ಬೆಂಗಳೂರು:ನಾಳೆ ಬೆಳಗ್ಗೆ 11.30ಕ್ಕೆ ಎಲ್ಲ ವಿದ್ಯಾರ್ಥಿಗಳ ಮೊಬೈಲ್​ಗೆ ಎಸ್​ಎಂಎಸ್​ ಮುಖಾಂತರ ಫಲಿತಾಂಶ ರವಾನೆಯಾಗಲಿದೆ. ಮಧ್ಯಾಹ್ನ 12 ಗಂಟೆಯ ನಂತರ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ರಿಸಲ್ಟ್​ ವೀಕ್ಷಿಸಬಹುದು.
ಈ ಬಗ್ಗೆ ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿದ ಸಚಿವ ಸುರೇಶ್​ ಕುಮಾರ್, ನಾಳೆ ಮಧ್ಯಾಹ್ನ 12 ಗಂಟೆ ನಂತರ ಇಲಾಖೆ ವೆಬ್​ಸೈಟ್​ www.karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿರಿಇಡೀ ರಾಜ್ಯ ಲಾಕ್​ಡೌನ್​?
ಕಳೆದ ಮಾರ್ಚ್​ 4ರಿಂದ 21ನೇ ತಾರೀಖಿನವರೆಗೂ ದ್ವೀತಿಯ ಪಿಯು ಎಕ್ಸಾಂ ನಡೆದಿತ್ತು. ಮಾರ್ಚ್ 23ರಂದು ಕೊನೆಯದಾಗಿ ಇಂಗ್ಲಿಷ್​ ಪರೀಕ್ಷೆ ನಡೆಯಬೇಕಿತ್ತು. ಅಷ್ಟರಲ್ಲಿ ಕರೊನಾ ಭೀತಿ ಆವರಿಸಿದ್ದರಿಂದ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಕಳೆದ ತಿಂಗಳು ಅಂದರೆ ಜೂನ್​ 18ರಂದು ಇಂಗ್ಲಿಷ್​ ಎಕ್ಸಾಂ ನಡೆದಿತ್ತು.
ಇದಾದ ಬಳಿಕ ಫಲಿತಾಂಶ ಯಾವಾಗ ಎಂಬ ಪ್ರಶ್ನೆ ಪದೇಪದೆ ಉದ್ಭವಿಸುತ್ತಲೇ ಇತ್ತು. ಜುಲೈ 20ರೊಳಗೆ ರಿಸಲ್ಟ್ ಬರಲಿದೆ ಎಂದು ಸಚಿವ ಸುರೇಶ್​ ಕುಮಾರ್​ ಇತ್ತೀಚಿಗಷ್ಟೇ ಹೇಳಿದ್ದರು. ಇಂದು ಅಧಿಕೃತವಾಗಿ ದಿನಾಂಕ ಘೋಷಿಸಿದ ಸಚಿವರು ನಾಳೆಯೇ ಫಲಿತಾಂಶ ಪ್ರಕಟ ಆಗಲಿದೆ ಎಂದು ತಿಳಿಸಿದ್ದಾರೆ. ಸುಮಾರು 6.75 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ನಾಳೆ ಹೊರಬೀಳಲಿದೆ.
https://www.facebook.com/VVani4U/videos/3565959510082243/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eleven =
Remember me
