಡಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರು ಏಕಾಏಕಿ ಯಾರೊಂದಿಗೂ ಬೆರೆಯಲಾರದೆ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಉದ್ಯೋಗಿಗಳಲ್ಲಿ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತಿದೆ. ಕೆಲಸ ಮಾಡಲೆಂದೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇರಲಿ. ಬಿಡುವು ಮಾಡಿಕೊಂಡು ಮನೆಯವರಿಗೂ ಸಮಯ ಕೊಡಿ.
| ಜಿ. ಗುರುರಾಜ್ನಿಮ್ಹಾನ್ಸ್ ನಿರ್ದೇಶಕ
ಮಾದಕ ವ್ಯಸನಿಗಳು ಅಪರಾಧ ಪ್ರಕರಣಗಳಲ್ಲಿ ಹೆಚ್ಚು ಭಾಗಿಯಾಗುತ್ತಾರೆ ಏಕೆ?
ಮಾದಕ ವಸ್ತುಗಳನ್ನು ಸೇವಿಸಿರುವ ವ್ಯಕ್ತಿಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾವುದು ಹೆಚ್ಚು. ಕೆಲ ಸಂದರ್ಭಗಳಲ್ಲಿ ಯಾವ ರೀತಿಯ ಲಕ್ಷಣಗಳು ಹಾಗೂ ಅವರ ಹಿನ್ನೆಲೆ ಏನು ಎಂಬುದನ್ನು ನೋಡಿ ಚಿಕಿತ್ಸೆ ನೀಡಬೇಕು.
ಮಾದಕ ವ್ಯಸನದಿಂದ ಹೊರಬರಲು ಇರುವಂಥ ಮಾರ್ಗಗಳೇನು?
ವ್ಯಕ್ತಿ ಯಾವ ಮಾದಕ ವಸ್ತು ಚಟಕ್ಕೆ ಅಂಟಿಕೊಂಡಿದ್ದಾನೆಂದು ಅಧ್ಯಯನ ನಡೆಸಬೇಕು. ಪುನವರ್ಸತಿ ಕೇಂದ್ರಗಳಲ್ಲಿ ಚಟ ಬಿಡಿಸಲು ಚಿಕಿತ್ಸೆ ನೀಡಲಾಗುತ್ತದೆ. ನಿಮ್ಹಾನ್ಸ್ ನಲ್ಲಿ ವ್ಯಸನ ಮತ್ತು ಮಾನಸಿಕ ಆರೋಗ್ಯ ಕೇಂದ್ರ ಇದೆ. ತರಬೇತಿ ಪಡೆದ ವೈದ್ಯರು, ನರ್ಸ್​ಗಳು ಹಾಗೂ ಮನೋ ವಿಜ್ಞಾನಿಗಳು ಚಿಕಿತ್ಸೆ ನೀಡಲಿದ್ದಾರೆ. ವ್ಯಸನ ಮುಕ್ತರಾಗಲು ಕುಟುಂಬದ ಸಹಕಾರ ಅತಿ ಮುಖ್ಯ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
