ಬೆಂಗಳೂರು:ನಗರದಲ್ಲಿರುವ ಎಲ್ಲ ಶೌಚಗೃಹಗಳು ಲಾಕ್​ಡೌನ್ ವೇಳೆಯಲ್ಲೂ ಕಾರ್ಯ ನಿರ್ವಹಿಸುವಂತೆ ಬಿಬಿಎಂಪಿ ಸೂಚನೆ ನೀಡಿದೆ. ಆದರೆ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕರೊನಾದಿಂದ ರಕ್ಷಣೆಗೆ ಸುರಕ್ಷತಾ ಸಾಮಗ್ರಿ ಕೊಡದೆ ನಿರ್ಲಕ್ಷ್ಯ ವಹಿಸಿದೆ.
ನಗರದಲ್ಲಿ ಒಟ್ಟು 438 ಸಾರ್ವಜನಿಕ ಶೌಚಗೃಹಗಳಿದ್ದು, ಲಾಕ್​ಡೌನ್ ಆರಂಭವಾದಾಗಿನಿಂದ ಬೆಳಗ್ಗೆ 5ರಿಂದ ರಾತ್ರಿ 10 ಗಂಟೆವರೆಗೂ ತೆರೆದಿರುತ್ತವೆ. ಕೂಲಿಕಾರ್ವಿುಕರು, ನಿರ್ಗತಿಕರು, ನಿರಾಶ್ರಿತರು ಇದರ ಉಪಯೋಗ ಪಡೆಯುತ್ತಿದ್ದಾರೆ. ಆದರೆ, ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಭೀತಿಯಲ್ಲೇ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.
ತ್ರಿಶಂಕು ಸ್ಥಿತಿಯಲ್ಲಿ ಜೀವನ:ಬೆಂಗಳೂರು ಸೇರಿ ರಾಜ್ಯದ ಬಹುತೇಕ ನಗರ- ಪಟ್ಟಣಗಳ ಶೌಚಗೃಹಗಳ ನಿರ್ವಹಣೆಗೆ ಶೇ. 80 ಬಿಹಾರದ ವಲಸಿಗರನ್ನು ನೇಮಕ ಮಾಡಲಾಗಿದೆ. ಇವರು ಗುತ್ತಿಗೆದಾರರಿಗೆ ಇಂತಿಷ್ಟು ಹಣ ಕೊಟ್ಟು, ಬಂದ ಹೆಚ್ಚುವರಿ ಹಣದಲ್ಲಿ ಜೀವನ ಸಾಗಿಸಬೇಕು. ಮಾಸಿಕ 6 ಸಾವಿರ ರೂ. ಆದಾಯ ಮೀರುವುದಿಲ್ಲ. ಲಾಕ್​ಡೌನ್ ಕಾರಣದಿಂದ ಬಸ್ ನಿಲ್ದಾಣಗಳು, ರೈಲು ನಿಲ್ದಾಣ, ವಾಹನ ರ್ಪಾಂಗ್ ಸ್ಥಳಗಳಲ್ಲಿನ ಶೌಚಗೃಹಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಹಲವರು ಆದಾಯವೂ ಇಲ್ಲದೆ, ಊರಿಗೆ ಹೋಗಲೂ ಸಾಧ್ಯವಾಗದೆ ಜೀವನ ದೂಡುತ್ತಿದ್ದಾರೆ.
ಆಹಾರಕ್ಕೂ ಪರದಾಟ:ಲಾಕ್​ಡೌನ್ ಜಾರಿಯಾದಾಗಿನಿಂದ ಪ್ರತಿನಿತ್ಯ 2 ಬಾರಿ ಶೌಚಗೃಹ ಸ್ವಚ್ಛಗೊಳಿಸಿ ದಿನಪೂರ್ತಿ ಬಾಗಿಲು ತೆರೆದು ಕುಳಿತರೂ, ಬಳಕೆ ಮಾಡá-ವವರ ಸಂಖ್ಯೆ 10 ಮೀರುವುದಿಲ್ಲ. ಹೀಗಾಗಿ ದಿನಕ್ಕೆ 50 ರೂ. ದುಡಿಮೆಯೂ ಆಗದೆ ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ವಣವಾಗಿದೆ. ದಾನಿಗಳು ನೀಡುವ ಆಹಾರದ ಪೊಟ್ಟಣವನ್ನೇ ನಂಬಿಕೊಂಡಿದ್ದೇವೆೆ ಎಂದು ಶೌಚಗೃಹ ಸಿಬ್ಬಂದಿ ಲಕ್ಷ್ಮೀಕಾಂತ ಅಳಲು ತೋಡಿಕೊಂಡರು.
ಎಟಿಎಂ ಕಾವಲುಗಾರರಿಗೂ ಆತಂಕ
ಸಿಲಿಕಾನ್ ಸಿಟಿಯಲ್ಲಿ 2 ಸಾವಿರಕ್ಕೂ ಅಧಿಕ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಕಾವಲಿಗೆ ಬಹುತೇಕ 50 ವರ್ಷ ಮೀರಿದವರೇ ಹೆಚ್ಚಾಗಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಲಬುರಗಿಯಲ್ಲಿ ಎಟಿಎಂ ಕಾವಲು ನೌಕರನಿಗೆ ಸೋಂಕು ತಗುಲಿರುವುದರಿಂದ ಇತರೆ ಗಾರ್ಡ್​ಗಳು ಸೋಂಕು ಭೀತಿಯಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ.
| ಸತೀಶ್ ಕೆ.ಬಳ್ಳಾರಿ
ಯಾರನ್ನೂ ಬಿಡಲ್ಲ ಮಟ್ಟಹಾಕ್ತೇವೆ: ಈಶ್ವರಪ್ಪ ಗುಡುಗು |ದುರ್ಬಳಕೆ ರಾಜಕಾರಣದ ಬಗ್ಗೆ ಮುಸ್ಲಿಮರು ಎಚ್ಚೆತ್ತುಕೊಳ್ಳಲಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 1 =
Remember me
