ಗದಗ:ಇಡೀ ಗದಗ ಜಿಲ್ಲೆಯಲ್ಲಿ ಇವರೊಬ್ಬರೇ ಟೊಮ್ಯಾಟೋ ಬೆಳೆಯನ್ನು ಬೆಳೆದಿದ್ದು, ಅನೇಕ ಕಡೆಗಳಲ್ಲಿ ರೈತರು ಬೆಲೆ ಇಲ್ಲ ಎಂದು ಬೆಳೆಯನ್ನೇ ಬೆಳೆದಿಲ್ಲ. ಇನ್ನೂ ಕೆಲಕಡೆಗಳಲ್ಲಿ ಟೊಮ್ಯಾಟೋ ಬೆಳೆ ನಾಶವೂ ಆಗಿದೆ. ಹೀಗೆ ನಾನಾ ಕಾರಣದಿಂದಾಗಿ ಇದೀಗ ಇಡೀ ಗದಗ ಜಿಲ್ಲೆಯಲ್ಲಿ ಇವರೊಬ್ಬರೇ ಟೊಮ್ಯಾಟೋ ಫಸಲನ್ನು ತೆಗೆದಿದ್ದಾರೆ.

ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ, ಬಸವನಗೌಡ ತಿಮ್ಮನಗೌಡರು ಈ ಬಾರಿ ಬಂಪರ್ ಲಾಭ ಹೊಡೆದಿದ್ದಾರೆ. ಇವರು, ಹನಿ ನೀರಾವರಿ ಮೂಲಕ ಟೊಮ್ಯಾಟೋ ಬೆಳೆದಿದ್ದು, ಸಮೃದ್ಧವಾಗಿ ಬೆಳೆದ ಟೊಮ್ಯಾಟೋ ಹಣ್ಣುಗಳಿಂದಾಗಿ ಭರ್ಜರಿ ಲಾಭ ಬಂದಿದೆ. ಈ ಮೂಲಕ ರೈತರೊಬ್ಬರ ಬಾಳು ಬಂಗಾರವಾಗಿದೆ ಎಂದೇ ಹೇಳಬಹುದು.

ಬಸವನಗೌಡ ತಿಮ್ಮೇಗೌಡರು, ಅವರ ಮಕ್ಕಳು ಹಾಗೂ ಅವರ ಕುಟುಂಬಸ್ಥರು ಎಲ್ಲರೂ ಸೇರಿಕೊಂಡು ಟೊಮ್ಯಾಟೋ ನಿರ್ವಹಣೆ ಮಾಡಿದ್ದಾರೆ. ಹಗಲು ರಾತ್ರಿ ಎನ್ನದೆ ಟೊಮ್ಯಾಟೋ ಬೆಳೆಯನ್ನು ಈ ಮನೆಯ ಮಕ್ಕಳು ಕಾದಿದ್ದಾರೆ. ಸದ್ಯ, ಗದಗ ಮಾರುಕಟ್ಟೆಯಲ್ಲಿ ಟೊಮ್ಯಾಟೋಹಣ್ಣುಗಳಿಗೆ ಬಾರಿ ಬೇಡಿಕೆ ಇದ್ದು, ಬಹುತೇಕ ಎಲ್ಲಾ ಟೊಮ್ಯಾಟೋಗಳನ್ನು ಹೊರಗಿನಿಂದ ಆಮದು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇವರು ತಾವೇ ಖುದ್ದಾಗಿ ಮಾರುಕಟ್ಟೆಗೆ ಹೋಗಿ ಟೊಮ್ಯಾಟೋ ಮಾರಾಟ ಮಾಡುತ್ತಿದ್ದಾರೆ.

ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, “50 ವರ್ಷದ ಕೃಷಿ ಕಾಯಕದಲ್ಲಿ ಇಷ್ಟೊಂದು ಬೆಲೆ ಕಂಡಿಲ್ಲಾ. ಒಂದುವರೆ ಎಕರೆ ಜಮೀನಿನಲ್ಲಿ ಟೊಮ್ಯಾಟೋ ಬೆಳೆದು ಬಂಪರ್ ಬೆಲೆ ಲಭಿಸಿದೆ. ಒಂದುವರೆ ಎಕರೆ ಜಮೀನಿನಲ್ಲಿ ಐದು ಲಕ್ಷ ಲಾಭ ಬಂದಿದೆ. ನಮಗೆ ಇನ್ನೂ 15 ಲಕ್ಷ ಬರುವ ನಿರೀಕ್ಷೆ ಇದೆ. ಒಂದುವರೆ ಎಕರೆ ಟೊಮ್ಯಾಟೋ ಬೆಳೆಸಲು ಕೇವಲ 70 ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ” ಎಂದಿದ್ದಾರೆ. ಇವರ ಮನೆಯಲ್ಲಿ ಪಿಯುಸಿ, ಹಾಗೂ ಐಐಟಿ ಮುಗಿಸಿದ ಮಕ್ಕಳಿದ್ದು, ಇದೀಗ ಟೊಮ್ಯಾಟೋ ಕೃಷಿ, ಅವರಿಗೆ ದಾರಿ ದೀಪವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 5 =
Remember me
