| ಡಾ.ಗುರುರಾಜ ಪೋಶೆಟ್ಟಿಹಳ್ಳಿ
ಪಂಡಿತ-ಪಾಮರ ಭೇದಗಳಿಲ್ಲದೆ ಎಲ್ಲರಿಗೂ ದಕ್ಕಿದ ಮಹಾಸಂತ ತ್ಯಾಗರಾಜರು. ಭಕ್ತರಿಗೆ ಅವರೊಬ್ಬ ಭಾಗವತ, ಮುಮಕ್ಷಿಗಳಿಗೆ ಯೋಗಿ, ರಸಿಕರಿಗೆ ನಾದದ ಮೂರ್ತರೂಪ. ಶ್ರೀರಾಮನಿಗಾದರೋ ಭಕ್ತಾಗ್ರೇಸರ. ಸಂಗೀತ ಪ್ರಪಂಚಕ್ಕೆ ತ್ಯಾಗರಾಜರ ಕೊಡುಗೆ ವಿಸ್ತಾರವಾದದ್ದು ಮತ್ತು ಉತ್ಕೃಷ್ಟ ಗುಣಮಟ್ಟದ್ದು.
ಸ್ವತಃ ಕವಿಶ್ರೇಷ್ಠರೂ ಮತ್ತು ಯೋಗಿಸದೃಶರೂ ಆಗಿದ್ದ ತ್ಯಾಗರಾಜರ ಸಂಗೀತದಲ್ಲಿ ಕಾವ್ಯ, ಭಕ್ತಿ ಮತ್ತು ಅಧ್ಯಾತ್ಮವು ಮೇಳೈಸಿದೆ, ಒಂದು ಕತೆಯ ಪ್ರಕಾರ, ಚಿಕ್ಕವಯಸ್ಸಿನಲ್ಲೇ ರಾಮಬ್ರಹ್ಮರು ದೇವತಾಪೂಜೆಗೆಂದು ಉಪಯೋಗಿಸಿದ್ದ ತುಳಸೀಮಾಲೆ ಬಾಡಿಹೋಗಿದ್ದು ನೋಡಿ ನೊಂದ ಬಾಲಕ ತ್ಯಾಗರಾಜ, ಬಾಡದ ಹೂವು ಅದಾವುದು ಎಂದು ಯೋಚಿಸಿ ಅಪ್ರಯತ್ನವಾಗಿ ಕೀರ್ತನೆಯೊಂದನ್ನು ಗೋಡೆಯ ಮೇಲೆ ಗೀಚಿದನಂತೆ. ಅದನ್ನೇ ರಾಮನ ಪಾದಪೂಜೆಯಾಗಿ ಸಲ್ಲಿಸಿದನಂತೆ.
ತ್ಯಾಗರಾಜರಿಗೆ ನಾರದರು ‘ಸ್ವರಾರ್ಣವ’ ಎಂಬ ಸಂಗೀತಶಾಸ್ತ್ರ ಗ್ರಂಥವನ್ನು ದಯಪಾಲಿಸಿದರು ಎಂಬ ಕತೆಯಿದೆಯಾದರೂ ಬೇರೆ ವಿವರಗಳು ದೊರಕುವುದಿಲ್ಲ. ನಾರದಮುನಿ ವೆಡಲಿನ ಕೃತಿಯ ಚರಣದಲ್ಲಿ ‘ರಾಜಿನಲ್ಲಿನ ಶ್ರೀತ್ಯಾಗರಾಜರ ಸಖುನಿ ಮರ್ಮಮುನು’ ಎಂದು ಹೇಳುವಾಗ ನಾರದರನ್ನು ತ್ಯಾಗರಾಜಸಖ ಎಂದೇ ಬಳಸುತ್ತಾರೆ ಎಂಬುದನ್ನು ಗಮನಿಸಿದರೆ, ಐತಿಹ್ಯ ಇರಬಹುದೆನಿಸುತ್ತದೆ.
