ಬೆಂಗಳೂರು:ಈ ವರ್ಷದ ಆರಂಭದಿಂದ ಹೆಚ್ಚುತ್ತಲೇ ಬಂದಿದ್ದ ಕರೊನಾ ಸೋಂಕಿನ ಪ್ರಕರಣಗಳು ಈಗ ಒಂದಷ್ಟು ತಹಬದಿಗೆ ಬಂದಂತೆ ಕಾಣಿಸುತ್ತಿವೆ. ಅದರಲ್ಲೂ ಕಳೆದ ಎರಡು ಮೂರು ದಿನಗಳಿಂದ ದೈನಂದಿನ ಕರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿರುವುದು ಆಶಾದಾಯಕ ಬೆಳವಣಿಗೆ ಆಗಿದೆ.
ಈ ನಡುವೆ ಇಂದಿನ ಕರೊನಾ ಬುಲೆಟಿನ್ ಮತ್ತೊಂದಷ್ಟು ಸಮಾಧಾನವನ್ನು ನೀಡುವಂತಿದೆ. ಏಕೆಂದರೆ ಇಂದು ಹೊಸದಾಗಿ ದೃಢಪಟ್ಟ ಕರೊನಾ ಸೋಂಕಿನ ಪ್ರಕರಣಗಳಿಗಿಂತ ಇವತ್ತು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ದುಪ್ಪಟ್ಟಿಗಿಂತಲೂ ಅಧಿಕವಿದೆ.
ಇದನ್ನೂ ಓದಿ:ಮತ್ತೆ ಬಣ್ಣ ಹಚ್ಚಿದ್ರು ನಟಿ ನೀತೂ ಶೆಟ್ಟಿ; ಈಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಕುಂಜೆ..
ಇಂದು ರಾಜ್ಯದಲ್ಲಿ 33,337 ಮಂದಿಯಲ್ಲಿ ಕರೊನಾ ದೃಢಪಟ್ಟಿದ್ದು, ಆ ಪೈಕಿ ಬೆಂಗಳೂರಿನಲ್ಲೇ 16,586 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,52,132ಕ್ಕೆ ಇಳಿದಿದ್ದರೆ ಪಾಸಿಟಿವಿಟಿ ದರದಲ್ಲೂ ಇಳಿಕೆ ಕಂಡುಬಂದಿದೆ. ನಿನ್ನೆ ಶೇ.20.91 ಇದ್ದ ಪಾಸಿಟಿವಿಟಿ ದರ ಇಂದು ಶೇ. 19.37ಕ್ಕೆ ಇಳಿದಿದೆ. ಅದರಲ್ಲೂ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಇವತ್ತೊಂದೇ ದಿನ 69,902 ಮಂದಿ ಬಿಡುಗಡೆ ಆಗಿದ್ದಾರೆ.
ಠಾಣೆಗೇ ಬಂದಿತ್ತು ಎಸ್​ಪಿ ಕಾರು: ಸರ್ಕಲ್ ಇನ್​ಸ್ಪೆಕ್ಟರ್​ಗೂ ಮುಳುವಾಯ್ತು ಎಸ್​ಐ ದರ್ಬಾರು…
Video | ಮೊಬೈಲ್​ಫೋನ್​ ನೋಡುತ್ತಲೇ ಬಸ್​ ಚಲಾಯಿಸಿದ ಚಾಲಕ; ಪ್ರಯಾಣಿಕರು ಆಕ್ಷೇಪಿಸಿದ್ದರೂ ಡೋಂಟ್​ ಕೇರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 9 =
Remember me
