ಕರ್ನಾಟಕ ಇತಿಹಾಸದಲ್ಲಿ 12ನೇ ಶತಮಾನ ಸ್ಮರಣೀಯವಾದುದು. ಜಗತ್ತಿನ ಇತಿಹಾಸದಲ್ಲಿ ಹಿಂದೆಂದೂ ಜರುಗದ ಕಾಯಕಜೀವಿಗಳ ಕ್ರಾಂತಿಯೊಂದು ನಡೆದ ಕಾಲವದು. ಬಸವಾದಿ ಪ್ರಮಥರ ಈ ಕ್ರಾಂತಿ ಮಾನವ ಜನಾಂಗದ ವಿಕಾಸಕ್ಕೆ ನೀಡಿರುವ ಕೊಡುಗೆ ಆಮೂಲ್ಯವಾದುದು.
ಸಾಮಾಜಿಕ, ಧಾರ್ವಿುಕ, ಆರ್ಥಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಶರಣರ ಕ್ರಾಂತಿ ಬೀರಿದ ಪ್ರಭಾವ ಅನನ್ಯ. ಇಂಥ ಕ್ರಾಂತಿಗೆ ಕೈಜೋಡಿಸಿದ ಮಹಾನ್ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರು. ಜಾಗತಿಕ ಸಾಹಿತ್ಯಕ್ಕೆ ಕನ್ನಡದ ಕೊಡುಗೆಯಾಗಿರುವ ವಚನ ಸಾಹಿತ್ಯದ ರಚನೆ, ಸಂರಕ್ಷಣೆಗೆ ತನ್ನನ್ನೇ ಅರ್ಪಿಸಿಕೊಂಡ ವೀರ ಶರಣರಿವರು.
ಅನುಭವ ಮಂಟಪದಲ್ಲಿ ನಿತ್ಯ ಸೇರುತ್ತಿದ್ದ ವಿವಿಧ ಕಾಯಕಗಳ ಶರಣರು ತಮ್ಮ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಮುಖ್ಯವಾಗಿ ಶರಣ ಸಿದ್ಧಾಂತಗಳಾದ ಷಟಸ್ಥಲ, ಅಷ್ಟಾವರಣ ಮತ್ತು ಪಂಚಾಚಾರಗಳನ್ನು ಕುರಿತಂತೆ ಗಂಭೀರ ಚರ್ಚೆ ನಡೆಯುತಿತ್ತು.
ಅನುಭವ ಮಂಟಪ ವಿಶ್ವದ ಪ್ರಥಮ ಮತ್ತು ಏಕ ಮಾತ್ರ ಧರ್ಮ ಸಂಸತ್ತು ಆಗಿತ್ತು. ಅನುಭವ ಮಂಟಪದ ಶೂನ್ಯಸಿಂಹಾಸನವನ್ನು ಅಲಂಕರಿಸಿದ್ದ ನಿರಂಜನ ಶರಣ ಪ್ರಭುದೇವರು, ಚನ್ನಬಸವಣ್ಣ, ಸಿದ್ಧರಾಮೇಶ್ವರ, ನೀಲಾಂಬಿಕೆ, ಅಕ್ಕನಾಗಮ್ಮ, ಮಹಾದೇವಿ ಮುಂತಾದ ಪ್ರಮುಖ ಶರಣ-ಶರಣೆಯರನ್ನು, ಅಸಂಖ್ಯಾತ ಭಕ್ತಸಮೂಹವನ್ನೂ ಹಾಗೂ ಅಲ್ಲಿ ನಡೆಯುತ್ತಿದ್ದ ತತ್ತ್ವ ಜಿಜ್ಞಾಸೆಯನ್ನು, ನಿರ್ಧಾರ, ನಿರ್ಣಯಗಳನ್ನು ಕಂಡು, ಕೇಳಿ ಮಾಚಿದೇವರು ಬೆರಗಾದರು. ಆಹ್ವಾನದ ಮೇರೆಗೆ ಬಂದ ಮಾಚಿದೇವರನ್ನು ಅನುಭಾವಿ ಶಿವಶರಣ-ಶರಣೆಯರ ಗಣವು ಸ್ವಾಗತಿಸಿತು.
