|ಚಂದ್ರಿಕಾಚಿತ್ರದುರ್ಗ
‘ವಾಕ್’ ಎಂದರೆ ಮಾತು , ‘ಗೇಯ’ಎಂದರೆ ಹಾಡಲು ಯೋಗ್ಯವಾದದ್ದು. ಅಂಥ ಸಾಹಿತ್ಯವೇ ವಾಗ್ಗೇಯ. ಹಾಡಲು ಯೋಗ್ಯವಾಗಿದ್ದರೆ ಸಾಲದು, ಇಂಪಾದ ಧ್ವನಿಯಲ್ಲಿ ಹಾಡಿದಾಗ ಆ ‘ಧ್ವನಿ’ ಸ್ವರ ಎನಿಸುತ್ತದೆ. ಈ ಸ್ವರಗಳ ಗುಂಪೇ ‘ ಸಂಗೀತ’. ಸಂಗೀತ ಹುಟ್ಟಿದ್ದು ಸಾಮವೇದದಲ್ಲಿ, ಇದಕ್ಕೆ ಶ್ಲೋಕಗಳ ಆಧಾರವೂ ಇದೆ. ಈ ಕಾರಣದಿಂದ ಸಂಗೀತದಲ್ಲಿ ಬಳಸುವ ‘ಸರಿಗಮಪದನಿ- ಸಪ್ತಸ್ವರ’ಗಳನ್ನು ‘ಸಾಮಸಪ್ತಕ’ಗಳೆಂದೂ ಕರೆಯುತ್ತಾರೆ.
ಇಂತಹ ಸಂಗೀತಕ್ಕೆ ಸಾಹಿತ್ಯ, ಲಯರೂಪವಾದ ತಾಳಗಳನ್ನು ಜೋಡಿಸಿದರೆ ‘ವಾಗ್ಗೇಯ’ವಾಗುತ್ತದೆ. ಇದನ್ನು ಶಾಸ್ತ್ರಬದ್ಧವಾಗಿ ರಚಿಸುವನೇ ‘ವಾಗ್ಗೇಯಕಾರ’. ಸಂಗೀತ, ಸಾಹಿತ್ಯ, ತಾಳ ಎಲ್ಲವೂ ಒಬ್ಬ ವ್ಯಕ್ತಿಯಿಂದಲೇ ರಚಿಸಲ್ಪಟ್ಟಾಗ ಅದು ಉತ್ತಮವಾದ ಸಂಗೀತವೆನಿಸುತ್ತದೆ.ಅಂತಹ ವ್ಯಕ್ತಿ ಶ್ರೀ ತ್ಯಾಗರಾಜರು. ತಮ್ಮ ಸಂಗೀತ, ಸಾಹಿತ್ಯಗಳನ್ನು ಶಿಷ್ಯರ ಮೂಲಕ ಮತ್ತು ಬರವಣಿಗೆಗಳ ಮೂಲಕ ನಿಲ್ಲುವಂತೆ ಮಾಡಿರುವ ಮಹಾನುಭಾವರು ಹಾಗೂ ಮಹಾಸಂಗೀತಗಾರರು. ವಾಗ್ಗೇಯಕಾರನ ಲಕ್ಷ್ಯ ಸಂಗೀತದಲ್ಲಿನ ರಾಗಗಳನ್ನು ಜೀವಂತವಾಗಿಡುವುದರತ್ತ ಇರುತ್ತದೆ. ಇದಕ್ಕೆ ಸಾಹಿತ್ಯ ಮಾಧ್ಯಮವಾಗುತ್ತದೆ. ಅದು ಭಗವಂತನಸ್ತುತಿಯಾಗಿದ್ದರಂತೂ ಉತೃಷ್ಟವಾಗುತ್ತದೆ. ತ್ಯಾಗರಾಜರು ತಮ್ಮ ಸಂಗೀತದಲ್ಲಿ ಸಾಹಿತ್ಯಕ್ಕಾಗಿ ಹೆಚ್ಚಾಗಿ ಶ್ರೀರಾಮನನ್ನೇ ಅವಲಂಬಿಸಿದ್ದಾರೆ.
