ಬೆಂಗಳೂರು:ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳ ಪ್ರಥಮ ಮಹಾಸಮಾರಾಧನೆ ಗುರುವಾರ ನೆರವೇರಿತು. 35 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ಶಿಲಾಮಯ ಗುಡಿಯಲ್ಲಿ ವಿಶ್ವೇಶ ತೀರ್ಥರ ಮೂಲವೃಂದಾವನ ಹಾಗೂ ಗುರು ವಿದ್ಯಾಮಾನ್ಯರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನಾ ಕಾರ್ಯ ನಡೆಯಿತು. ಮುಂಜಾನೆ ಪ್ರತಿಷ್ಠಾಪನಾ ಕಲಶ ಸ್ಥಾಪನೆ, ಪ್ರತಿಷ್ಠಾಪನಾ ಹೋಮ, ಕಲಶಾಧಿವಾಸ ಹೋಮ, ಅಷ್ಟಬಂಧ ಹೋಮ, ವಿಷ್ಣುಗಾಯತ್ರೀ ಹೋಮ. ಬಳಿಕ ಪ್ರಾತಃ 6.30ಕ್ಕೆ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ವೃಂದಾವನರೂಪಿ ನಾರಾಯಣ ಪ್ರತಿಷ್ಠಾಪನೆ, ಶಾಂತಿಮಂತ್ರ ಪಠಣ, ಅಷ್ಟಬಂಧಲೇಪನ, ಕಲಶಾಭಿಷೇಕ, ಅಲಂಕಾರ ಪೂಜೆ, ಉಭಯ ಶ್ರೀಗಳಿಂದ ಪಟ್ಟದದೇವರ ಪೂಜೆ, ದ್ವಾದಶಮೂರ್ತಿ ಆರಾಧನೆ, ಯತಿಹಸ್ತೋದಕ ನಡೆಯಿತು. ರಾತ್ರಿ ದೀಪಾರಾಧನೆ, ಅಷ್ಟಾವಧಾನ ಸೇವೆ ಜರುಗಿತು.
ಇಂದು ಉತ್ತರಾರಾಧನೆ:ಡಿ.18ರಂದು ಉತ್ತರಾರಾಧನೆ ನಡೆಯಲಿದ್ದು, ಮಹಾಸಂಪ್ರೋಕ್ಷಣೆ, ದ್ವಾದಶ ಕಲಶಾಧಿವಾಸ ಹೋಮ, ಶ್ರೀಗಳಿಂದ ಪಟ್ಟದದೇವರ ಪೂಜೆ, ಮಹಾಪೂಜೆ, ಕ್ಷಮಾಪರಾಧಪೂರ್ವಕ ಕರ್ಮಸಮರ್ಪಣೆ, ಚತುರ್​ವುೂರ್ತಿ ಆರಾಧನೆ, ಹಸ್ತೋದಕ, ಮಹಾಮಂತ್ರಾಕ್ಷತೆ ನೆರವೇರಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
