ಬೆಂಗಳೂರು:ರಾಜ್ಯದ ಪ್ರತಿಷ್ಠಿತ ಯೋಗ ಸಂಸ್ಥೆ ರಾಷ್ಟ್ರೆೊತ್ಥಾನ ಪರಿಷತ್ ಭಾನುವಾರ (ಜೂ.21) ರಾಜ್ಯಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದೆ. ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ಆಯೋಜಿಸಲಾಗಿರá-ವ
ಈ ಯೋಗ ಕಾರ್ಯಕ್ರಮದಲ್ಲಿ ಆನ್​ಲೈನ್ ಮೂಲಕ ಪಾಲ್ಗೊಳ್ಳಬಹುದು. ರಾಷ್ಟ್ರೆೊತ್ಥಾನ ಪರಿಷತ್ ವತಿಯಿಂದ ಇದುವರೆಗೆ 1 ಲಕ್ಷಕ್ಕೂ ಅಧಿಕ ಮಂದಿಗೆ ಯೋಗ ತರಬೇತಿ ನೀಡಲಾಗಿದ್ದು, ಪ್ರತಿ ವರ್ಷ ಯೋಗ ದಿನವನ್ನು ರಾಜ್ಯದ ಅನೇಕ ಜಿಲ್ಲೆಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನರ ಜತೆಗೆ ಆಚರಿಸಲಾಗುತ್ತಿತ್ತು. ಈ ವರ್ಷ ಕರೊನಾ ಕಾರಣಕ್ಕೆ ಒಟ್ಟಾಗಿ ಸೇರಲು ಅವಕಾಶ ಇಲ್ಲದಿರುವುದರಿಂದ ಆನ್​ಲೈನ್​ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಫೇಸ್​ಬುಕ್​ನಲ್ಲಿ ನೇರ ಪ್ರಸಾರ: ಯೋಗ ದಿನಾಚರಣೆ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ ‘ಮನೆಮನೆಗೆ ಯೋಗ-ಕುಟುಂಬ ಸದಸ್ಯರೊಂದಿಗೆ ಯೋಗ’ ಎಂಬ ಅಭಿಯಾನ ಕೈಗೊಂಡಿದೆ. ಈ ಅಭಿಯಾನದ ಅಂಗವಾಗಿ ಕರೊನಾ ಸಂದರ್ಭದ ಲಾಕ್​ಡೌನ್ ಹಾಗೂ ತದನಂತರದ ಒಂದು ವಾರ ಅಂದಾಜು 40ಕ್ಕೂ ಅಧಿಕ ದಿನ ಆನ್​ಲೈನ್ ಮೂಲಕ ಯೋಗ ತರಬೇತಿ ನೀಡಲಾಗಿದೆ. ರಾಜ್ಯದೆಲ್ಲೆಡೆಯ ಸುಮಾರು 1.5 ಲಕ್ಷ ಮಂದಿ ಫೇಸ್ ಬುಕ್ ಮೂಲಕ ನೇರಪ್ರಸಾರ ಆಗಲಿರá-ವ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್​ನ ಫೇಸ್​ಬುಕ್ ಪೇಜ್​ನಲ್ಲಿ (www. facebook.com/rashtrotthanaparishath) ಭಾನುವಾರ ಬೆಳಗ್ಗೆ 6.30ರಿಂದ 7.30ರ ವರೆಗೆ ನೇರಪ್ರಸಾರ ಆಗಲಿದೆ. ಈ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್​ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ಉಪಸ್ಥಿತರಿರಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
