ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟಾ್ಯಗ್ ಸ್ಟಿಕರ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ನೀಡಿದ್ದ ಗಡುವು ಬುಧವಾರ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಫಾಸ್ಟಾ್ಯಗ್ ಇಲ್ಲದ ವಾಹನಗಳು ದುಪ್ಪಟ್ಟು ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಲಿದೆ.
ಟೋಲ್ ಪ್ಲಾಜಾಗಳಲ್ಲಿನ ಸಂಚಾರ ದಟ್ಟಣೆ ನಿಯಂತ್ರಣ ಮತ್ತು ಇಂಧನ ಉಳಿತಾಯ ಫಾಸ್ಟಾ್ಯಗ್​ನ ಉದ್ದೇಶವಾಗಿದೆ. ಫಾಸ್ಟಾ್ಯಗ್ ಕಡ್ಡಾಯಗೊಳಿಸಿದ ಬಳಿಕ 3 ಬಾರಿ ಗಡುವು ವಿಸ್ತರಿಸಿದ್ದ ಕೇಂದ್ರ ಸರ್ಕಾರ ಅಂತಿಮವಾಗಿ ಜ. 15ರವರೆಗೆ ಕಾಲಾವಕಾಶ ನೀಡಿತ್ತು. ಆದರೂ, ಶೇ. 66 ವಾಹನಗಳಷ್ಟೇ ಫಾಸ್ಟಾ್ಯಗ್ ಸ್ಟಿಕರ್ ಅಂಟಿಸಿಕೊಂಡಿವೆ. ಉಳಿದ ಶೇ.34 ವಾಹನಗಳ ಪೈಕಿ ಶೇ. 15 ತುರ್ತು ಪರಿಸ್ಥಿತಿ ನಿಭಾಯಿಸುವ ವಾಹನಗಳು, ವಿವಿಐಪಿ ವಾಹನಗಳಿಗೆ ಫಾಸ್ಟಾ್ಯಗ್​ನಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ಶೇ. 18 ವಾಹನಗಳು ಇನ್ನೂ ಫಾಸ್ಟಾ್ಯಗ್ ವ್ಯವಸ್ಥೆಗೊಳಪಡಬೇಕಿದೆ.
ಒಂದು ಪಥ ಮೀಸಲು: ಶೇ. 100 ವಾಹನಗಳು ಫಾಸ್ಟಾ್ಯಗ್ ವ್ಯವಸ್ಥೆಗೊಳಪಡುವವರೆಗೆ ಟೋಲ್ ಪ್ಲಾಜಾಗಳಲ್ಲಿ ಒಂದು ಪಥವನ್ನು ನಗದು ಶುಲ್ಕ ಪಾವತಿಸುವ ವಾಹನಗಳಿಗೆ ಮೀಸಲಿರಿಸಲಾಗುತ್ತದೆ. ಉಳಿದ ಪಥಗಳಲ್ಲಿ ಫಾಸ್ಟಾ್ಯಗ್ ಅಳವಡಿಸಿಕೊಂಡ ವಾಹನಗಳು ಸಂಚರಿಸಬಹುದಾಗಿದೆ. ಒಂದು ವೇಳೆ ಫಾಸ್ಟಾ್ಯಗ್ ಸ್ಟಿಕರ್ ಅಳವಡಿಸಿಕೊಳ್ಳದಿದ್ದರೂ ಮೀಸಲು ಪಥದಲ್ಲಿ ಸಂಚರಿಸಿದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಉದಾಹರಣೆಗೆ ನೆಲಮಂಗಲ ಟೋಲ್ ಪ್ಲಾಜಾದಲ್ಲಿ ಫಾಸ್ಟಾ್ಯಗ್ ಸ್ಟಿಕರ್ ಇರದ ಕಾರು ಫಾಸ್ಟಾ್ಯಗ್ ಪಥದಲ್ಲಿ ಸಂಚರಿಸಿದರೆ ಮಾಮೂಲಿ ಶುಲ್ಕ 20 ರೂ. ಬದಲಿಗೆ ದುಪ್ಪಟ್ಟು ಅಂದರೆ 40 ರೂ. ಪಾವತಿಸಬೇಕು. ಇದು ಎಲ್ಲ ಟೋಲ್​ಪ್ಲಾಜಾಗಳಿಗೂ ಅನ್ವಯವಾಗಲಿದೆ.
