ಬೆಂಗಳೂರು:ಕಳೆದ ಕೆಲ ದಿನಗಳಿಂದ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಯಾಗುತ್ತಲೇ ಇವೆ. ಇದೀಗ ಟೊಮ್ಯಾಟೊ ಬೆಲೆಯಲ್ಲಿ ಏರಿಕೆ ಕಂಡಿದೆ. ಕಳೆದ ವಾರ 20-30 ರೂಪಾಯಿ ಇದ್ದ ಟೊಮ್ಯಾಟೊ ದರ, ಈಗ ಏಕಾಏಕಿ 130(Per KG) ರೂಪಾಯಿ ಆಗಿದೆ. ಕೆ.ಆರ್​.ಮಾರ್ಕೆಟ್​ನ ಕೆಲ‌ ಅಂಗಡಿಗಳಲ್ಲಿ ಕೆ.ಜಿಗೆ 120 ರೂಪಾಯಿಯಂತೆ ಟೊಮ್ಯಾಟೊ ಮಾರಾಟವಾಗುತ್ತಿದೆ.
ಬೆಂಗಳೂರಿನ ಬಹುತೇಕ ಕಡೆ ನಿನ್ನೆ ಟೊಮ್ಯಾಟೊ ಬೆಲೆ 80 ರೂ. ಇತ್ತು. ಇದೀಗ ಏಕಾಏಕಿ 20-30 ರೂ. ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗುತ್ತಿದೆ. ಹೀಗಾಗಿ ಬೆಲೆ ಏರಿಕೆ ಹಿನ್ನೆಲೆ ಜನರು ಟೊಮ್ಯಾಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ:ಕಲಬುರಗಿ | ಪ್ರಯಾಣಿಕರನ್ನು ಬಿಟ್ಟು ಹೋದ ರೈಲು; ಕ್ಷಮೆ ಕೇಳಿದ ಸ್ಟೇಷನ್ ಮ್ಯಾನೇಜರ್
ನಾಟಿ‌ ಟೊಮ್ಯಾಟೊ 110 ರೂ. ಹಾಗೂ ಸೀಡ್ ಲೆಸ್ ಟೊಮ್ಯಾಟೊ 120 ರೂ.ಗೆ ಮಾರಾಟವಾಗುತ್ತಿದೆ. ನಿನ್ನೆ ನಾಟಿ ಟೊಮ್ಯಾಟೊ 60 ರೂ. ಇತ್ತು‌. ಎರಡೇ ದಿನದಲ್ಲಿ ನಾಟಿ‌ ಟೊಮ್ಯಾಟೊ ದರ 70 ರೂಪಾಯಿ ಏರಿಕೆಯಾಗಿದೆ. ಸೀಡ್ ಲೆಸ್ ಟೊಮ್ಯಾಟೊ ದರ ಎರಡೇ ದಿನದಲ್ಲಿ 80 ರೂಪಾಯಿ ಹೆಚ್ಚಳವಾಗಿದೆ.
ತಿಂಗಳ ಹಿಂದೆ ಕೆ.ಜಿಗೆ ಹತ್ತು ರೂಪಾಯಿ ಇದ್ದಾಗ 70 ಟನ್ ಟೊಮ್ಯಾಟೊ ಇಳುವರಿ ಬಂದಿತ್ತು. ಈಗ ಎಕರೆಗೆ ಈಗ ಕೇವಲ 36 ಟನ್ ಇಳುವರಿ ಬರುತ್ತಿದೆ. ಹೆಚ್ಚಿನ ಬಿಸಿಲು ಇರುವ ಕಾರಣ ಇಳುವರಿ ಕಡಿಮೆಯಾಗಿದೆ. ಬಿಸಿಲು ಹೆಚ್ಚಾಗಿ, ಗಿಡಗಳು ಬಾಡಿ ಹೋಗುತ್ತಿವೆ.
ಮೇ ತಿಂಗಳಿನಲ್ಲಿ ಬಂದ ಅಕಾಲಿಕ‌ ಮಳೆಯಿಂದ ಗಿಡದಲ್ಲಿದ್ದ ಹೂವು ಉದುರಿ ಹೋಗಿದೆ. ಕೆಲ ಗಿಡಗಳು ರೋಗ ಬಂದು ಸತ್ತು ಹೋಗಿವೆ. ಇದೀಗ ಸರಿಯಾದ ಮಳೆ ಇಲ್ಲದೆ, ಗಿಡ ಬಾಡಿದ್ದು ಇಳುವರಿ ಕುಸಿತವಾಗಿದೆ ಎಂದು ಚನ್ನಪಟ್ಟಣದ ರೈತರೊಬ್ಬರು ದಿಗ್ವಿಜಯ ನ್ಯೂಸ್​ನೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 14 =
Remember me
