ತುಮಕೂರು:ಕ್ಯಾತಸಂದ್ರ ಜಾಸ್ ಟೋಲ್​​ನಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್​ಗೆ ಟೋಲ್​ ಸಿಬ್ಬಂದಿ ಧಮ್ಕಿ ಹಾಕಿದ್ದಾರೆ. ಕಾರಿನಲ್ಲಿ ಕುಳಿತಿದ್ದ ಜ್ಯೋತಿ ಗಣೇಶ್​ ಅವರು, ‘ನಾನು ಶಾಸಕ’ ಅಂತ ಮಾಸ್ಕ್ ತೆಗೆದು ತೋರಿಸಿದ್ದಾರೆ. ಆದರೂ ಟೋಲ್​ ಸಿಬ್ಬಂದಿ, ‘ನೀವು ಶಾಸಕರಾದ್ರೆ ನಮಗೇನ್ರಿ? ಸುಮ್ಮನೆ ಹಣ ಕಟ್ಟಿ ಮುಂದೆ ಹೋಗಿ’ ಎಂದಿದ್ದಾರೆ.
ಫೆ.23ರ ಸಂಜೆ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ತುಮಕೂರಿಗೆ ಇನ್ನೋವಾ ಕಾರಿನಲ್ಲಿ ಶಾಸಕರು ವಾಪಸ್ ಬರುತ್ತಿದ್ದರು. ಟೋಲ್​ ಬಳಿ ವಿಐಪಿ ಲೈನ್ ಗೇಟ್ ಮುಚ್ಚಿದ್ರಿಂದ ಫಾಸ್ಟ್ಟ್ಯಾಗ್​ ಲೈನ್​ನಲ್ಲಿ ಶಾಸಕರ ಕಾರು ಬಂದಿತ್ತು. ಕಾರಿನ ಫ್ರೆಂಟ್ ಗಾಜಿನಲ್ಲಿ ಶಾಸಕರ ಪಾಸ್ ಇದ್ದರೂ ಬಿಡದೆ ಅವಾಜ್ ಹಾಕಿ ಟೋಲ್ ಸಿಬ್ಬಂದಿ ತಡೆದು ನಿಲ್ಲಿಸಿದ್ದಾರೆ.ಇದನ್ನೂ ಓದಿರಿರೌಡಿ ಮಗ ಮತ್ತೊಬ್ಬ ರೌಡಿನೇ ಆಗ್ಬೇಕಾ? ಪೊಲೀಸ್​ ಕಚೇರಿಯಲ್ಲೇ ಬೆಂಕಿ ಹಚ್ಚಿಕೊಂಡು ಸಾಯ್ತೀವಿ…
ಟೋಲ್ ಸಿಬ್ಬಂದಿ ವರ್ತನೆಗೆ ಬೇಸರಗೊಂಡು ಟೌನ್ ಡಿವೈಎಸ್​ಪಿಗೆ ಶಾಸಕರು‌ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಟೋಲ್ ಸಿಬ್ಬಂದಿಗೆ ಬೆವರಿಳಿಸಿದ್ದಾರೆ. ಬಳಿಕ ಠಾಣೆಗೆ ಬಂದಟೋಲ್ ಮ್ಯಾನೇಜರ್ ಮಲ್ಲಿಕಾರ್ಜುನ್ ಶಾಸಕರ ಬಳಿ ಕ್ಷಮೆ ಯಾಚಿಸಿದ್ದಾರೆ.ಇದೊಂದು ಸಣ್ಣ ವಿಚಾರ ಟೋಲ್ ಎಲ್ಲರೂ ಕಟ್ಟಲೇ ಬೇಕು. ಆವತ್ತು ವಿಐಪಿ ಲೈನ್ ಮುಚ್ಚಿದ್ರು, ಹಾಗಾಗಿ ರೆಗ್ಯುಲರ್ ಲೈನ್​ನಲ್ಲಿ ಬಂದೆ.
ಪಾಸ್ ಗೊತ್ತಾಗಿಲ್ಲ, ಅವನು ಹೊಸಬ ಇರ್ಬೇಕು ಹಾಗಾಗಿ ಘಟನೆ ನಡೆದಿದೆ. ಸರ್ಕಾರದಿಂದ ಮಾನ್ಯತೆ ಇರುವವರನ್ನ ಬಿಡಬೇಕು. ಕೆಲವರು ಪಾಸ್​ನ ನಕಲಿ ಮಾಡಿಕೊಂಡು ಹೋಗುವಂತಹ ಕಿರಿಕಿರಿ ಆಗಿರುತ್ತೆ… ಎಂದು ಶಾಸಕ ಜ್ಯೋತಿ ಗಣೇಶ್ ಹೇಳಿದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಅವನು ಬಂದಾಗ ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ… ಎಚ್​ಡಿಕೆ ವಿರುದ್ಧ ನಾಲಗೆ ಹರಿಬಿಟ್ಟ ಯೋಗೇಶ್ವರ್​

ಖಾಸಗಿ ಶಾಲೆ ಮಾಲೀಕ ಆತ್ಮಹತ್ಯೆ! ಸಾವಿಗೂ ಮುನ್ನ ಬರೆದ ಡೆತ್​ನೋಟ್​ನಲ್ಲಿದೆ ನೋವು

Video| ದೇವರ ಹೆಸರಲ್ಲಿ ಬೆತ್ತಲೆ ಸೇವೆ! ನಡುರಸ್ತೆಯಲ್ಲಿ ಬೆತ್ತಲೆ ಮಹಿಳೆಯ ಮೆರವಣಿಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