ಅತಿಥಿ ಸತ್ಕಾರದ ನಂತರ ಅನುಭವ ಮಂಟಪದ ಶೂನ್ಯ ಸಿಂಹಾಸನಾಧಿಕಾರಿಗಳಾದ ಅಲ್ಲಮ ಪ್ರಭುಗಳು ಮಾಚಿದೇವರನ್ನು ಕುರಿತು: ಆಯ್ಯಾ, ನಿಮ್ಮನ್ನು ಶರಣರೆನ್ನಬಹುದೇ? ಎಂದಾಗ, ಮಾಚಿದೇವರು: ಎನ್ನ ಆದಿಯನೆತ್ತುವೆನೆ? ಅದ ನೀನೆ ಬಲ್ಲೆ, ಘನಗಂಭೀರದಲ್ಲಿ ಹುಟ್ಟಿದನೆಂಬುದ. ಎನ್ನ ಅನಾದಿಯನೆತ್ತಿ ಹೇಳಿ ತೋರುವೆನೆ? ಅದ ನೀನೆ ಬಲ್ಲೆ, ಎನಗೆ ಕಾಯವಿಲ್ಲೆಂಬುದ. ಬಸವಣ್ಣನ ಕಾರಣ ಮರ್ತಯ ಬಂದಡೆ, ಒಡಲುಪಾಧಿಯೆಂಬುದಿಲ್ಲ ನೋಡಾ. ಒಡಲೆ ಬಸವಣ್ಣ, ಪ್ರಾಣವೆ ಚೆನ್ನಬಸವಣ್ಣ, ಎನ್ನ ಮಹಾಜ್ಞಾನವೇ ನೀವು ನೋಡಾ. ಇಂತು ಎರಡಿಲ್ಲದಿಪ್ಪಲ್ಲಿ, ನುಡಿಯಡಗಿದ ಪರಿಯ, ನಿಮ್ಮ ಶರಣ ಬಸವಣ್ಣ ಬಲ್ಲ ಕಾಣಾ, ಕಲಿದೇವರದೇವ ಎಂದರು.
ಪ್ರಭುದೇವರು: ಶರಣರ ಲಕ್ಷಣಗಳು ನಿಮ್ಮಲ್ಲಿ ಉಂಟೇ? ಈ ಘಂಟಾನಾದವೇನು ಎಂದು ಪ್ರಶ್ನಿಸಿದರು.
ಮಾಚಿದೇವರು: ಬಸವನಾಮವಲ್ಲದೆ ಅನ್ಯವನಾಡೆನು, ಉಸಿರೆನು ಕೇಳನೆಂಬ ಸಂಕಲ್ಪದಿಂದ ಘಂಟಾಶಬ್ದದ ಓಂಕಾರ ನಾದದಲ್ಲಿ ಬರುವ ಅಕಾರ, ಉಕಾರ, ಮಕಾರಗಳ ಆನಂದಾಮೃತದಿಂದ ತೃಪ್ತನಾಗಿ ಮಡಿಯ ಮಾಡುವವರಣ್ಣ ನಾವು ಒಳ್ಳೆ ಮಡಿವಾಳರಹುದಣ್ಣ ಕೇಳಿರಿ ನೀವು ಎಂದರು.
ಪ್ರಭುದೇವರು: ಹಾಗಾದರೆ ನಿಮ್ಮ ಕಾಯಕ?
ಮಾಚಿದೇವರು: ಬಸವಾದಿ ಶರಣರ ಕಾಯಕದಿಂದ ಕೈಲಾಸ ಎಂಬ ಅಂಶವೇ, ನನ್ನ ಕಾಯಕ. ಅದು ಮಡಿವಳ ಕಾಯಕ.
ಪ್ರಭುದೇವರು: ನಿಮ್ಮ ಕಾಯಕದ ತಿರುಳು?
ಮಾಚಿದೇವರು: ವ್ಯಕ್ತಿಯು ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ವರ್ತಿಸಬೇಕಾದರೆ ಯಾವುದಾದರೊಂದು ಕಾಯಕ ಕೈಗೊಳ್ಳಲೇಬೇಕು. ಅಲ್ಲಿ ಪರಾವಲಂಬನಕ್ಕೆ, ಸೋಮಾರಿತನಕ್ಕೆ ಅವಕಾಶವಿರಬಾರದು. ಈ ಕಾಯಕವು ಇಹದ ಜೀವನಕ್ಕೆ ಎಷ್ಟು ಮುಖ್ಯವೋ ಪರದ ಜೀವನಕ್ಕೂ ಅಷ್ಟೇ ಮುಖ್ಯ.
