|ಹರೀಶ್ ಬೇಲೂರುಬೆಂಗಳೂರು
ಇದೇ ತಿಂಗಳ ಆರಂಭದಿಂದ ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ನಿಷೇಧವಾಗಿದೆ. ಹಾಗಿದ್ದರೆ, ಪ್ಲಾಸ್ಟಿಕ್ ಬದಲಾಗಿ ಪರ್ಯಾಯವಾಗಿ ಏನು ಬಳಸಬೇಕು ಎಂಬಂತಹ ಪ್ರಶ್ನೆಗಳು ಜನರಿಗೆ ಈಗ ಕಾಡುತ್ತಿವೆ. ಸೆಣಬು, ಬಟ್ಟೆ, ಪೇಪರ್ ಬ್ಯಾಗ್ ಬಳಕೆ ಈಗಾಗಲೇ ಚಾಲ್ತಿಯಲ್ಲಿದ್ದು ಇದನ್ನು ಹೆಚಿಸಲು ಸಾಕಷ್ಟು ಅವಕಾಶಗಳಿವೆ. ಇದೇ ರೀತಿ ಇತ್ತೀಚಿನ ದಿನಗಳಲ್ಲಿ ಕಬ್ಬಿನ ಸಿಪ್ಪೆ, ಹಣ್ಣು ಮತ್ತು ತರಕಾರಿ ತ್ಯಾಜ್ಯಗಳಿಂದ ಕೂಡ ಬ್ಯಾಗ್​ಗಳನ್ನು ತಯಾರಿಸಲಾಗುತ್ತಿದ್ದು, ಇವುಗಳನ್ನು ಕೂಡ ಬಳಸಬಹುದಾಗಿದೆ. ಪ್ಲಾಸ್ಟಿಕ್​ಗೆ ಪರ್ಯಾಯವಾಗಿ ಸಾಕಷ್ಟು ವಸ್ತುಗಳು ಲಭ್ಯವಿದ್ದು, ಸಾರ್ವಜನಿಕರು ಇವುಗಳ ಬಳಕೆಗೆ ಮನಸ್ಸು ಮಾಡಬೇಕಾಗಿದೆ.
ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ಬ್ಯಾಗ್:ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ಬ್ಯಾಗ್ ಇನ್ನು ಮುಂದೆ ಮಾರುಕಟ್ಟೆಯಲ್ಲಿ ದೊರೆಯಲಿದೆ. ಮೈಸೂರಿನಲ್ಲಿ ಪ್ಲಾಸ್ಟಿಕ್ ಬದಲಾಗಿ ಈ ಬ್ಯಾಗ್ ಅನ್ನು ಹೆಚ್ಚು ಉಪಯೋಗಿಸಲಾಗುತ್ತಿದೆ. ಇತ್ತೀಚಿಗಷ್ಟೇ ಮೈಸೂರಿನ ಡಿಎಫ್​ಆರ್​ಎಲ್ (ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ) ಮಣ್ಣಿನಲ್ಲಿ ಕರಗುವತಂಹ ಪರಿಸರ ಸ್ನೇಹಿ ಪ್ಲಾಸ್ಟಿಕ್ ಚೀಲ ಸಂಶೋಧಿಸಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಹತ್ತುಹಲವು ವಸ್ತುಗಳು:ಮರುಬಳಸಬಹುದಾದ ಗ್ಲಾಸ್, ಬಿದಿರು ಲೋಟ ಮತ್ತು ಚಮಚ, ಪಾರ್ಟಿಗಳಲ್ಲಿ ರಿಸೈಕಲ್ಡ್ ಬಂಟಿಗ್ಸ್, ಪ್ಲಾಸ್ಟಿಕ್ ಇಯರ್ ಬಡ್ಸ್ ಬದಲು ಬಿದಿರು ಕಾಟನ್ ಬಡ್ಸ್, ಆರ್ಗಾನಿಕ್ ಕಾಟನ್ ಮೇಕ್​ಅಪ್ ಪ್ಯಾಡ್ಸ್ ಬಳಸಬಹುದು. ಅದೇ ರೀತಿ, ಪ್ಲಾಸ್ಟಿಕ್ ಕಪ್ ಮತ್ತು ಮುಚ್ಚಳ ಬದಲು ಗ್ಲಾಸ್ ಕಪ್, ಪೋರ್ಸೆಲಿಯನ್ ಮಗ್ ಬಳಸಬಹುದು. ಪ್ಲಾಸ್ಟಿಕ್ ತಟ್ಟೆಗಳ ಬದಲು ಅಡಕೆ ತಟ್ಟೆ, ಪೋರ್ಸೆಲಿಯನ್ ಪ್ಲೇಟ್, ತಾಳೆ ಎಲೆ, ಬಿದಿರಿನ ತಟ್ಟೆ ಇತ್ಯಾದಿ ಬಳಸಬಹುದು.