ನಾದದೊಳಗಿನ ಬ್ರಹ್ಮಾನಂದ: ತ್ಯಾಗರಾಜರ ಸಾಧನೆ ಮತ್ತು ಕೊಡುಗೆ ಅನ್ಯಾದೃಶವಾದುದು. ಸಾವಿರಾರು ಕೀರ್ತನೆಗಳನ್ನು ರಚಿಸಿರುವ ಅವರ ಕೃತಿಗಳಲ್ಲಿನ ಸಂಗೀತದ ಮಹತ್ತು ಮತ್ತು ಸಾಹಿತ್ಯದ ಸಮೃದ್ಧಿ ಬೆರಗುಗೊಳಿಸುವಂಥದು. ಸರಿಯಾಗಿ 250 ವರ್ಷಗಳ ಹಿಂದೆ ಹುಟ್ಟಿ ಎಂಬತ್ತು ವರ್ಷ ಸಾರ್ಥಕ ಬದುಕು ನಡೆಸಿದ ಈ ಮಹಾನುಭಾವ ಉಜ್ವಲವಾದ ರಚನೆಗಳ ಉದ್ದಕ್ಕೂ ವೈವಿಧ್ಯಪೂರ್ಣವಾದ ಸಂಗೀತವನ್ನು, ನೂರಕ್ಕೂ ಹೆಚ್ಚು ರಾಗಗಳನ್ನು ಯೋಜಿಸಿಟ್ಟಿದ್ದಾರೆ. ಜತೆಗೇ ತಮ್ಮೊಳಗೇ ಹುಟ್ಟಿದ ತತ್ತ ್ವಳನ್ನು-ಕಾಣ್ಕೆಗಳನ್ನು ರಚನೆಗಳ ಸಾಹಿತ್ಯದಲ್ಲಿ ನೀಡಿದ್ದಾರೆ. ತ್ಯಾಗರಾಜ ಬಹುತೇಕ ರಚನೆಗಳು ಲಲಿತವಾದ ತೆಲುಗು ಭಾಷೆಯಲ್ಲಿವೆ. ಕೆಲವು ಸಂಸ್ಕೃತ ರಚನೆಗಳೂ ಇವೆ. ಸರಳವಾದ ಕೃತಿಗಳಿಂದ ಹಿಡಿದು, ಹಿಂದಿನ ಪ್ರಬಂಧ ಸ್ವರೂಪದಲ್ಲಿರುವ ಪಂಚರತ್ನಗಳಂಥ ಕೃತಿಗಳವರೆಗೂ ಇದೆ ಅವರ ವ್ಯಾಪ್ತಿ. ಘನರಾಗ ಪಂಚರತ್ನ, ಕೊವೂರಿ ಸುಂದರೇಶ್ವರ ಪಂಚರತ್ನ, ಲಾಲ್ಗುಡಿ ಪಂಚರತ್ನ, ಶ್ರೀರಂಗಂ ಪಂಚರತ್ನಂ, ತ್ರಿಪುರಸುಂದರಿ ಪಂಚರತ್ನ, ಉತ್ಸವ ಸಂಪ್ರದಾಯ ಕೃತಿಗಳು, ದಿವ್ಯನಾಮ ಸಂಕೀರ್ತನೆಗಳು, ಅನೇಕ ದೇವದೇವತೆಗಳ ಕುರಿತಾದ ನೂರಾರು ಕೃತಿಗಳು; ಇದರ ಜೊತೆಗೆ ಪ್ರಹ್ಲಾದ ವಿಜಯ ಮತ್ತು ನೌಕಾ ಚರಿತಮ್ ಎಂಬ ಎರಡು ಸಂಗೀತ ರೂಪಕಗಳನ್ನೂ ರಚಿಸಿದ್ದಾರೆ. ತ್ಯಾಗರಾಜರ ಔಪಾಸನೆಯ ಕೇಂದ್ರ ಶ್ರೀರಾಮನಾದರೂ, ಅವರ ಮಾಧ್ಯಮ ಸಂಗೀತ. ನಾದೋಪಾಸನೆಯ ವಿನಾ ಮುಕ್ತಿ ಇಲ್ಲವೆನ್ನುವುದು ಅವರ ತತ್ತ ್ವ
ವಾಗ್ಗೇಯಕಾರ: ಪ್ರಪಂಚದಾದ್ಯಂತ ಕರ್ನಾಟಕ ಸಂಗೀತಗಾರರಿಗೆ, ಕಲಾರಸಿಕರಿಗೆ ಪುಷ್ಯಮಾಸದ ಬಹುಳ ಪಂಚಮಿ ಪರಮಪವಿತ್ರವಾದ ದಿವಸ. ಏಕೆಂದರೆ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ತ್ಯಾಗರಾಜರು ನಾದದಲ್ಲಿ ಐಕ್ಯರಾದ ದಿನವಿದು. ತ್ಯಾಗರಾಜರು ಗುರುವಾಗಿ, ವಾಗ್ಗೇಯಕಾರರಾಗಿ, ಸಂಗೀತಶಾಸ್ತ್ರಜ್ಞರಾಗಿ, ವಿರಾಗಿಯಾಗಿ, ಆತ್ಮೋನ್ನತಿಗೆ ಮಾರ್ಗದರ್ಶಕರಾಗಿ ಬೆಳಗಿದವರು. ಅವರ ಸಾಹಿತ್ಯದಲ್ಲಿ ಅಲಂಕಾರಭರಿತವಾದ ಸುಲಲಿತ ಪದಗಳಿದ್ದರೆ, ಸಂಗೀತದಲ್ಲಿ ರಾಗ- ಭಾವ- ತಾಳಗಳ ಸಂಗಮವನ್ನು ಗಮನಿಸಬಹುದು.
