ಚಾಮರಾಜನಗರ:ದುಬಾರಿ ಬೆಲೆಯನ್ನು ಕಂಡಿರುವ ಟೊಮ್ಯಾಟೋ ಇಲ್ಲಿಬ್ಬರು ಕೃಷಿಕ ಸಹೋದರರನ್ನು ಕೋಟ್ಯಧಿಪತಿ ಆಗಿಸಲಿರುವುದಷ್ಟೇ ಅಲ್ಲ, ಮದುವೆಯಾಗುವ ಕನಸನ್ನೂ ಚಿಗುರಿಸಿದೆ. ಭರ್ಜರಿ ಬೆಲೆಯ ಟೊಮ್ಯಾಟೋ ಫಸಲಿನಿಂದಾಗಿ ಈ ಸಹೋದರರ ಪೈಕಿ ಒಬ್ಬರ ಮದುವೆಯ ಕನಸು ಚಿಗುರಿದ್ದು, ಹುಡುಗಿಯನ್ನು ಹುಡುಕಲು ಮುಂದಾಗಿದ್ದಾರೆ.
ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರದ ರಾಜೇಶ್ ಮತ್ತು ನಾಗೇಶ್ ಸ್ವಂತ 2 ಎಕರೆ ಜತೆಗೆ, 10 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದುಕೊಂಡು ಸಂಪೂರ್ಣವಾಗಿ ಟೊಮ್ಯಾಟೊ ಬೆಳೆದು ಉತ್ತಮ ಆದಾಯ ಗಳಿಸಿದ್ದಾರೆ.
ಹನ್ನೆರಡು ಎಕರೆ ಜಮೀನಿನಲ್ಲಿ ಸುಮಾರು 80 ಸಾವಿರ ಪೈರನ್ನು ನಾಟಿ ಮಾಡಿ ಈಗಾಗಲೇ 2-3 ಕೊಯ್ಲು ಮಾಡಿ 50-60 ಟನ್ ಟೊಮ್ಯಾಟೊದಿಂದ ಇವರು 40 ಲಕ್ಷ ರೂ. ಸಂಪಾದಿಸಿದ್ದಾರೆ. ಇನ್ನೂ 100-150 ಟನ್ ಟೊಮ್ಯಾಟೊ ಕೊಯ್ಲು ಸಿಗುವ ಸಾಧ್ಯತೆ ಇದ್ದು, ಒಟ್ಟಾರೆ ಸುಮಾರು 2 ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದ್ದಾರೆ.
ಇದನ್ನೂ ಓದಿ:ಟೊಮ್ಯಾಟೊ ಬೆಳೆದು ಕೋಟ್ಯಧಿಪತಿಗಳಾದ ಅಣ್ತಮ್ಮ: ಲಕ್ಷ್ಮೀಪುರ ಗ್ರಾಮದ ಸಹೋದರರ ಕಮಾಲ್; 12 ಎಕರೆ ಜಮೀನಿನಲ್ಲಿ ಬಂಪರ್ ಬೆಳೆ
ಅದರಲ್ಲೂ ರಾಜೇಶ್​​ಗೆ ಮದುವೆಯಾಗುವ ಕನಸು ಟೊಮ್ಯಾಟೋದಿಂದಾಗಿ ಚಿಗುರಿದೆ. ‘ಹುಡುಗಿ ಕಡೆಯವರು ಸರ್ಕಾರಿ ಹಾಗೂ ದೊಡ್ಡ ದೊಡ್ಡ ಕಂಪನಿಗಳ ಉದ್ಯೋಗಿಗಳನ್ನೇ ನೋಡುತ್ತಿರುವುದರಿಂದ ನಾನು ಈ ಹಿಂದೆ ತಿರಸ್ಕರಿಸಲ್ಪಟ್ಟಿದ್ದೆ. ಆದರೆ ಈಗ ಒಳ್ಳೆಯ ಆದಾಯ ಬಂದಿರುವುದರಿಂದ ಮತ್ತೆ ಹುಡುಗಿ ಹುಡುಕಲು ಮುಂದಾಗಿದ್ದೇನೆ. ಒಳ್ಳೇ ಕಾಲ ಬಂದರೆ ರೈತರು ಉಳಿದ ಉದ್ಯೋಗಿಗಳಿಗಿಂತ ಹೆಚ್ಚಿನ ಸಂಪಾದನೆ ಮಾಡಬಲ್ಲರು’ ಎಂದಿರುವ ರಾಜೇಶ್, ಹೊಸ ಎಸ್​ಯುವಿ ಖರೀದಿಸಿದ್ದಾಗಿಯೂ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪತ್ನಿಯ ಸ್ಮರಣಾರ್ಥ ದೇವಸ್ಥಾನ ನಿರ್ಮಿಸಿ ಆಕೆಯ ಮೂರ್ತಿಗೆ ನಿತ್ಯವೂ ಪೂಜೆ ಸಲ್ಲಿಸುತ್ತಿರುವ ಪತಿ!

ಆ ಒಂದು ತಿಂಗಳ ಸಮಯದಲ್ಲಿ ಈ ಊರಲ್ಲಿ ಕಾಗೆಗಳೇ ಕಾಣಿಸುವುದಿಲ್ಲ!; ಕಾರಣವಾದರೂ ಏನು?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:10 + three =
Remember me
