|ಪ್ರಕಾಶ್ ಕೆ. ನಾಡಿಗ್ತುಮಕೂರು
ಕಾರ್ತಿಕವು ಮಂಗಳವಾದ ಪರಮ ಪುಣ್ಯಕರವಾದ ಮಾಸ. ದೀಪಾರಾಧನೆಯ ಈ ಮಾಸ ದೇವರುಗಳಿಗೆ ಪ್ರಿಯವಾದ ಮಾಸವಾಗಿದ್ದು, ಭಗವಂತ ಶ್ರೀಮನ್ನಾರಾಯಣ ನನ್ನು ನಾನಾ ರೀತಿಯಲ್ಲಿ ಆರಾಧಿಸುತ್ತಾರೆ. ಕಾರ್ತಿಕದಲ್ಲೇ ಬರುವ ಪವಿತ್ರವಾದ ಹಬ್ಬ ‘ಉತ್ಥಾನ ದ್ವಾದಶಿ’ ಅಥವಾ ‘ತುಳಸಿ ಹಬ್ಬ’. ಶ್ರೀಮನ್ನಾರಾಯಣನು ಯೋಗನಿದ್ರೆಯಿಂದ ಜಾಗೃತಗೊಳ್ಳುವ ದಿನವೇ ಉತ್ಥಾನ ದ್ವಾದಶಿ.
ಗೋಧೂಳಿ ಸಮಯದಲ್ಲಿ ತುಳಸಿ ಆರಾಧನೆ ಮಾಡುವುದು ಈ ಹಬ್ಬದ ವಿಶೇಷ. ಮನೆಯ ಮುಂದಿನ ತುಳಸಿ ಕಟ್ಟೆಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ ಷೋಡಷೋಪಚಾರ ಪೂಜೆ ಮಾಡುತ್ತಾರೆ. ತುಳಸಿ ಕಟ್ಟೆಯನ್ನು ಪುಷ್ಪಗಳಿಂದ ಅಲಂಕರಿಸಿ ಮಹಾವಿಷ್ಣುವನ್ನು ಪುರುಷಸೂಕ್ತದಿಂದಲೂ ಶ್ರೀತುಳಸಿಯನ್ನು ಶ್ರೀಸೂಕ್ತದಿಂದಲೂ ಆರಾಧಿಸುತ್ತಾರೆ. ತುಳಸಿದೇವಿಗೆ ಮಂಗಳಸ್ನಾನ ಮತ್ತು ಹರಿದ್ರಾಕುಂಕುಮ ಸುಗಂಧದ್ರವ್ಯಗಳಿಂದ ಸುಮಂಗಲಿಯರು ಪೂಜೆ ಮಾಡುತ್ತಾರೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ಪಾನಕ, ಕೋಸಂಬರಿ ಮತ್ತು ವಿವಿಧ ಬಗೆಯ ಭಕ್ಷ್ಯಗಳನ್ನು ನೈವೈದ್ಯ ಮಾಡಿ ಮುತೆôದೆಯರನ್ನು ಆಹ್ವಾನಿಸಿ ತುಳಸಿಗೆ ಆರತಿ ಬೆಳಗುವರು. ಬಂದ ಮುತೆôದೆಯರಿಗೆಲ್ಲ ಅರಿಶಿನ, ಕುಂಕುಮ, ದಕ್ಷಿಣೆ, ತಾಂಬೂಲವನ್ನು ಕೊಡುವುದು ವಾಡಿಕೆ.