ತ್ಯಾಗರಾಜರ ಪ್ರೌಢರಚನೆಗಳು ಭವ್ಯವಾದ ಅರಮನೆಗಳಂತೆ, ಗಗನಚುಂಬಿ ಸೌಧಗಳಂತೆ ಇವೆ. ಸಂಗೀತವನ್ನು ಚೆನ್ನಾಗಿ ಅಭ್ಯಸಿಸಿದವರು ಮಾತ್ರ ಹಾಡಿ ನಿರ್ವಹಿಸಲು ಸಾಧ್ಯ. ಮೋಹನರಾಗದಲ್ಲಿ ನನು ಪಾಲಿಂಪ, ಮೋಹನರಾಮ; ತೋಡಿರಾಗದ ಕದ್ದನುವಾರಿಕಿ; ಶಂಕರಾಭರಣದ ಎಂದುಕು ಪೆದ್ದಲ- ಎದುಟ ನಿಲಚಿತೆ; ಖರಹರಪ್ರಿಯರಾಗದ ಚಿಕ್ಕನಿ ರಾಜಮಾರ್ಗಮುಲುಂಡಗ ಮುಂತಾದ ಕೀರ್ತನೆಗಳು ಭೋರ್ಗರೆಯುವ ಜಲಪಾತದಂತಿದ್ದರೆ, ಸೌಮ್ಯವಾಗಿ ಹರಿಯುವ, ಅಲ್ಪ ಸಂಗೀತಬಲ್ಲವರೂ ಹಾಡಲು ಸಾಧ್ಯವಾಗುವ ದಿವ್ಯನಾಮ ಸಂಕೀರ್ತನೆಗಳನ್ನೂ ರಚಿಸಿದ್ದಾರೆ.
ತ್ಯಾಗರಾಜರು ತಮ್ಮ ಕೊನೆಯ ದಿನಗಳಲ್ಲಿ ಆಪತ್ಕಾಲ ಸಂನ್ಯಾಸವನ್ನು ಸ್ವೀಕರಿಸಿ ನಾದ ಬ್ರಹ್ಮಾನಂದಸ್ವಾಮಿ ಎಂಬ ಸಂನ್ಯಾಸನಾಮವನ್ನು ಪಡೆದು, ಪರಭಾವ ಸಂವತ್ಸರದ ಪುಷ್ಯ ಬಹುಳ ಪಂಚಮಿಯಂದು (6.1.1847) ನಾದದಲ್ಲಿ ಲೀನವಾದರು. ಆನಂತರದ ವರ್ಷಗಳಲ್ಲಿ ಅವರ ಬೃಂದಾವನವನ್ನು ಗುರುತಿಸಿ ಅದಕ್ಕೊಂದು ಸೂರನ್ನು ನಿರ್ವಿುಸಿದ ಕೀರ್ತಿ ಬೆಂಗಳೂರು ನಾಗರತ್ನಮ್ಮನವರಿಗೆ ಸಲ್ಲುತ್ತದೆ.
ಎಂದರೋ ಮಹಾನುಭಾವುಲು: ಶ್ರೀರಾಗದ ‘ಎಂದರೋ ಮಹಾನುಭಾವಲು’ ರಚನೆಯ ಸಂಕ್ಷಿಪ್ತ ಹಿನ್ನೆಲೆ ಹೀಗಿದೆ. ಒಮ್ಮೆ ಅತಿಶಯ ಪ್ರತಿಭಾಶಾಲಿಯಾಗಿದ್ದ ಮಾರನ್ ಎನ್ನುವವನು, ಸ್ವಂತ ಪ್ರಯತ್ನದಿಂದ ಸಿದ್ಧಿಸಿಕೊಂಡ ಗಾನಪ್ರತಿಭೆಯನ್ನು ಇವರ ಮುಂದೆ ಮೆರೆದಾಗ, ತ್ಯಾಗರಾಜರು ಬೆರಗಾಗಿ ಮೆಚ್ಚಿ ಅಲ್ಲೇ ‘ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು…’ ಕೃತಿ ರಚಿಸಿ ಅವನನ್ನು ಅಭಿನಂದಿಸಿದರಂತೆ. ಈ ಕೃತಿಯು ತ್ಯಾಗರಾಜರ ಮೇರು ಕೃತಿಯಾಗಿದೆ.
(ಲೇಖಕರು ಸಂಸ್ಕೃತಿ ಚಿಂತಕರು)
ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿರುವ 2ನೇ ಬೆಕ್ಕನ್ನು ಪತ್ತೆಹಚ್ಚುವ ಸಾಮರ್ಥ್ಯ ನಿಮಗಿದೆಯಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + seventeen =
Remember me