ನೂಕುನುಗ್ಗಲು: ಫಾಸ್ಟಾ್ಯಗ್ ಸ್ಟಿಕ್ಕರ್ ಅಳವಡಿಕೆಗೆ ಬುಧವಾರ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಟೋಲ್​ಪ್ಲಾಜಾ ಮತ್ತು ಬ್ಯಾಂಕ್​ಗಳಲ್ಲಿ ಫಾಸ್ಟಾ್ಯಗ್ ಸ್ಟಿಕ್ಕರ್ ಖರೀದಿಸಲು ವಾಹನ ಸವಾರರು ಮುಗಿಬಿದ್ದರು.
ಆನ್​ಲೈನ್ ಸಮಸ್ಯೆ
ಟೋಲ್​ಪ್ಲಾಜಾಗಳಲ್ಲಿ ಫಾಸ್ಟಾ್ಯಗ್ ಖರೀದಿ ಕೌಂಟರ್ ಹೆಚ್ಚಿಸಿರುವ ಪರಿಣಾಮ ಬ್ಯಾಂಕ್​ಗಳಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ಆರಂಭದಲ್ಲಿ ಸರತಿ ಸಾಲಿನಲ್ಲಿ ನೂಕುನುಗ್ಗಲು ನಡುವೆ ಫಾಸ್ಟಾ್ಯಗ್ ಖರೀದಿಸಲಾಗುತ್ತಿತ್ತು. ರಾಜ್ಯದಲ್ಲಿ ಫಾಸ್ಟಾ್ಯಗ್ ಕೊರತೆ ಉಂಟಾಗಿಲ್ಲ. ಆದರೆ, ಆನ್​ಲೈನ್​ನಲ್ಲಿ ಬುಕ್ ಮಾಡಿರುವವರುಸಮಸ್ಯೆ ಅನುಭವಿಸುವಂತಾಗಿದೆ. 15 ದಿನದ ಹಿಂದೆ ಫಾಸ್ಟಾ್ಯಗ್ ಖರೀದಿಸಿದ್ದರೂ ಈವರೆಗೆ ವಾಹನ ಮಾಲೀಕರಿಗೆ ತಲುಪಿಲ್ಲ.
ಟೋಲ್ ಸಂಗ್ರಹ ಹೆಚ್ಚಳ
ಫಾಸ್ಟಾ್ಯಗ್ ಜಾರಿ ಬಳಿಕ ಆಟೋಮ್ಯಾಟಿಕ್ ಟೋಲ್ ಸಂಗ್ರಹ ಹೆಚ್ಚಳವಾಗಿದೆ. ಅಕ್ಟೋಬರ್​ನಲ್ಲಿ ಫಾಸ್ಟಾ್ಯಗ್ ಮೂಲಕ 702.86 ಕೋಟಿ ರೂ. ಮತ್ತು ನವೆಂಬರ್​ನಲ್ಲಿ 773.95 ಕೋಟಿ ರೂ. ಸಂಗ್ರಹವಾಗಿತ್ತು. ಅದೇ ಡಿಸೆಂಬರ್​ನಲ್ಲಿ 1,256.84 ಕೋಟಿ ರೂ. ಟೋಲ್​ಶುಲ್ಕ ಸಂಗ್ರಹವಾಗಿದೆ. ಜ. 12ರಂದು ಒಂದೇ ದಿನ 80 ಕೋಟಿ ರೂ.ಗೂ ಹೆಚ್ಚಿನ ಟೋಲ್​ಶುಲ್ಕ ಫಾಸ್ಟಾ್ಯಗ್ ಮೂಲಕ ಪಾವತಿಯಾಗಿದೆ.
