ಬೆಂಗಳೂರು:ರಾಜ್ಯದಲ್ಲಿ ಸೋಮವಾರ 7,606 ಕರೊನಾ ಸೋಂಕಿತರು ಹೊಸದಾಗಿ ಪತ್ತೆಯಾಗಿದ್ದರೂ, ಸೋಂಕಿತರ ಸಂಖ್ಯೆಗಿಂತಲೂ ಗುಣವಾಗಿ ಬಿಡುಗಡೆ ಆಗಿರುವವರ ಸಂಖ್ಯೆ ಇಂದು ನಿನ್ನೆಗಿಂತಲೂ ಹೆಚ್ಚಾಗಿರುವುದು ಒಂದಷ್ಟು ನಿರಾಳತೆ ಮೂಡಿಸುವಂತಿದೆ.
ಸೋಮವಾರ 7,606 ಪ್ರಕರಣಗಳೊಂದಿಗೆ ಇದುವರೆಗಿನ ಸೋಂಕಿತರ ಒಟ್ಟು ಸಂಖ್ಯೆ 7,17,915ಕ್ಕೆ ತಲುಪಿದೆ. ಆದರೆ 12,030 ಮಂದಿ ಸೋಂಕಿನಿಂದ ಗುಣವಾಗಿ ಸೋಮವಾರ ಬಿಡುಗಡೆ ಆಗಿದ್ದು, ಇದುವರೆಗೆ ಗುಣ ಆಗಿ ಬಿಡುಗಡೆ ಆಗಿರುವವರ ಸಂಖ್ಯೆ 5,92,084ಕ್ಕೆ ಏರಿದೆ.
ಅದಾಗ್ಯೂ ರಾಜ್ಯದಲ್ಲಿ 1,15,776 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ ಗಂಭೀರ ಪರಿಸ್ಥಿತಿಯಿಂದಾಗಿ 928 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಸರದ ಸಂಗತಿ ಎಂದರೆ ಒಂದೇ 70 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ 10,036 ಮಂದಿ ಕರೊನಾದಿಂದಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಕರೊನಾ ಬುಲೆಟಿನ್​: ಸೋಂಕಿತರಿಗಿಂತ ಗುಣವಾದವರೇ ಅಧಿಕ
ರಾಜ್ಯದಲ್ಲಿ ಭಾನುವಾರ ಹೊಸದಾಗಿ 9,523 ಕರೊನಾ ಸೋಂಕಿತರು ಪತ್ತೆಯಾಗಿದ್ದು, ಗುಣಮುಖರ ಪೈಕಿ 10,107 ಮಂದಿ ಬಿಡುಗಡೆ ಆಗಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