ಇದರಿಂದ ಗುರು-ಲಿಂಗ-ಜಂಗಮ ದಾಸೋಹವು ಸುಗಮವಾದರೆ ಕಾಯಕದ ತತ್ತ್ವಗಳನ್ನು ಸಾಧಿಸಿದಂತಾಗುತ್ತದೆಂಬ ಧ್ಯೇಯವೇ ನನ್ನ ಕಾಯಕದ ತಿರುಳು. ಕಾಯಕ ತತ್ತ್ವದಿಂದ ಏಕೋದೇವನೆಂದು, ಜಾತಿಯಂಧತೆ ನೀಗಿ ವ್ಯಕ್ತಿಗಿಂತ ಸಮಾಜ ಹಿರಿದೆಂದು, ಇರುವ ನಾಡಿಗೆ ತನು- ಮನ-ಧನವನ್ನುರ್ಪಿಸುವಿಕೆಯೇ ಪಂಚಾಚಾರವಾಗಿ, ವರ ಸತ್ಯ ಶುದ್ಧ ಕಾಯಕದಿಂದ ಬಂದ ಪರಿಣಾಮ ಧ್ರವ್ಯವೆಲ್ಲವನ್ನು ಶ್ರದ್ಧೆಯಿಂದ ಗುರು-ಲಿಂಗ-ಜಂಗಮಕ್ಕೆ ಹರುಷದಿಂದ ದಾಸೋಹವನ್ನು ಮಾಡಿ ನೀಡುವುದೇ ನನ್ನ ಸದಾಚಾರ ಎಂದುತ್ತರಿಸಿದರು.
ಪ್ರಭುದೇವರು: ಈಗ ನಿಮ್ಮ ಅಭೀಷ್ಟ?
ಮಾಚಿದೇವರು: ಬಸವಣ್ಣನ ಮನೆಯ ಊಳಿಗದವನಾಗಿ, ಭಕ್ತಿಪ್ರಸಾದವ ಬೇಡುವೆ. ಬಸವಣ್ಣನ ತೊತ್ತಿನ ಮಗನಾಗಿ ಒಕ್ಕ ಪ್ರಸಾದವ ಬೇಡುವೆ. ಪ್ರಭುದೇವರ ತೊತ್ತಿನ ಮಗನಾಗಿ ಜ್ಞಾನ ಪ್ರಸಾದವ ಬೇಡುವೆ. ಸಿದ್ಧರಾಮಯ್ಯನ ಮನೆಯ ಮಗನಾಗಿ ಪಾಣಪ್ರಸಾದವ ಬೇಡುವೆ ಎಂದರು. ಹೀಗೆ ಮಾಚಿತಂದೆಗಳ ಘನತೆ, ಗಾಂಭೀರ್ಯಗಳ ಬಗ್ಗೆ ಬಸವಣ್ಣ, ಚನ್ನಬಸವಣ್ಣ, ಅಕ್ಕ ಮಹಾದೇವಿ , ಸಿದ್ಧರಾಮೇಶ್ವರ, ಪ್ರಭುದೇವ ಹಾಗೂ ಇತರ ಶರಣರು ಬಿಚ್ಚಿದ ಮನದಲ್ಲಿ ಹೊಗಳಿರುವುದನ್ನು ಕಂಡರೆ ಅನುಭಾವ ಮಂಟಪದ ಶಿವಶರಣರ ಘನತೆ-ಗಾಂಭೀರ್ಯ, ನಿಸ್ವಾರ್ಥ-ನಿಷ್ಕಾಮ ಗುಣಗಳೆಲ್ಲವೂ ಹೊರಹೊಮ್ಮಿ ಮೂರ್ತಿವೆತ್ತು ಕಾಣುತ್ತವೆ.
ಈ ರೀತಿಯಲ್ಲಿ ಶಿವಾನುಭಾವ ಮಂಟಪದಲ್ಲಿ ಸರ್ವಸದಸ್ಯರಾದ ಶಿವಶರಣ-ಶರಣೆಯರ ಆದರ ವಿಶ್ವಾಸಪೂರ್ಣ ಮತ್ತು ಕರುಣಕಟಾಕ್ಷವು ದೊರೆತು ಪ್ರಭುದೇವರು, ಬಸವಣ್ಣ, ಚನ್ನಬಸವಣ್ಣನವರಿಂದ ಮಾಚಿದೇವರು, ಮಾನಿತರಾದರು. ಶೂನ್ಯಪೀಠದ ಶೂನ್ಯಪೀಠಾಧಿಕರಿಗಳಾದ ಅಲ್ಲಮ ಪ್ರಭುದೇವರು ತೀರ್ಪು ಕೊಡುವಾಗ ಚನ್ನಬಸವಣ್ಣನವರು ವಯಸ್ಸಿನಲ್ಲಿ ಚಿಕ್ಕವರಾದರೂ ಅವರ ಸಲಹೆ ಪಡೆದು ಸರ್ವಸಮ್ಮತ ತೀರ್ಪನ್ನು ಕೊಡುತ್ತಿದ್ದರು. ಬಸವೇಶ್ವರರು ಕೊಡಬೇಕಾದ ತೀರ್ಪಿನ ಬಗ್ಗೆ ಮಾಚಿದೇವರ ಸಲಹೆ ಕೇಳುತ್ತಿದ್ದರು. ಇದರಿಂದ ಮಾಚಿತಂದೆಗಳ ವ್ಯಕ್ತಿತ್ವದ ಹಿರಿಮೆ ಇಡಿ ಶರಣ ಸಂದೋಹಕ್ಕೇ ಒಂದು ದೃಷ್ಟಿಯಿಂದ ಮಾನ್ಯವಾಗಿತ್ತು.
