–ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣರಾಮನಗರ:ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಮತ್ತೆ ಏರಿಕೆಗೊಂಡಿದೆ. ಶನಿವಾರದಿಂದ ಪರಿಷ್ಕೃತ ದರ ಅನ್ವಯವಾಗಲಿದ್ದು ದಶಪಥ ಹೆದ್ದಾರಿ ಸಂಚಾರ ಮತ್ತಷ್ಟು ದುಬಾರಿ ಆಗಲಿದೆ. ಈ ಕುರಿತಾಗಿ ರಾಮನಗರದಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, 17 ದಿನದ ನಂತರ ಮತ್ತೆ ಟೋಲ್ ದರ ಹೆಚ್ಚಳವಾಗಿದೆ. ಕೇಂದ್ರ – ರಾಜ್ಯ ಡಬಲ್ ಇಂಜಿನ್‌ ಸರ್ಕಾರದಲ್ಲಿ ಬಡವರಿಗೆ ಈ ರಸ್ತೆ ಇಲ್ಲ. ಅವರು ಉದ್ದಟತನದಿಂದ ಹೆಚ್ಚಳ ಮಾಡಿದ್ದಾರೆ. ಮೊದಲು ಸರ್ವಿಸ್ ರಸ್ತೆಗಳನ್ನ ಸರಿಮಾಡಲಿ. ಹಿಂದೆಯೂ ಹೋರಾಟ ಮಾಡಿದ್ದೇವೆ, ಮುಂದೆಯೂ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಎಸ್​ಎಸ್​ಎಲ್​ಸಿ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆ!ಹಾಸನ ಟಿಕೆಟ್ ವಿಚಾರವಾಗಿ ಗೊಂದಲ ವಿಚಾರವಾಗಿ ಮಾತನಾಡಿ, ಇವತ್ತು ಹಾಸನದ ಶಾಸಕರು ತಿಂಡಿಗೆ ಬಂದಿದ್ದರು. ಕುಮಾರಣ್ಣ ಅವರನ್ನ ಕರೆಸಿದ್ದರು, ಅಲ್ಲಿ ಏನಾಗಿದೆ ಗೊತ್ತಿಲ್ಲ. ನಾನು ಬೆಳಗ್ಗೆಯೇ ರಾಮನಗರಕ್ಕೆ ಬಂದಿದ್ದೇನೆ. ಮುಂದೆ ಅವರೇ ಈ ವಿಚಾರವಾಗಿ ತಿಳಿಸುತ್ತಾರೆಂದು ಹೇಳಿದ್ದಾರೆ.ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣವಾಗಿದೆ. ನಾವು ಯಾರ ಜೊತೆಯಲ್ಲಿಯೂ ಹೊಂದಾಣಿಕೆ ಆಗಿಲ್ಲ. ನಾವು ಸ್ಪಷ್ಟ ಬಹುಮತದಿಂದ ಸರ್ಕಾರ ಮಾಡುತ್ತೇವೆಂದು ತಿಳಿಸಿದ್ದಾರೆ.
ನಟ ಅಗೆದು ಉಗುಳಿದ ಚೂಯಿಂಗ್ ಗಮ್​ಗೆ ದುಬಾರಿ ಬೆಲೆ; 32 ಲಕ್ಷ ರೂ. ನಿಂದ ಹರಾಜು ಪ್ರಾರಂಭ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 14 =
Remember me