ತುಳಸಿ ಗಿಡದಲ್ಲಿ ನೆಲ್ಲಿ ಟೊಂಗೆ ಸಿಕ್ಕಿಸಿ ಪೂಜೆ ಮಾಡುವುದರ ಹಿನ್ನೆಲೆಯಲ್ಲಿ ಸ್ವಾರಸ್ಯಕರವಾದ ಕಥೆಯಿದೆ. ಶ್ರೀಮನ್ನಾರಾಯಣ ಕಾರ್ತಿಕ ಶುಕ್ಲ ಪಕ್ಷ ದ್ವಾದಶಿಯ ದಿನ ತುಳಸಿಯನ್ನು ವರಿಸಿದ್ದನೆಂದು ಪ್ರತೀತಿ. ಶ್ರೀತುಳಸಿ ತ್ರೇತಾಯುಗದಲ್ಲಿ ಮಾನವ ರೂಪದಲ್ಲಿ ವೃಂದಾ ಎಂಬ ನಾಮಧೇಯದಿಂದ ಹುಟ್ಟಿದ್ದಳು. ಈಕೆಯ ಪತಿ ‘ಜಲಂಧರ’ ಮಹಾಶಿವಭಕ್ತನಾಗಿದ್ದ. ಈತನ ತೇಜಸ್ಸು ಮತ್ತು ಶಕ್ತಿ ಅಧಿಕವಾಗಲು ಪತ್ನಿ ವೃಂದೆಯ ಪಾತಿವ್ರತ್ಯವೂ ಕಾರಣವಾಗಿತ್ತು. ಜಲಂಧರ ಭಗವಂತನನ್ನು ಕುರಿತು ಉಗ್ರವಾದ ತಪಸ್ಸು ಮಾಡಿದ. ಭಗವಂತ ಪ್ರತ್ಯಕ್ಷನಾದಾಗ ಅಮರತ್ವ ದಯಪಾಲಿಸುವಂತೆ ಕೇಳಿದ. ಆದರೆ ಪ್ರಕೃತಿಗೆ ವಿರುದ್ಧವಾಗಿ ವರ ಕೊಡಲು ಸಾಧ್ಯವೇ? ಹಾಗಾಗಿ ಅಮರತ್ವಕ್ಕೆ ಸಮನಾದ ವರವನ್ನು ನೀಡಿದ. ‘ನಿನ್ನ ಪತ್ನಿಯ ಪಾತಿವ್ರತ್ಯ ಎಲ್ಲಿಯವರೆಗೂ ಪರಿಶುದ್ಧವಾಗಿರುತ್ತದೋ ಅಲ್ಲಿಯವರೆಗೂ ಸಾವು ನಿನ್ನ ಬಳಿ ಬರುವುದಿಲ್ಲ’ ಎಂಬ ವರ ನೀಡಿದ. ವೃಂದ ಮಹಾ ಪತಿವ್ರತೆಯಾದ್ದರಿಂದ ಜಲಂಧರ ಕೊಬ್ಬಿದ. ಹೀಗೆ ಕೊಬ್ಬಿದ ಜಲಂಧರ ದೇವಭಕ್ತರಿಗೆ, ತಪಸ್ವಿಗಳಿಗೆ, ಸಾಮಾನ್ಯರಿಗೆ ತೊಂದರೆ ಕೊಡಲಾರಂಭಿಸಿದ. ಇದರಿಂದ ನೊಂದ ಋಷಿಗಳು, ದೇವಾನುದೇವತೆಗಳು ನಾರಾಯಣನ ಮೊರೆ ಹೊಕ್ಕರು. ಭೂಲೋಕದಲ್ಲಿ ದುಷ್ಟನ ಸಂಹಾರವಾಗಿ ಧರ್ಮಸಂಸ್ಥಾಪನೆಯಾಗಬೇಕು ಎಂಬ ಉದ್ದೇಶದಿಂದ ಶ್ರೀಹರಿ ಮಾನವರೂಪದಲ್ಲಿ ಬಂದು ವೃಂದೆಯ ಪಾತಿವ್ರತ್ಯ ಭಂಗಪಡಿಸಿದ. ಇದರಿಂದ ಜಲಂಧರ ಸಾವನ್ನಪ್ಪಿ, ಲೋಕಕ್ಕೆ ನೆಮ್ಮದಿಯಾಯಿತು.
ಆದರೆ ವೃಂದ ಚಿತೆ ನಿರ್ವಿುಸಿಕೊಂಡು ಮಂಗಳರೂಪಿಣಿ ಪಾರ್ವತಿಯನ್ನು ಸ್ಮರಿಸುತ್ತ ತನ್ನನ್ನು ಅಗ್ನಿಗೆ ಸಮರ್ಪಿಸಿಕೊಂಡಾಗ ಪಾರ್ವತಿ ಆ ಅಗ್ನಿಕುಂಡವನ್ನು ಮಂತ್ರಶಕ್ತಿಯಿಂದ ತುಳಸಿ, ನೆಲ್ಲಿ ಮತ್ತು ಜಾಜಿ ಗಿಡಗಳಿಂದ ನಂದವನವನ್ನಾಗಿ ಮಾಡುತ್ತಾಳೆ. ಅಂದಿನಿಂದ ತುಳಸಿ ನಿವಾಸ ಬೃಂದಾವನವಾಯಿತು. ಹಾಗಾಗಿ ತುಳಸಿ ಹಬ್ಬದ ದಿನ ನೆಲ್ಲಿಕಾಯಿ ಟೊಂಗೆ ಮತ್ತು ಜಾಜಿ ಹೂವುಗಳಿಂದ ಪೂಜೆ ಮಾಡುತ್ತಾರೆ.
ತುಳಸಿ ಪೂಜೆ ಮಾಡುವಾಗ ಈ ಶ್ಲೋಕವನ್ನು ಹೇಳಿಕೊಳ್ಳಬೇಕು…
(ಲೇಖಕರು ಹವ್ಯಾಸಿ ಬರಹಗಾರರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + fourteen =
Remember me