3 ಬಾರಿ ಗಡುವು ವಿಸ್ತರಣೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಹಿಂದೆ ಡಿ. 1ರಿಂದ ಫಾಸ್ಟಾ್ಯಗ್ ವ್ಯವಸ್ಥೆ ಜಾರಿಗೊಳಿಸುವುದಾಗಿ ಹೇಳಿತ್ತು. ಆದರೆ, ಫಾಸ್ಟಾ್ಯಗ್ ಅಳವಡಿಸಿಕೊಂಡ ವಾಹನಗಳ ಸಂಖ್ಯೆ ಕಡಿಮೆಯಿದ್ದ ಕಾರಣ ಗಡುವನ್ನು ಡಿ. 31ರವರೆಗೆ ವಿಸ್ತರಿಸಲಾಗಿತ್ತು. ಆನಂತರವೂ ಪೂರ್ಣಪ್ರಮಾಣದಲ್ಲಿ ಫಾಸ್ಟಾ್ಯಗ್ ಅಳವಡಿಕೆ ಆಗಿರಲಿಲ್ಲ. ಹೀಗಾಗಿ 2020ರ ಜ. 15ರವರೆಗೆ ಟೋಲ್​ಪ್ಲಾಜಾಗಳಲ್ಲಿನ ಸಂಚಾರ ಪಥಗಳಲ್ಲಿ ಶೇ. 25ರಷ್ಟನ್ನು ನಗದು ಶುಲ್ಕ ಪಾವತಿಗೆ ಮೀಸಲಿರಿಸಿ ಉಳಿದ ಶೇ. 75 ಪಥಗಳಲ್ಲಿ ಫಾಸ್ಟಾ್ಯಗ್ ವಾಹನ ಸಂಚಾರಕ್ಕೆ ನಿಗದಿ ಮಾಡಲಾಗಿತ್ತು.
ಸ್ಕ್ಯಾನ್ ಆಗದಿದ್ರೆ?
ಫಾಸ್ಟಾ್ಯಗ್ ಪ್ರಕ್ರಿಯೆಗಳಲ್ಲಿನ ತಾಂತ್ರಿಕ ದೋಷಗಳಿಗೆ ಟೋಲ್​ಪ್ಲಾಜಾಗಳೇ ಹೊಣೆ ಫಾಸ್ಟಾ್ಯಗ್ ಸ್ಟಿಕರ್​ಗಳ ಬಾರ್​ಕೋಡ್, ಕ್ಯೂ ಆರ್ ಕೋಡ್ ಸ್ಕಾ್ಯನ್ ಸಮಸ್ಯೆ ಎದುರಾದಲ್ಲಿ ವಾಹನಗಳಿಗೆ ವಿನಾಯಿತಿ ಫಾಸ್ಟಾ್ಯಗ್ ಇದ್ದೂ ಖಾತೆಯಲ್ಲಿ ಹಣವಿಲ್ಲದಿದ್ದರೆ ನಗದು ಮೂಲಕ ಪಾವತಿಗೆ ಅವಕಾಶ
ಎಲ್ಲ ಟೋಲ್​ಪ್ಲಾಜಾಗಳಲ್ಲೂ ನಗದು ಮೂಲಕ ಟೋಲ್ ಪಾವತಿಗೆ ಒಂದು ಪಥ ನಿಗದಿ ಮಾಡಲಾಗುತ್ತದೆ. ಫಾಸ್ಟಾ್ಯಗ್ ಅಳವಡಿಸಿಕೊಳ್ಳದ ವಾಹನಗಳು ಆ ಪಥದಲ್ಲಿ ಮಾತ್ರ ಸಂಚರಿಸಬೇಕು. ಒಂದು ವೇಳೆ ಫಾಸ್ಟಾ್ಯಗ್ ಪಥದಲ್ಲಿ ಸಂಚರಿಸಿದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ.
| ಲಿಂಗೇಗೌಡ ಎನ್​ಎಚ್​ಎಐ ಪ್ರಾದೇಶಿಕ ಕಚೇರಿ ಡಿಜಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
