ಕೊಲ್ಹಾಪುರ:ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಜಿಲ್ಲೆಯ ಕಡೆಯ ಕೀಣೆ ಟೋಲ್ ನಾಕಾ ಸಂಪೂರ್ಣ ಧ್ವಂಸವಾಗಿದೆ. ಟೋಲ್​ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಕರೊನಾ ವಾರಿಯರ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಳೆ ಗಾಳಿಯ ರಭಸಕ್ಕೆ ಟೋಲ್ ನಾಕಾ, ಶೀಟ್​ಗಳು ತಗರೆಲೆಯಂ​ತೆ ಹಾರಿವೆ. ಅಲ್ಲಿದ್ದ ಕಂಪ್ಯೂಟರ್ ಪರಿಕರ ಹಾನಿಯಾದವು. ಪರಿಣಾಮ ತಾಂತ್ರಿಕ ಸಮಸ್ಯೆ ಉಂಟಾಗಿ ಆನ್​ಲೈನ್ ಸೇವೆ ಸ್ಥಗಿತಗೊಂಡಿತ್ತು. ಸೇವಾ ಸಿಂಧು ಆನ್​ಲೈನ್ ಪಾಸ್ ಹಿಡಿದು ಬಂದವರು ಕೀಣೆ ಟೋಲ್ ಬಳಿ ಕೆಲ ಸಮಯ ಪರದಾಡುವಂತಾಯಿತು.
ಇದನ್ನೂ ಓದಿಭೂಗತ ಲೋಕದ ಮಾಜಿ ಡಾನ್​​ಗೆ ಮರುಜನ್ಮ ನೀಡಿದ ಬಿಡದಿ
ಮಳೆ ಆರ್ಭಟಕ್ಕೆ ಬೆಚ್ಚಿದ ಟೋಲ್​ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಕರೊನಾ ವಾರಿಯರ್ಸ್ ಟೆಂಟ್ ಬಿಟ್ಟು ಓಡಿ ಹೋಗಿ ಜೀವ ಉಳಿಸಿಕೊಂಡರು. ಕರ್ನಾಟಕ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಕಟ್ಟ ಕಡೆಯ ಟೋಲ್ ಇದಾಗಿದ್ದು, ಪಾಸ್​ ಹಿಡಿದು ರಾಜ್ಯ ಪ್ರವೇಶಿಸಲು ಬಂದ ಜನರು ಕೆಲ ಗಂಟೆಗಳ ಕಾಲ ಅಲ್ಲೇ ಲಾಕ್​ ಆಗಿದ್ದರು. ಗಾಳಿ ಸಹಿತ ಮಳೆ ಸೃಷ್ಟಿಸಿದ ಅವಾಂತರವನ್ನು ಟೋಲ್​ ಬಳಿ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದ ವಿಡಿಯೋ ವೈರಲ್ ಆಗಿದೆ.
ಇದನ್ನೂ ನೋಡಿ
https://www.facebook.com/VVani4U/videos/297696421232726/


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − two =
Remember me