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ, ಉಳಿವಿಯ ಹಾದಿಯುದ್ದಕ್ಕೂ ಅನೇಕ ಯುದ್ಧಗಳನ್ನು ಎದುರಿಸಿ, ವಚನಸಾಹಿತ್ಯವನ್ನು ಉಳಿವಿಯವರಿಗೂ ತಲುಪಿಸಿ, ತನ್ನ ಹೂಟ್ಟೂರಿಗೆ ಹಿಂತಿರುಗಿ ಆರಾಧ್ಯದೈವ ಕಲಿನಾಥನಲ್ಲಿ ಮಾಚಿದೇವರು ಐಕ್ಯರಾದರು. ಸಿದ್ಧರಾಮೇಶ್ವರ ಅವರ ವಚನದಲ್ಲಿ ಉಲ್ಲೇಖ ಮಾಡಿರುವಂತೆ ಮಾಚಿದೇವರು ಮೂರು ಕೋಟಿ ಮುನ್ನೂರು ವಚನಗಳು. ಕಲ್ಲಿನಾಥ, ಕಲಿದೇವರದೇವಯ್ಯ, ಕಲಿದೇವರದೇವಾ, ಕಲಿದೇವರ ಸ್ವಾಮಿ, ಕಲಿದೇವಾ, ಕಲಿದೇವಯ್ಯ ಎಂಬ ಅಂಕಿತನಾಮದಲ್ಲಿ ವಚನಗಳನ್ನು ರಚಿಸಿದ್ದಾರೆ. ಮಡಿವಾಳ ಮಾಚಿದೇವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಾಡಿರುವ ಸೇವೆ ಅಪಾರ. ವಿಶ್ವಗುರು ಬಸವಣ್ಣನವರ ಕ್ರಾಂತಿಯ ಸೆಳೆತದಿಂದ ಕಲ್ಯಾಣಕ್ಕೆ ಬಂದು ಅವರ ನೇತೃತ್ವದಲ್ಲಿ ನಡೆದ ಲೋಕಸೋಜಿಗದ ಸಮಾಜೋ-ಧಾರ್ವಿುಕ ಅಂದೋಲನದಲ್ಲಿ ಅದ್ವಿತೀಯ ಪಾತ್ರವಹಿಸಿದ್ದರು.
ಬಸವಣ್ಣನವರು ಕಲ್ಯಾಣವನ್ನು ತೊರೆದ ನಂತರ ಶರಣರ ಮೇಲೆ ನಡೆದ ಹಲ್ಲೆಗಳಲ್ಲಿ ಅವರನ್ನು ರಕ್ಷಿಸುವಲ್ಲಿ ಮಾಚಿದೇವರ ಪಾತ್ರ ಹಿರಿದಾಗಿದೆ. ವಚನ ಕಟ್ಟುಗಳನ್ನು ಪಟ್ಟಭದ್ರ ಹಿತಾಶಕ್ತಿಗಳಿಂದ ಉಳಿಸುವುದಕ್ಕಾಗಿ ಖಡ್ಗ ಹಿಡಿದು ಬಿಜ್ಜಳನ ಸೈನ್ಯದ ವಿರುದ್ಧ ವಿವಿಧ ಕಡೆಗಳಲ್ಲಿ ನಡೆದ ಕಾಳಗಗಳ ನೇತೃತ್ವ ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇಂದಿಗೂ ಮಡಿವಾಳ ಮಾಚಿದೇವರ ಜನ್ಮಸ್ಥಳ ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯಲ್ಲಿ ಪ್ರತಿವರ್ಷ ಯುಗಾದಿ ಅಮಾವಾಸ್ಯೆದಿನದಿಂದ ಎಂಟನೇ ದಿನಕ್ಕೆ ಮಾಚಿದೇವರ ಜಯಂತಿ ಅಂಗವಾಗಿ ರಥೋತ್ಸವ ಮತ್ತು ಜಾತ್ರೆ ನಡೆಯುತ್ತಿದೆ.
| ಅಶೋಕ್ ದೊಮ್ಮಲೂರು (ಲೇಖಕರು: ಸಂಶೋಧಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 8 =
Remember me