ಪ್ಲಾಸ್ಟಿಕ್ ಬದಲಾಗಿ ಬಟ್ಟೆ ಮತ್ತು ಪೇಪರ್ ಸೇರಿ ಹತ್ತಾರು ಪರಿಸರ ಸ್ನೇಹಿ ಬ್ಯಾಗ್​ಗಳನ್ನು ಬಳಸಬಹುದು. ದೇಶದಲ್ಲಿ ಈಗಾಗಲೇ ಜಾರಿಗೆ ಬಂದಿರುವ ಪ್ಲಾಸ್ಟಿಕ್ ನಿಷೇಧ ನಿಯಮವನ್ನು ಪರಿಣಾಮಕಾರಿಯಾಗಿ ತರಬೇಕು. ಪ್ಲಾಸ್ಟಿಕ್ ಬಳಸುವ ಮತ್ತು ಉತ್ಪಾದಿಸುವ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ಲಾಸ್ಟಿಕ್ ಬದಲು ನೂರಾರು ಪರ್ಯಾಯ ಮಾರ್ಗಗಳಿದ್ದು, ಅವುಗಳನ್ನು ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.
|ಯಲ್ಲಪ್ಪ ರೆಡ್ಡಿಹಿರಿಯ ಪರಿಸರ ತಜ್ಞ
ಅದಮ್ಯ ಚೇತನ ಸಂಸ್ಥೆಯಲ್ಲಿ 10-12 ವರ್ಷಗಳಿಂದ ನಾವು ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿಲ್ಲ. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಉಪಯೋಗಿಸುವುದಿಲ್ಲವೆಂದು ಪ್ರತಿಯೊಬ್ಬರೂ ವ್ರತದಂತೆ ಪಾಲಿಸಬೇಕು. ಏಕ ಬಳಕೆ ಪ್ಲಾಸ್ಟಿಕ್ ಅನ್ನು ಬಿಡುವುದಕ್ಕೆ ಸಾಧ್ಯವಿಲ್ಲದಂತಹ ಸಂದರ್ಭದಲ್ಲಿ ಮರು ಬಳಕೆ ಮಾಡಿಕೊಳ್ಳಬೇಕು. ನಮ್ಮ ಸಂಸ್ಥೆಯಲ್ಲಿ ಒಂದೊಂದು ಪದಾರ್ಥಗಳಿಗೆ ಬಟ್ಟೆ ಬ್ಯಾಗ್​ಗಳನ್ನು ಇಟ್ಟುಕೊಂಡಿದ್ದೇವೆ. ಪ್ಲಾಸ್ಟಿಕ್ ಬದಲಾಗಿ ಬಟ್ಟೆ, ಪೇಪರ್ ಮತ್ತು ಪರಿಸ್ನೇಹಿ ಬ್ಯಾಗ್​ಗಳನ್ನು ಜನರು ಉಪಯೋಗಿಸುವಂತಾಗಬೇಕು.
|ತೇಜಸ್ವಿನಿ ಅನಂತಕುಮಾರ್ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ
ಆರೋಗ್ಯ, ಪರಿಸರ ಕಾಪಾಡಿ:ಪ್ಲಾಸ್ಟಿಕ್ ಬಳಕೆಯಿಂದ ಅನೇಕ ಕಾಯಿಲೆಗಳಿಗೆ ಕಾರಣವಾಗುವ ಜತೆಗೆ ಪರಿಸರ,ಪ್ರಾಣಿ, ಪಕ್ಷಿ ಹಾಗೂ ಜಲಚರಗಳು ನಾಶವಾಗುತ್ತಿವೆ. ಅಲ್ಲದೆ, ಮುಂದೊಂದು ದಿನ ಇಡೀ ಪರಿಸರವು ಪ್ಲಾಸ್ಟಿಕ್​ವುಯವಾಗಿ ಉಸಿರಾಡುವ ಗಾಳಿ, ಕುಡಿಯಲು ನೀರು ಮತ್ತು ತಿನ್ನಲು ಆಹಾರ ಎಲ್ಲವನ್ನೂ ವಿಷಮಯವಾಗಿಸುತ್ತದೆ. ಆದ್ದರಿಂದ, ಬಟ್ಟೆ ಮತ್ತು ಪೇಪರ್ ಬ್ಯಾಗ್ ಬಳಸುವ ಮೂಲಕ ಆರೋಗ್ಯ ಮತ್ತು ಪರಿಸರವನ್ನು ಕಾಪಾಡಿಕೊಳ್ಳಬಹುದು.
