ಬೆಂಗಳೂರು:ರಾಜಧಾನಿ ಬೆಂಗಳೂರು ನಾಳೆ ಬಂದ್ ಆಗಿರಲಿದೆ. ಅರ್ಥಾತ್, ಆಟೋ, ಕ್ಯಾಬ್, ಶಾಲಾ ವಾಹನ, ಖಾಸಗಿ ಬಸ್​ ಸೇರಿದಂತೆ ಖಾಸಗಿ ವಾಣಿಜ್ಯ ವಾಹನಗಳ ಸಂಚಾರ ಇರುವುದಿಲ್ಲ. ಈ ಬಂದ್​ಗೆ ಬೆಂಬಲ ಸೂಚಿಸಿರುವ ಸಂಘಟನೆಗಳ ಸಂಖ್ಯೆ ಹೆಚ್ಚಳಗೊಂಡಿರುವುದರಿಂದ ಬಂದ್​ ತೀವ್ರವಾಗಿರುವ ಲಕ್ಷಣಗಳು ಗೋಚರಿಸಿವೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆ 32 ವಾಹನ ಸಂಘಟನೆಗಳವರು ಬಂದ್​ಗೆ ಮುಂದಾಗಿದ್ದು, ಇಂದು ಮತ್ತಷ್ಟು ಸಂಘಟನೆಗಳು ಬಂದ್​ಗೆ ಕೈಜೋಡಿಸಿದ್ದು, ಒಟ್ಟು 37 ಸಂಘಟನೆಗಳು ಜೊತೆಯಾಗಿ ಪ್ರತಿಭಟನೆ ನಡೆಸಲಿವೆ.
ಹೀಗಾಗಿ ನಾಳೆ ರಾಜಧಾನಿ ಬೆಂಗಳೂರಿನಲ್ಲಿ 12 ಲಕ್ಷಕ್ಕೂ ಅಧಿಕ ಖಾಸಗಿ ವಾಹನಗಳ ಸಂಚಾರ ಸ್ತಬ್ಧವಾಗಲಿದೆ. ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶಗೊಂಡು ಸಭೆ ನಡೆಸಲಿದ್ದೇವೆ ಎಂದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್‌ ಶರ್ಮಾ ಹೇಳಿಕೆ ನೀಡಿದ್ದಾರೆ.
ಪರಿಣಾಮವಾಗಿ ಆಟೋ-ಕ್ಯಾಬ್ ಸೇರಿದಂತೆ ಖಾಸಗಿ ವಾಣಿಜ್ಯ ವಾಹನಗಳ ಲಭ್ಯತೆ ನಾಳೆ ತೀರಾ ವಿರಳವಾಗಿರುವುದರಿಂದ ಅವುಗಳನ್ನೇ ನೆಚ್ಚಿಕೊಂಡು ಮನೆಯಿಂದ ಹೊರಡುವವರು ಒಮ್ಮೆ ಯೋಚಿಸುವುದು ಒಳ್ಳೆಯದು.
ಕೂದಲಿನ ಕಾರಣಕ್ಕೇ ಸುದ್ದಿಯಾದ ಅಮ್ಮ-ಮಗ; ಶಾಲೆಯಲ್ಲೂ ಪ್ರವೇಶಕ್ಕೆ ಆಕ್ಷೇಪ!

‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven − one =
Remember me