ಇವರು ತಂಜಾವೂರಿನ ಹತ್ತಿರ ತಿರುವಾರೂರ್ ಎಂಬ ಊರಲ್ಲಿ 1767ರ ಮೇ 4ನೇ ತಾರೀಖು ಸರ್ವಋತು ಸಂವತ್ಸರದ ವೈಶಾಖ ಶುಕ್ಲ ಸಪ್ತಮಿಯ ಪುಷ್ಯ ನಕ್ಷತ್ರದಲ್ಲಿ ಜನಿಸಿದರು. ತಂದೆ ರಾಮಬ್ರಹ್ಮ, ತಾಯಿ ಶಾಂತಾದೇವಿ ಹಾಗೂ ಇಬ್ಬರು ಸಹೋದರರು. ತ್ಯಾಗರಾಜರಿಗೆ ಎಂಟನೆಯ ವಯಸ್ಸಿಗೆ ತಂಜಾವೂರು ಸಂಸ್ಥಾನದ ಸೊಂಠಿ ವೆಂಕಟರಮಣಯ್ಯ ಅವರ ಹತ್ತಿರ ಸಂಗೀತದ ಪಾಠವಾಯಿತು. ಸಂಗೀತದ ಜೊತೆಗೆ ವೇದ, ಸಂಸ್ಕೃತ, ಜ್ಯೋತಿಷಗಳ ಪಾಠವೂ ಆಗಿತ್ತು. ಇವರು ತಮ್ಮ ಹತ್ತನೇಯ ವಯಸ್ಸಿಗೇ ಕೀರ್ತನೆಗಳನ್ನು ರಚಿಸಿದರು. ‘ನಮೋ ನಮೋ ರಾಘವಾಯ ಅನಿಶಂ’ನಂತರ ‘ಬಾಲ ಕನಕಮಯ’ ಎಂಬ ಅಠಾಣಾ ರಾಗದ ಕೀರ್ತನೆಯನ್ನು ರಚಿಸಿದ್ದರು. ಇವರು ಕೌಟುಂಬಿಕ ಕಾರಣದಿಂದ ಹುಟ್ಟೂರು ತೊರೆದು ಕ್ಷೇತ್ರಾಟನೆಗೆ ಹೊರಟವರು. 18ನೇ ವಯಸ್ಸಿನಲ್ಲಿ ಪಾರ್ವತಿ ಎಂಬುವವರ ಜೊತೆ ವಿವಾಹವಾಗಿ ಸೀತಾಲಕ್ಷ್ಮೀ ಎಂಬ ಮಗಳೂ ಇದ್ದಳು. ಕ್ಷೇತ್ರಾಟನೆಯಲ್ಲಿ ದೇವರುಗಳ ಮೇಲೆ ಕೃತಿಗಳನ್ನು ರಚಿಸುತ್ತಾ ಹೊರಟರು. ಕೋವೂರಿನ ಸುಂದರೇಶ್ವರನ ಕುರಿತಾದ ಐದು ಕೀರ್ತನೆಗಳು ‘ಕೋವೂರು ಪಂಚರತ್ನ’ ಕೀರ್ತನಗಳೆಂದೇ ಪ್ರಸಿದ್ಧಿ ಪಡೆದವು. ಸಂಗೀತಗಾರರೆಂದು ಪ್ರಸಿದ್ಧಿ ಪಡೆದ ನಂತರ ಹುಟ್ಟೂರು ತಿರುವಾರೂರಿಗೆ ಮರಳಿದಾಗ ಅಲ್ಲಿ ನದಿಯಲ್ಲಿ ರಾಮನ ವಿಗ್ರಹ ದೊರೆಯಿತು. ನಂತರ ರಾಮನ ಮೇಲೆ ಕೃತಿಗಳನ್ನು ರಚಿಸುತ್ತ್ತ ರಾಮನ ಪರಮಭಕ್ತರೆನಿಸಿದರು.