ಶೇ. 10ಕ್ಕಿಂತ ಕಡಿಮೆ ಪುನರ್ ಬಳಕೆ:ಪ್ಲಾಸ್ಟಿಕ್ ಬಳಕೆಯಿಂದ ವಿಶ್ವದ ಇತರೆ ರಾಷ್ಟ್ರಗಳ ಗಿಂತ ಭಾರತದಲ್ಲಿ ಅತಿ ಹೆಚ್ಚು ದುಷ್ಪರಿಣಾಮ ಉಂಟಾಗುತ್ತಿದೆ. 1950ರವರೆಗೂ ಪ್ಲಾಸ್ಟಿಕ್ ಅಷ್ಟಾಗಿ ಬಳಕೆಯಾಗುತ್ತಿರಲಿಲ್ಲ. ಈ ವೇಳೆ ಕೇವಲ 2 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದಿಸ ಲಾಗುತ್ತಿತ್ತು. ಆದರೆ, ಈಗ ಅದು ಅಂದಾಜು 500 ಮಿಲಿಯನ್ ಟನ್​ನಷ್ಟಿದೆ. ಪ್ಲಾಸ್ಟಿಕ್ ಸಂಪೂರ್ಣವಾಗಿ ಪುನರ್ ಬಳಕೆ ಮಾಡಬಹುದಾದರೂ ಪ್ರಸ್ತುತ ಶೇ. 10ಕ್ಕಿಂತ ಕಡಿಮೆ ಪುನರ್ ಬಳಕೆಯಾಗುತ್ತಿದೆ. ಉಳಿದ ಪ್ಲಾಸ್ಟಿಕ್ ಭೂಮಿ ಮತ್ತು ನೀರಿನ ಮೂಲಗಳಲ್ಲಿ ಸೇರುತ್ತಿದೆ.
1999ರಲ್ಲಿ ಮೊದಲ ಬಾರಿ ನಿಷೇಧ:1999ರಲ್ಲಿ ಮೊದಲ ಬಾರಿ 20 ಮೈಕ್ರಾನ್​ಗಿಂತ ತೆಳ್ಳಗಿರುವ ಪ್ಲಾಸ್ಟಿಕ್ ಬ್ಯಾಗ್ ಹಾಗೂ ಪುನರ್ ಬಳಕೆ ಪ್ಲಾಸ್ಟಿಕ್ ಕವರ್​ಗಳಲ್ಲಿ ಆಹಾರ ಪದಾರ್ಥಗಳನ್ನು ಶೇಖರಿಸುವುದನ್ನು ನಿಷೇಧಿಸಲಾಯಿತು. 2011ರಲ್ಲಿ 40 ಮೈಕ್ರಾನ್​ಗಿಂತ ತಳ್ಳಗಿರುವ ಪ್ಲಾಸ್ಟಿಕ್ ಬ್ಯಾಗ್ ಹಾಗೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್​ಗಳ ಮೇಲೆ ತಯಾರಿಕೆ ಕಂಪನಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವಂತೆ ಆದೇಶಿಸಲಾಯಿತು. 2016ರಲ್ಲಿ ಪ್ಲಾಸ್ಟಿಕ್ ಬ್ಯಾಗ್​ಗಳ ದಪ್ಪವನ್ನು 50 ಮೈಕ್ರಾನ್​ಗೆ ಹೆಚ್ಚಿಸ ಲಾಯಿತು. ಪರಿಸರ ಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರವು ವ್ಯಾಪಾರಿಗಳು, ಉತ್ಪಾದಕರು ಮತ್ತು ಸಾರ್ವಜನಿಕರು ಇನ್ನು ಮುಂದೆ ಒಮ್ಮೆ ಬಳಸಿ ಬಿಸಾಡುವ 22 ಪ್ಲಾಸ್ಟಿಕ್ ಉತ್ಪನ್ನ ಬಳಸುವುದು, ಮಾರಾಟ ಮಾಡುವುದನ್ನು ನಿಷೇಧಿಸಿದೆ.
