ನವದೆಹಲಿ:ಮಳೆಯ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಟೊಮ್ಯಾಟೊ ಬೆಲೆ ಬಹುತೇಕ ನಗರಗಳಲ್ಲಿ 60 ರಿಂದ 70 ರೂಪಾಯಿಗೆ ದಿಢೀರನೆ ಏರಿಕೆಯಾಗಿದೆ. ಕೆ.ಜಿಯೊಂದಕ್ಕೆ 10-15 ರೂಪಾಯಿಗೆ ಸಿಗುತ್ತಿದ್ದ ಟೊಮ್ಯಾಟೊ ಬೆಲೆ ಛಂಗನೆ ಜಿಗಿದಿದೆ.
ಟೊಮ್ಯಾಟೊ ಬೆಳೆ ಪ್ರಮಾಣ ಕಡಿಮೆಯಾಗಿರುವುದು ಹಾಗೂ ಇದು ಮಾರುಕಟ್ಟೆಗೆ ಬರುವ ಮೊದಲೇ ಹಾಳಾಗುತ್ತಿರುವುದು ಇದಕ್ಕೆ ಕಾರಣ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಇದನ್ನೂ ಓದಿ:ಕಣ್ಣಿಗೊಂದು ಸವಾಲ್: ಜಿಂಕೆ ಬೇಟೆಗೆ ಹೊಂಚು ಹಾಕಿರೋ ಪರ್ವತ ಸಿಂಹ ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!​
ಗುರುಗ್ರಾಮ, ಗ್ಯಾಂಗ್ ಟಾಕ್, ಸಿಲಿಗುರಿ, ರಾಯ್ ಪುರ್ ಗಳಲ್ಲಿ 70 ರೂಪಾಯಿಗಳಿಗೆ ಏರಿಕೆಯಾಗಿದ್ದು, ಗೋರಖ್‌ಪುರ, ಕೋಟಾ ಮತ್ತು ದಿಮಪುರ್‌ಗಳಲ್ಲಿ ಕೆ.ಜಿಗೆ 80ರೂಪಾಯಿ ಆಗಿದೆ. ಇದಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊಂಚ ಬೆಲೆ ಕಡಿಮೆ ಇದ್ದು, 46-50 ರೂಪಾಯಿ ಏರಿಕೆಯಾಗಿದೆ. ಹೈದರಾಬಾದ್‌ನಲ್ಲಿ ಕೆ.ಜಿಗೆ 37 ರೂಪಾಯಿಯಿದ್ದರೆ ಚೆನ್ನೈಯಲ್ಲಿ 40 ರೂಪಾಯಿ ಹೆಚ್ಚಾಗಿದೆ.
ಸಾಮಾನ್ಯವಾಗಿ ಜುಲೈಯಿಂದ ಸೆಪ್ಟೆಂಬರ್‌ವರೆಗೆ ಇದರ ಬೆಲೆ ತೀವ್ರ ಮಳೆಯಿರುವಾಗ ಹೆಚ್ಚಾಗುತ್ತದೆ. ಈಗಲೂ ಅನೇಕ ಕಡೆಗಳಲ್ಲಿ ಈ ಬೆಳೆಯ ಪ್ರಮಾಣ ಕಡಿಮೆಯಾಗಿರುವ ಜತೆಗೆ, ಕೊಳೆತು ಹೋಗುವುದೂ ಹೆಚ್ಚಾಗುತ್ತಿದೆ. ಆದ್ದರಿಂದ ಅನಿವಾರ್ಯವಾಗಿ ಈ ಬಾರಿಯೂ ಬೆಲೆ ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ ಸಚಿವರು. ಮಾರುಕಟ್ಟೆಗೆ ಪೂರೈಕೆ ಹೆಚ್ಚಾದಾಗ ಟೊಮೆಟೊ ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂಬ ಮಾಹಿತಿ ನೀಡಿದ್ದಾರೆ.
ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:15 + three =
Remember me