ಪ್ರತಿದಿನವೂ ಹೊಸ ರಾಗ ಹೊಸ ಸಾಹಿತ್ಯ ರಚಿಸುತ್ತಾ ಉಪಚಾರಕೀರ್ತನೆ, ವರ್ಣವನ್ನು ಹೋಲುವ ‘ಪಂಚರತ್ನ’ಕೀರ್ತನೆಗಳನ್ನೂ ಭಕ್ತಿಯಿಂದ ಕೂಡಿದ ಸಾವಿರಾರು ಕೀರ್ತನೆಗಳನ್ನು ರಚಿಸಿದರು. 72ಮೇಳ ಕರ್ತ ರಾಗಗಳಲ್ಲೂ ಕೃತಿಗಳನ್ನು ರಚಿಸಿದ ತ್ಯಾಗರಾಜರು ಕೆಲವು ಅಪೂರ್ವ ರಾಗಗಳನ್ನು ಸೃಷ್ಟಿಸಿದ್ದಾರೆ. ಇವರ ರಾಗ ಸಂಯೋಜನೆ ತಾಳಬದ್ಧವಾಗಿದ್ದು ಕರ್ನಾಟಕಸಂಗೀತಕ್ಕೆ ಅಮೂಲ್ಯವಾದ ಕಾಣಿಕೆಯಾಗಿದೆ. ದೀಪಕ, ದೇವಾಮೃತವರ್ಷಿಣಿ, ಗಂಬೀರವಾಣಿ, ಗರುಡ ಧ್ವನಿ, ಕೋಕಿಲ ಧ್ವನಿ, ಮಯೂರ ಧ್ವನಿ, ನಭೋಮಣಿ, ವಿಜಯಶ್ರೀ ಇವುಗಳು ತ್ಯಾಗರಾಜರು ರಚಿಸಿದ ಅಪರೂಪದ ರಾಗಗಳು, ಜೊತೆಗೆ ಕೋವೂರು ಪಂಚರತ್ನ, ತಿರುವೊಟ್ಟಿಯಾರ್ ತ್ರಿಪುರ ಸುಂದರೀ ಪಂಚರತ್ನ, ಲಾಲ್ ಗುಡಿ ಪಂಚರತ್ನ ಮುಂತಾದ ಕೃತಿಗಳ ಗುಂಪು ಸೃಷ್ಟಿಯಾದವು. ಇದರಿಂದ ಇವರು ಹಿರಿಯವಾಗ್ಗೇಯಕಾರರೆಂದೂ, ಘನವಿದ್ವಾಂಸರೆಂದೂ ಸಾಬೀತಾಯಿತು. ಅದಕ್ಕೆ ಇವತ್ತಿಗೂ ಸಂಗೀತಗಾರರಿಗೆ ಸವಾಲಾಗಿರುವ ಘನರಾಗಗಳ ‘ಪಂಚರತ್ನ ಕೀರ್ತನೆ’ಗಳೇ ಸಾಕ್ಷಿಯಾಗಿವೆ. ನಾಟ, ಗೌಳ, ಅರಭಿ, ವರಾಳಿ, ಶ್ರೀ, ಭೌಳಿ ,ಮಾಳವಶ್ರೀ, ರೀತಿಗೌಳ ಇವುಗಳನ್ನು ಘನರಾಗಗಳೆಂದು ವೆಂಕಟ ಮುಖಿ ತಮ್ಮ ‘ಚತುರ್ದಂಡ ಪ್ರಕಾಶಿಕೆ’ಯಲ್ಲಿ ತಿಳಿಸಿದ್ದಾರೆ.
ತ್ಯಾಗರಾಜರು ಐದು ಘನರಾಗಗಳನ್ನು ಆರಿಸಿಕೊಂಡು (ನಾಟ,ಗೌಳ,ಅರಭಿ, ವರಾಳಿ, ಶ್ರೀ) ‘ತಾನವರ್ಣ’ದ ರೀತಿಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. ಭಾಷೆ, ಶೈಲಿ ಎರಡೂ ಜಟಿಲತೆಯಿಂದ ಕೂಡಿ ಅರ್ಥ ಗಾಂಭೀರ್ಯ ಹಾಗೂ ರಸಾಸ್ವಾದನೆಗೆ ಉದಾಹರಣೆ ಈ ಕೀರ್ತನೆಗಳು. ತ್ಯಾಗರಾಜರು ಅವರ ಪತ್ನಿಯ ನಿಧನ ನಂತರ ತಮ್ಮ ಪೂರ್ತಿ ಜೀವನವನ್ನು ರಾಮನಿಗೆ ಅರ್ಪಿಸಿ ತಮ್ಮ 88ನೇ ವಯಸ್ಸಿಗೆ ಸನ್ಯಾಸ ಸ್ವೀಕರಿಸಿ ‘ಪರಾಭವ ಸಂವತ್ಸರ ಪುಷ್ಯ ಬಹುಳ ಪಂಚಮಿ’ಯಂದು (1847ರ ಜ. 6) ನಾದಬ್ರಹ್ಮನಲ್ಲಿ ಲೀನರಾದರು.
‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

ಹ್ಯಾಕರ್​ ಶ್ರೀಕಿ ಬಂಧನ ಆಗುವವರೆಗೂ ಇಷ್ಟು ಬುದ್ಧಿವಂತರಿದ್ದಾರೆ ಅನ್ನೋದೇ ಗೊತ್ತಿರಲಿಲ್ಲ: ಗೃಹಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + twenty =
Remember me