ಅಡಕೆ ತಟ್ಟೆಯ ಉತ್ಪನ್ನ:ಕರಾವಳಿಯಲ್ಲಿ ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳಾಗಿ ಅಡಕೆ ಮರದ ಹಾಳೆಯ ವಿವಿಧ ಉತ್ಪನ್ನಗಳು ಪರಿಚಯಿಸಲಾಗಿದೆ. ಅಡಕೆ ಹಾಳೆಯಿಂದ ತಟ್ಟೆ, ಬೌಲ್, ಐಸ್ಕ್ರೀ ಕಪ್ ಮುಂತಾದ ಉತ್ಪನ್ನಗಳು ಪ್ರಸಿದ್ಧಿಯಾಗಿವೆ. ಇವುಗಳನ್ನು ಹೆಚ್ಚಾಗಿ ಮದುವೆ ಸಮಾರಂಭಗಳಲ್ಲಿ ಬಳಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಿದಿರಿನ ಸ್ಪೂನ್ ಹೆಚ್ಚು ಉಪಯೋಗಿಸಲಾಗುತ್ತಿದೆ. ಪ್ಲಾಸ್ಟಿಕ್ ಸ್ಟ್ರಾಗಳ ಬದಲು ಪೇಪರ್ ಸ್ಟ್ರಾಗಳು ಮಾರ್ಕೆಟ್​ಗೆ ದಾಂಗುಡಿ ಇಟ್ಟಿವೆ. ಕೆಲ ರೈತರು ಬಾಳೆ, ಅಡಕೆ ತ್ಯಾಜ್ಯದಿಂದ ತಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡದ ತೆಂಗು ರೈತ ಉತ್ಪಾದಕರ ಕಂಪನಿಯು ತೆಂಗಿನ ಗರಿಯ ಸ್ಟ್ರಾ ಜತೆಗೆ ತೆಂಗಿನ ಚಿಪು್ಪಗಳಿಂದ ಫುಡ್ ಬಾಕ್ಸ್​ಗಳನ್ನು ಮಾಡಿ ಪ್ಲಾಸ್ಟಿಕ್​ಗೆ ಪರ್ಯಾಯ ಹೆಜ್ಜೆ ಇಟ್ಟಿದೆ.
ಡಿಎಫ್​ಆರ್​ಎಲ್ ಪರಿಸರಸ್ನೇಹಿ ಬ್ಯಾಗ್ ಅಭಿವೃದ್ಧಿ:ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್​ಆರ್​ಎಲ್) ಪರಿಸರಸ್ನೇಹಿ ನೈಸರ್ಗಿಕ ಮತ್ತು ಸಸ್ಯ ಆಧಾರಿತ ಆಹಾರ ದರ್ಜೆಯ ವಸ್ತುಗಳಿಂದ ಮಾಡಿದ ಬ್ಯಾಗ್ ಅನ್ನು ಅಭಿವೃದ್ಧಿಪಡಿಸಿ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚಾಮುಂಡೇಶ್ವರಿ ದೇವಾಸ್ಥಾನಕ್ಕೆ 5 ಸಾವಿರ ಬ್ಯಾಗ್​ಗಳನ್ನು ಡಿಎಫ್​ಆರ್​ಎಲ್ ನೀಡಿದೆ. 5 ಕೆ.ಜಿ.ವರೆಗೆ ಯಾವುದಾ ದರೂ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯ ಇದು ಹೊಂದಿದೆ. 2 ರೂ.ಗೆ ಸಿಗಲಿದೆ. ನೋಡುವುದಕ್ಕೆ ಪ್ಲಾಸ್ಟಿಕ್ ಬ್ಯಾಗ್​ನಂತೆ ಕಾಣುವ ಇದಕ್ಕೆ ವಿಶೇಷ ಗುಣ ಲಕ್ಷಣವಿದ್ದು, 180 ದಿನಗಳಲ್ಲಿ ಮಣ್ಣಿನಲ್ಲಿ ಸಂಪೂರ್ಣವಾಗಿ ಕರಗುತ್ತದೆ. ಬರುವ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಂಡು ಊಟದ ತಟ್ಟೆಗಳು, ಚಮಚಗಳು ಮತ್ತು ಆಹಾರ ಪೊಟ್ಟಣ ತಯಾರಿಸಲು ಡಿಎಫ್​ಆರ್​ಎಲ್ ಯೋಜನೆ ಹಾಕಿಕೊಂಡಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × two =
Remember me
